ಜಿಲ್ಲೆ

ಹಿಂದುಳಿದವರ ಕಲ್ಯಾಣ ಕಾರ್ಯಕ್ರಮಗಳ ರದ್ದುಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಒಬಿಸಿ ಉಪಾಧ್ಯಕ್ಷ ತಳವಾರ ಆಕ್ರೋಶ

ಬಾಬುರಾವ ಯಡ್ರಾಮಿ

ಅರಸು ನಿಗಮಕ್ಕೆ ಅನುದಾನವೇ ಕೊಟ್ಟಿಲ್ಲ ತಳವಾರ ಆರೋಪ |
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಅಹಿಂದ ನಾಯಕ, ಹಿಂದುಳಿದವರ ಪರ ಎಂದು ಹೇಳಿಕೊಳ್ಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ನಿಲ್ಲಿಸಿದ್ದಾರೆ. ದೇವರಾಜ ಅರಸು ನಿಗಮಕ್ಕೆ ಇದುವರೆಗೂ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ ಎಂದು ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶರಣಪ್ಪ ತಳವಾರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಪಕ್ಷದ ಮುಖಂಡರ ಜತೆಗೂಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇವರಾಜ ಅರಸು ನಿಗಮದಿಂದ ವಿವಿಧ ಯೋಜನೆಗಳಿಗೆ ಇದುವರೆಗೂ ಅರ್ಜಿ ಆಹ್ವಾನಿಸುತ್ತಿಲ್ಲ. ಅಷ್ಟೆ ಅಲ್ಲ ಹಿಂದುಳಿದ ವರ್ಗದ ಶ್ರೇಯೋಭಿವೃದ್ಧಿಗಾಗಿ ಹಿಂದಿನ ಬಿಜೆಪಿ ಸರ್ಕಾರವು ಅಸ್ತಿತ್ವಕ್ಕೆ ತಂದ ಯಾವ ನಿಗಮಗಳಿಗೂ ಹಣ ನೀಡುತ್ತಿಲ್ಲ. ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳುತ್ತಿಲ್ಲ. ಅಂತಹ ಸಿಎಂ ಹೇಗೆ ಹಿಂದುಳಿದ ವರ್ಗಗಳ ನಾಯಕರಾಗುತ್ತಾರೆ ಎಂದು ಖಾರವಾಗಿ ಪ್ರಶಿಸಿದರು. ಅರಸು ಅವರ ಹೆಸರು ಹೇಳಲು ಸಹ ಅವರಿಗೆ ಅರ್ಹತೆ ಇಲ್ಲ ಎಂದು ಕಿಡಿಕಾರಿದರು.
ಅಂಬಿಗರ ಚೌಡಯ್ಯ, ಮರಾಠಾ, ವಿಶ್ವಕರ್ಮ, ನಾರಾಯಣಗುರು ಸೇರಿದಂತೆ ಎಲ್ಲ ಸಮುದಾಯಗಳ ನಿಗಮಗಳನ್ನು ಕಾಂಗ್ರೆಸ್ ಸರ್ಕಾರ ಕಡೆಗಣಿಸುತ್ತಿದೆ. ಹಿಂದುಳಿದವರ ಹೆಸರಿನಲ್ಲಿ ರಾಜಕೀಯ ಮಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದುಳಿದವರ ವಿರೋಧಿಯಾಗಿದ್ದಾರೆ ಎಂದು ಟೀಕಿಸಿದರು.
 ಹಿಂದುಳಿದ ವರ್ಗಗಳ ಹೆಸರಿನಲ್ಲಿ  ಅಧಿಕಾರಕ್ಕೆ ಬಂದಿರುವ ಮತ್ತು ಅದೇ ಹೆಸರಿನಲ್ಲಿ ರಾಜಕಾರಣ ಮಾಡುವ  ಕಾಂಗ್ರೆಸ್ ಮತ್ತು ಸಿಎಂ ಸಿದ್ದರಾಮಯ್ಯ ಅವರು ಪರೋP್ಷÀವಾಗಿ ಹಿಂದುಳಿದ ವರ್ಗದವರನ್ನು ಮೂಲೆಗುಂಪು ಮಾಡಲು ಕುತಂತ್ರ ನಡೆಸಿರುವಂತಿದೆ. ಅರಸು ಮಾದರಿಯಲ್ಲಿಯೇ ಆಡಳಿತ ನಡೆಸುವುದಾಗಿ ಹೇಳುವ ಸಿ.ಎಂ. ಸಿದ್ದರಾಮಯ್ಯನವರು ಹಿಂದುಳಿದ ವರ್ಗಗಳನ್ನು ಕಡೆಗಣಿಸುತ್ತಿದ್ದಾರೆ. ರೈತ, ನೇಕಾರ ಮಕ್ಕಳಿಗೆ ನೀಡಲಾಗುತ್ತಿದ್ದ ವಿದ್ಯಾರ್ಥಿ ವೇತನವನ್ನು ಸಹ  ಕೈಬಿಟ್ಟಿದ್ದು ನೋಡಿದಾಗ ಈ ಸರ್ಕಾರ ಹಿಂದುಳಿದವರಿಗೆ ದ್ರೋಹ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಹಿಂದುಳಿದ ಕಲ್ಯಾಣ ಮಾಡುವುದು ಬಿಟ್ಟು, ಎಲ್ಲ ಅನುದಾನ ಗ್ಯಾರಂಟಿ ಯೋಜನೆಗೆ ಬಳಸಿಕೊಳ್ಳಲಾಗುತ್ತಿದೆ. ರಾಜ್ಯ ಸರ್ಕಾರ ಆರ್ಥಿಕ ದಿವಾಳಿಯಾಗಿದೆ. ಹೀಗಾಗಿಯೇ ಯಾವ ಹೊಸ ಯೋಜನೆಗಳನ್ನು ಆರಂಭಿಸುತ್ತಿಲ್ಲ ಎಂದು ತಳವಾರ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಹಾನಗರ  ಜಿ¯್ಲÁಧ್ಯP್ಷÀ ಸಿದ್ಧಾಜಿ ಪಾಟೀಲï, ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷೆ ಶೋಭಾ ಬಾಣಿ, ಮುಖಂಡರಾದ ಅವ್ವಣ್ಣ ಮ್ಯಾಕೇರಿ,  ಅರವಿಂದ ಪೋz್ದÁರ, ಅಮೃತ ಡಿಗ್ಗಿ, ಪ್ರಮೋದ ಮಾಳೆ,  ಬೀರಣ್ಣ ಕಲ್ಲೂರ, ವಿದ್ಯಾಧರ ಮಂಗಳೂರೆ ಮೊದಲಾದವರಿದ್ದರು.