:ಹರಪನಹಳ್ಳಿಯಲ್ಲಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ಹಾಗೂ ಎಸ್ಸಿ, ಎಸ್ಟಿ ಅಲೆಮಾರಿ ಬುಡಕಟ್ಟು ಮಹಾಸಭಾದಿಂದ ನ್ಯಾ.ಸದಾಶಿವ ಆಯೋಗದ ವರದಿ ವಿರೋಧಿಸಿ ತಹಸೀಲ್ದಾರ್ ಶಿವಕುಮಾರ ಬಿರಾದಾರ್‌ಗೆ ಮನವಿ ಸಲ್ಲಿಸಲಾಯಿತು. ಪ್ರಮುಖರಾದ ವಿ.ಸಣ್ಣ ಅಜ್ಜಯ್ಯ, ಎಂ.ಪಿ.ನಾಯ್ಕ, ಮಂಜ್ಯನಾಯ್ಕ, ಗುರುಸಿದ್ದಪ್ಪ, ಅಶೋಕ, ಬಿ.ವೈ.ವೆಂಕಟೇಶ್ ಇತರರಿದ್ದರು. 
ಜಿಲ್ಲೆ

ನ್ಯಾ. ಸದಾಶಿವ ಆಯೋಗದ ವರದಿ ಶಿಫಾರಸು ಬೇಡ

Gangavati - Desk - Veeresh S Ullagaddi

ಹರಪನಹಳ್ಳಿ: ರಾಜ್ಯ ಸರ್ಕಾರ ನ್ಯಾ. ಸದಾಶಿವ ಆಯೋಗದ ವರದಿಯಂತೆ ಪರಿಶಿಷ್ಟ ಜಾತಿಗಳ ವರ್ಗೀಕರಣ (ಒಳ ಮೀಸಲಾತಿ) ಹಂಚಿಕೆ ನಿರ್ಣಯ ಕೇಂದ್ರ ಸರ್ಕಾರಕ್ಕೆ ಶಿಫಾರಸು ವಿರೋಧಿಸಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ಹಾಗೂ ಎಸ್ಸಿ, ಎಸ್ಟಿ ಅಲೆಮಾರಿ ಬುಡಕಟ್ಟು ಮಹಾಸಭಾದಿಂದ ಶನಿವಾರ ಪ್ರವಾಸಿ ಮಂದಿರ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಶಿವಕುಮಾರ ಬಿರಾದಾರ್‌ಗೆ ಮನವಿ ಸಲ್ಲಿಸಲಾಯಿತ ಸಲಾಯಿತು

ರಾಜ್ಯ ಸರ್ಕಾರದ ವಿರುದ್ಧ ಘೋಷಣೆ

ಮೀಸಲಾತಿಯಿಂದ ವಂಚಿತರಾಗಿರುವ ಭೋವಿ, ಲಂಬಾಣಿ, ಕೋರಚ, ಕೊರಮ, ಅರೆಮಾರಿ ಸೇರಿ ಅನೇಕ ಸಮುದಾಯದ ಯುವಕರು, ಕೂಲಿ ಕಾರ್ಮಿಕರು, ನೂರಾರು ಸಂಖ್ಯೆಯಲ್ಲಿ ಭಾಗವಹಿಸಿ ನ್ಯಾ.ಸದಾಶಿವ ಆಯೋಗದ ವರದಿಯ ಶಿಫಾರಸು ವಿರೋಧಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ನಿರ್ಧಾರ ಕೈ ಬಿಡಬೇಕು

ಆರ್ಥಿಕ, ಶೈಕ್ಷಣಿಕ, ರಾಜಕೀಯವಾಗಿ ಹಿಂದುಳಿದಿರುವ ಸಮುದಾಯಗಳನ್ನು ಕಡೆಗಣಿಸಿ ಒಳ ಮೀಸಲಾತಿಯನ್ನು ವರ್ಗೀಕರಣ ಮಾಡಿರುವುದು ಖಂಡನೀಯ. ಇಂತಹ ಅಸಂವಿಧಾನಿಕ ವರದಿಯಿಂದ ಸಮುದಾಯಗಳ ಮಧ್ಯೆ ತಂತ್ರ ಮತ್ತು ಕುತಂತ್ರದಿಂದ ಒಳ ಮೀಸಲಾತಿ ವಿಭಜಿಸಿರುವುದು ಸರಿಯಲ್ಲ. ಕೂಡಲೇ ರಾಜ್ಯ ಸರ್ಕಾರ ಈ ನಿರ್ಧಾರವನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದರು.

ಬಂಜಾರ ಸಮುದಾಯದ ಎಂ.ಪಿ.ನಾಯ್ಕ, ಕೊರಚ ಸಮುದಾಯದ ಅಶೋಕ, ಭೋವಿ ಸಮುದಾಯದ ಬೆಂಡಿಗೇರಿ ಗುರುಸಿದ್ದಪ್ಪ, ಎಸ್ಸಿ, ಎಸ್ಟಿ ಅಲೆಮಾರಿ ಬುಡಕಟ್ಟು ಮಹಾಸಭಾದ ಕಾರ್ಯದರ್ಶಿ ವಿ.ಸಣ್ಣ ಅಜ್ಜಯ್ಯ, ಪ್ರಮುಖರಾದ ಮೂರ್ತಿ, ನಾಗರಾಜ್, ಎಸ್.ಪಿ.ಲಿಂಬ್ಯಾನಾಯ್ಕ, ಬಿ.ವೈ.ವೆಂಕಟೇಶ್, ಮಂಜ್ಯಾನಾಯ್ಕ, ಎಂ.ವಿ.ಕೃಷ್ಣಕಾಂತ್, ಗೋಪಿನಾಯ್ಕ, ನಾಗರಾಜ್ ನಾಯ್ಕ, ಹರೀಶ್ ನಾಯ್ಕ ಇತರರಿದ್ದರು.