ಜಿಲ್ಲೆ

ಒಂದೇ ಬೇಲೆ ಟಿಕೆಟ್‌ ಬೆಲೆ ಮಾತ್ರ ಹೆಚ್ಚು!!

Uttara Kannada - Subash Hegde

ಕಾರವಾರ: ಒಂದೇ ಮಾರ್ಗದಲ್ಲಿ ಓಡಾಡುವ ಎನ್‌ಡಬ್ಲುಕೆಆರ್‌ಟಿಸಿ ಬಸ್‌ಗಳಿಗೆ ಬೇರೆ ಬೇರೆ ಟಿಕೆಟ್ ದರ ಆಕರಣೆ ಮಾಡುತ್ತಿರುವುದು ಗೊತ್ತಾಗಿದ್ದು, ಅದನ್ನು ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯ್ಕ ಖಂಡಿಸಿದ್ದು, ಸರಿಪಡಿಸುವಂತೆ ಒತ್ತಾಯಿಸಿದ್ದಾರೆ.

ಅಂಕೋಲಾದ ಬೇಲೇಕೇರಿ ತಿರುವಿನಿಂದ ಕಾರವಾರಕ್ಕೆ ಕುಮಟಾ ಮತ್ತು ಅಂಕೋಲಾ ಡಿಪೋದ ಬಸ್‌ಗಳ ಟಿಕೆಟ್ ದರಲ್ಲಿ ವ್ಯತ್ಯಾಸವಿದೆ. ಕುಮಟಾ ಡಿಪೋ ಬಸ್‌ಗಳಲ್ಲಿ 43 ರೂ. ಟಿಕೆಟ್ ನೀಡಿದರೆ, ಕಾರವಾರ ಡಿಪೋ ಬಸ್‌ಗಳಲ್ಲಿ 58 ರೂ. ಟಿಕೆಟ್ ನೀಡಲಾಗುತ್ತಿದೆ.

ಬೇಲೆಕೇರಿ ಕ್ರಾಸ್‌ನಿಂದ ಅವರ್ಸಾಕ್ಕೆ ಕುಮಟಾ ಡಿಪೋದ ಬಸ್‌ಗಳಲ್ಲಿ 20 ರೂ. ಕಾರವಾರ ಡಿಪೋದ ಬಸ್‌ಗಳಲ್ಲಿ 35 ರೂ. ಟಿಕೆಟ್ ನೀಡಲಾಗುತ್ತಿದೆ. ಎಂದರೆ 15 ರೂ. ವ್ಯತ್ಯಾಸವಿದೆ. ಈ ರೀತಿ ಮಾಡುವ ಮೂಲಕ ಪ್ರಯಾಣಿಕರನ್ನು ಲೂಟಿ ಮಾಡಲಾಗುತ್ತಿದೆ. ಇಲ್ಲಿ ಸಾಕಷ್ಟು ಕಾರ್ಮಿಕರು ಓಡಾಡುತ್ತಿದ್ದು, ಕ್ರಮ ವಹಿಸಬೇಕು ಎಂದು ಮಾಧವ ನಾಯ್ಕ ಒತ್ತಾಯಿಸಿದ್ದಾರೆ. ಡಿಪೋ ವ್ಯವಸ್ಥಾಪಕರು ಹಾಗೂ ಶಿರಸಿ ವಿಭಾಗೀಯ ನಿಯಂತ್ರಣಾಽಕಾರಿಗಳ ಗಮನಕ್ಕೂ ತಂದಿರುವುದಾಗಿ ತಿಳಿಸಿದ್ದಾರೆ.