ಹುಬ್ಬಳ್ಳಿ: ಇಲ್ಲಿಯ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ 79ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ. ಧ್ವಜಾರೋಹಣ ನೆರವೇರಿಸಿದರು.
ಬಸ್ ಗಳಲ್ಲಿ ಪ್ರಯಾಣಿಕರು ಬಿಟ್ಟು ಹೋಗಿದ್ದ ಬೆಲೆ ಬಾಳುವ ವಸ್ತುಗಳು, ಶೈಕ್ಷಣಿಕ ದಾಖಲಾತಿಗಳು ಹಾಗೂ ಇತರೆ ಸರಕುಗಳನ್ನು ಕರ್ತವ್ಯಪ್ರಜ್ಞೆಯೊಂದಿಗೆ ಪ್ರಮಾಣಿಕವಾಗಿ ಹಿಂದಿರುಗಿಸಿದ ಚಾಲಕ, ನಿರ್ವಾಹಕರಿಗೆ ಅಭಿನಂದಿಸಿದರು.
ಪ್ರಾಮಾಣಿಕತೆ ಮೆರೆದ 31 ಸಿಬ್ಬಂದಿಗೆ ಪ್ರಶಂಸನಾ ಪತ್ರ ನೀಡಲಾಯಿತು.
ಪ್ರಯಾಣಿಕರಿಗೆ ಅವರ ವಸ್ತುಗಳನ್ನು ವಾಪಸ್ ನೀಡುವ ಮೂಲಕ ಸಂಸ್ಥೆಯ ಘನತೆ ಹಾಗೂ ಗೌರವವನ್ನು ಎತ್ತರಕ್ಕೆ ಕೊಂಡೊಯ್ದಂತಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಎಸ್ ಬಿಐ, ಕೆನರಾ ಬ್ಯಾಂಕಿನಲ್ಲಿ ವೇತನ ಖಾತೆ ಹೊಂದಿದ 7 ಜನ ನೌಕರರು ಮೃತಪಟ್ಟ ಹಿನ್ನೆಲೆಯಲ್ಲಿ ಅವರ ಅವಲಂಬಿತರಿಗೆ ಪರಿಹಾರ ಚೆಕ್ ವಿತರಿಸಲಾಯಿತು.
1 ಕೋಟಿ ರೂ. ಮೊತ್ತದ ವೈಯಕ್ತಿಕ ಅಪಘಾತ ವಿಮಾ ಯೋಜನೆಗೆ ಬ್ಯಾಂಕ್ ಆಫ್ ಬರೋಡ ಜೊತೆ ಒಡಂಬಡಿಕೆ ಮಾಡಿ ಕೊಳ್ಳಲಾಯಿತು.
ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಪಿ.ಆರ್. ಕಿರಣಗಿ ಮಾತನಾಡಿದರು.
ಅಧಿಕಾರಿಗಳಾದ ಗಣೇಶ ರಾಠೋಡ, ಬಿ. ಬೋರಯ್ಯ, ಇಮಾಮಕಾಸೀಮ್ ಕಂದಗಲ್, ಶಶಿಧರ ಕುಂಬಾರ, ಜಿ. ಶ್ರೀನಾಥ, ಎಸ್.ವಿ. ಅಂಗಡಿ, ಎಂ.ಬಿ. ಕಪಲಿ, ಸುನೀಲ್ ಎಂ., ಸುಮನಾ ಯು, ರವಿ ಅಂಚಿಗಾವಿ, ನವೀನಕುಮಾರ ತಿಪ್ಪಾ, ದಯಾನಂದ ಪಾಟೀಲ್, ಎಂ.ಡಿ. ಸುಂಕದ, ಹನುಮನಗೌಡ, ವಿ. ಶ್ರೀಹರಿ, ರಮೇಶ ನಾಯಕ್ ಧನವತ, ಸುಮಾ ಜಿ.ಕೆ., ಮುಖಂಡ ಆರ್.ಎಫ್. ಕವಳಿಕಾಯಿ ಉಪಸ್ಥಿತರಿದ್ದರು.
ಮುಖ್ಯ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ ಪಿ.ವೈ. ನಾಯಕ ಸ್ವಾಗತಿಸಿದರು. ಸುನೀಲ ಪತ್ರಿ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಸಂಚಾರ ವ್ಯವಸ್ಥಾಪಕ ವಿವೇಕಾನಂದ ವಿಶ್ವಜ್ಞ ವಂದಿಸಿದರು.