ಮೈಸೂರು: ಹರಿದಾಸ ಸಂಗೀತ ಸಾಹಿತ್ಯೋತ್ಸವ ಸಮಿತಿ ವತಿಯಿಂದ ಮಧ್ವ-ಪುರಂದರ ನಮನ ‘ಸುಮರ್ಧವ- ವಿಜಯ ಎಕ್ಸ್‌ಪ್ರೆಸ್’ ಗಾನಸಿರಿ ವೇದಾಂತ ಲಹರಿ ಭಾಗ-11 ಕಾರ್ಯಕ್ರಮವನ್ನು ಫೆ.18 ರಿಂದ 25 ರವರೆಗೆ ಕೃಷ್ಣಮೂರ್ತಿಪುರಂನ ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ ಆಯೋಜಿಸಲಾಗಿದೆ.
ಪ್ರತಿದಿನ ಸಂಜೆ 5 ರಿಂದ 8.30 ರವರೆಗೆ ಪ್ರಸಿದ್ಧ ವಿದ್ವಾಂಸರಿಂದ ವಿನೂತನ ರೀತಿಯಲ್ಲಿ ವಿಶ್ಲೇಷಣೆ(ಪಾಜಕ ಕ್ಷೇತ್ರದಿಂದ-ಬದರಿನಾರಾಯಣ ಸನ್ನಿಧಾನ), ಪ್ರಖ್ಯಾತ ಗಾಯಕರಿಂದ ವಿಶಿಷ್ಟವಾದ ಕೀರ್ತನೆಗಳ ಗಾಯನ ಹಾಗೂ ಯುವ ಪ್ರತಿಭಾವಂತ ವಿದ್ವಾಂಸರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಪ್ರತಿದಿನ ಸಂಜೆ 5 ರಿಂದ 5.30ರವರೆಗೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
18 ರಂದು ಪಂ.ಪ್ರವೀಣಾಚಾರ್ಯ ಹುನಗುಂದ ಅವರಿಂದ ‘ಸುಮಧ್ವವಿಜಯ 1 ಮತ್ತು 2ನೇ ಸರ್ಗಗಳ ವಿಶ್ಲೇಷಣೆ ಹಾಗೂ ವಿದ್ವಾನ್ ರಮೇಶ್ ಕುಲಕರ್ಣಿ ಅವರಿಂದ ‘ಗಾಯನ’ ನಡೆಯಲಿದೆ. 19 ರಂದು ಪಂ.ಬ್ರಹ್ಮಣ್ಯಾಚಾರ್ಯ ಅವರಿಂದ ‘ಸುಮಧ್ವವಿಜಯ 3 ಮತ್ತು 4ನೇ ಸರ್ಗಗಳ ವಿಶ್ಲೇಷಣೆ’ ಹಾಗೂ ವಿದ್ವಾನ್ ಅನಂತ ಕುಲಕರ್ಣಿ ಅವರಿಂದ ಗಾಯನ ಕಾರ್ಯಕ್ರಮ ನಡೆಯಲಿದೆ.
20 ರಂದು ಪಂ.ನರಸಿಂಹಾಚಾರ್ಯ ಗೋರೆ ಅವರಿಂದ ‘ಸುಮಧ್ವವಿಜಯ 5 ಮತ್ತು 6ನೇ ಸರ್ಗಗಳ ವಿಶ್ಲೇಷಣೆ’ ಹಾಗೂ ವಿದ್ವಾನ್ ಆಶೀಷ್ ನಾಯಕ್, ವಿದುಷಿ ಚಂದನಾ ಮುರಳೀಧರ ಅವರಿಂದ ಗಾಯನ, 21 ರಂದು ಪಂ. ಪವಮಾನಾಚಾರ್ಯ ಕಲ್ಲಾಪುರ ಅವರಿಂದ ‘ಸುಮಧ್ವವಿಜಯ 7 ಮತ್ತು 8ನೇ ಸರ್ಗಗಳ ವಿಶ್ಲೇಷಣೆ’ ಹಾಗೂ ವಿದುಷಿ ಶುಭಾ ಸಂತೋಷ್ ಅವರಿಂದ ಗಾಯನ, 22 ರಂದು ಪಂ.ಪ್ರಮೋದಾಚಾರ್ಯ ಪೂಜಾರ್ ಅವರಿಂದ ‘ಸುಮಧ್ವವಿಜಯ 9 ಮತ್ತು 10ನೇ ಸರ್ಗಗಳ ವಿಶ್ಲೇಷಣೆ’ ಹಾಗೂ ವಿದ್ವಾನ್ ಸುಹ್ರುತ್‌ರಾವ್ ಹಾಗೂ ವಿದುಷಿ ಅನುಕೃಪ ರೌಡೂರ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.
23 ರಂದು ಪಂ.ಎಸ್.ಕೆ.ಕೃಷ್ಣಾಚಾರ್ಯ ಅವರಿಂದ ‘ಸುಮಧ್ವವಿಜಯ 11 ಮತ್ತು 12ನೇ ಸರ್ಗಗಳ ವಿಶ್ಲೇಷಣೆ’ ಹಾಗೂ ಕಲಾಶ್ರೀ ಡಾ.ಮುದ್ದುಮೋಹನ್ ಅವರಿಂದ ಗಾಯನ, 24 ರಂದು ಪಂ.ಪುರಂದರಾಚಾರ್ಯ ಹಯಗ್ರೀವ ಅವರಿಂದ ‘ಸುಮಧ್ವವಿಜಯ 13 ಮತ್ತು 14ನೇ ಸರ್ಗಗಳ ವಿಶ್ಲೇಷಣೆ’ ಹಾಗೂ ವಿದ್ವಾನ್ ರಾಯಚೂರು ಶೇಷಗಿರಿದಾಸ್ ಅವರಿಂದ ಗಾಯನ, 25 ರಂದು ಪಂ.ಭೀಮಸೇನಾಚಾರ್ಯ ಆತನೂರು ಅವರಿಂದ ‘ಸುಮಧ್ವವಿಜಯ 15 ಮತ್ತು 16 ನೇ ಸರ್ಗಗಳ ವಿಶ್ಲೇಷಣೆ ಹಾಗೂ ವಿದ್ವಾನ್ ಅನಂತರಾಜ್ ಮಿಸ್ತ್ರಿ ಅವರಿಂದ ಗಾಯನ ನಡೆಯಲಿದೆ.