ಮೈಸೂರು: ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ (ಆರ್‌ಎಲ್‌ಎಚ್‌ಪಿ) ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಗುರುವಾರ ತಾಲೂಕಿನ ಎಂ.ಸಿ.ಹುಂಡಿ ಗ್ರಾಮದಲ್ಲಿ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮ ನೆರವೇರಿತು.
ಸಂಸ್ಥೆಯ ಸಂಯೋಜಕ ಎಸ್.ಶಶಿಕುಮಾರ್ ಮಾತನಾಡಿ, ಅಪೌಷ್ಟಿಕತೆಯನ್ನು ನಾವು ಹೋಗಲಾಡಿಸಬೇಕು. ಇಂದಿನ ದಿನದಲ್ಲಿ ಆರೋಗ್ಯ ಎನ್ನುವುದು ತುಂಬಾ ಪ್ರಮುಖವಾದದ್ದು. ಮೊಳಕೆ ಕಟ್ಟಿದ ಕಾಳುಗಳು ತಿನ್ನಿರಿ, ತಾಯಿಯರು ಮಕ್ಕಳನ್ನು ಪ್ರೀತಿಯಿಂದ ಕಾಣಬೇಕು ಎಂದರು.
ಊಟದ ಸಮಯದಲ್ಲಿ ತರಕಾರಿಗಳನ್ನು ತಿನ್ನಬೇಕು. ಇದರ ಕುರಿತು ತಾಯಿಯರು ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ತಿಳಿಸಿದರು. ಅಂಗನವಾಡಿ ಮೇಲ್ವಿಚಾರಕಿ ಶಾಂತಾ, ಗ್ರಾಮ ಪಂಚಾಯಿತಿ ಸದಸ್ಯರಾದ ವಿಜಯ್, ಶೈಲ, ಮುಖಂಡರಾದ ಅಂದಾನಿ, ವೇದಾವತಿ ಇತರರಿದ್ದರು.