ಫಸಲಿಗೆ ಬಂದಿದ್ದ ಅಡಕೆ ಮರವನ್ನು ಸಂಪೂರ್ಣವಾಗಿ ಹಾನಿಗೊಳಿಸಿರುವ ಕಾಡಾನೆಗಳು. 
ಜಿಲ್ಲೆ

ಕಾಡಾನೆಗಳ ದಾಳಿಗೆ ಅಡಕೆ, ಕಾಫಿ ಗಿಡಗಳು ನಾಶ

ರವಿಕುಮಾರ್ ಪಿ. ಕೆ

ಸಿದ್ದಾಪುರ: ಕರಡಿಗೋಡಿನ ಕುಕ್ಕನೂರು ಕುಸುಮಾವತಿ ಹಾಗೂ ಸೂರಜ್ ಎಂಬುವರ ತೋಟಕ್ಕೆ ಬುಧವಾರ ರಾತ್ರಿ ನುಗ್ಗಿದ ಕಾಡಾನೆಗಳ ಹಿಂಡು ಕಾಫಿ ಗಿಡಗಳು ಹಾಗೂ ಫಸಲಿಗೆ ಬಂದಿದ್ದ ಅಡಕೆ ಮರಗಳನ್ನು ನಾಶಪಡಿಸಿದೆ.

ಬುಧವಾರ ರಾತ್ರಿ 7.30ಕ್ಕೆ ಕರಡಿಗೋಡು ಸರ್ಕಾರಿ ಶಾಲೆಯ ಸಮೀಪ 20ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ರಸ್ತೆ ಮೂಲಕ ಪಕ್ಕದ ಕಾಫಿ ತೋಟದೊಳಗೆ ಪ್ರವೇಶಿಸಿದೆ. ಈ ಸಂದರ್ಭ ಇದೇ ಮಾರ್ಗವಾಗಿ ಸಂಚರಿಸುತ್ತಿದ್ದ ವಾಹನ ಸವಾರರು ಕಾಡಾನೆಗಳ ಹಿಂಡನ್ನು ಕಂಡು ಭಯಭೀತರಾಗಿದ್ದಾರೆ.

ಫಸಲು ಬಂದಿರುವ ಗಿಡಗಳನ್ನು ಹಾನಿ ಮಾಡಿರುವುದಲ್ಲದೆ ಕಾಡಾನೆಗಳ ಭಯದಿಂದ ಕಾರ್ಮಿಕರು ಕೆಲಸಕ್ಕೂ ತೆರಳದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಡಾನೆಗಳನ್ನು ಕಾಡಿಗೆ ಅಟ್ಟುವುದರ ಜತೆಗೆ ಪರಿಹಾರ ಒದಗಿಸುವಂತೆ ತೋಟದ ಮಾಲೀಕರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.