ರಾಮದುರ್ಗ: ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ಬುಧವಾರ ತಹಸೀಲ್ದಾರ್ ಅಧ್ಯತೆಯಲ್ಲಿ ಅರಣ್ಯಾಧಿಕಾರಿಗಳು, ರೈತ ಸಂಟನೆಗಳ ಮುಖಂಡರು ಮತ್ತು ಓಬಳಾಪುರ ಗ್ರಾಮಸ್ಥರ ಜತೆ ಸಭೆ ನಡೆಯಿತು.
ತಹಸೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಮಾತನಾಡಿ, ಅರಣ್ಯ ಒತ್ತುವರಿ ಮಾಡಿದ ಓಬಳಾಪುರ ಗ್ರಾಮಸ್ಥರಿಗೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಶಾಸಕರು ಹಾಗೂ ಸಂಬಂಧಿತ ಅಧಿಕಾರಿಗಳೊಂದಿಗೆ ಚರ್ಚಿಸಿ 15&20 ದಿನಗಳಲ್ಲಿ ಶಾಶ್ವತ ಸೂರು ಕಲ್ಪಿಸುವ ನಿಟ್ಟಿನಲ್ಲಿ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.
ನಮಗೆ ನ್ಯಾಯ ಸಿಗುವವರೆಗೆ ಹೋರಾಟ ನಿಲ್ಲುವುದಿಲ್ಲ. 20 ದಿನಗಳಲ್ಲಿ ಸೂರು ಕಲ್ಪಿಸುವ ನಿಟ್ಟಿನಲ್ಲಿ ಸಕಾರಾತ್ಮಕ ಸ್ಪಂದನೆ ದೊರೆಯದ್ದಿದ್ದಲ್ಲಿ ಮತ್ತೆ ತಹಸೀಲ್ದಾರ್ ಕಚೇರಿ ಎದುರು ರ್ನಿದಿಷ್ಟಾವಧಿ ಧರಣಿ ಸತ್ಯಾಗ್ರಹ ಮುಂದುವರಿಸಲಾಗುವುದು ಎಂದು ಓಬಳಾಪುರ ಗ್ರಾಮಸ್ಥರು ಎಚ್ಚರಿಕೆ ನೀಡಿದರು.
ವಲಯ ಅರಣ್ಯಾಧಿಕಾರಿ ಭಾಗ್ಯಶ್ರೀ ಮಸಳಿ, ರೈತ ಮುಖಂಡರಾದ ಜಗದೀಶ ದೇವರಡ್ಡಿ, ಶಿವಾನಂದ ದೊಡವಾಡ, ಡಾ. ಕೆ.ವಿ. ಪಾಟೀಲ, ಶಂಕರ ಲಮಾಣಿ, ಎಂ.ಎಸ್. ಈರನಗೌಡ್ರ, ಮಾರುತಿ ಕರಶಟ್ಟಿ, ಕಷ್ಣಗೌಡ ಪಾಟೀಲ, ಮಹಮ್ಮದಸಾಬ್ ದಾನಕಟಗಿ, ಅಡಿವೆಪ್ಪ ದ್ಯಾಮನ್ನವರ, ಕಷ್ಣ ಚೌಹಾಣ, ಸೋಮನಗೌಡ ವೀರನಗೌಡ್ರ, ನಿಂಗಪ್ಪ ಯಂಡಿಗೇರಿ, ಶಂಕ್ರಪ್ಪ ಕಿತ್ತೂರ, ನೂರಸಾಬ್ ಕಟಕೋಳ, ಬಸವರಾಜ ಬಂಡಿವಡ್ಡರ, ಈರಣ್ಣ ಮಾತನವರ, ಚಂದ್ರು ಬೆಳವಡಿ, ಶಿವಪ್ಪ ಕರಡಿಗುಡ್ಡ, ಬಸವಂತಪ್ಪ ಹೊಳೆಯನ್ನವರ ಇತರರಿದ್ದರು.