ಅಳವಂಡಿ: ಮಕ್ಕಳು ಸರ್ಕಾರ ನೀಡುವ ಸೌಲಭ್ಯ ಬಳಸಿಕೊಂಡು ಕಠಿಣ ಅಭ್ಯಾಸ ಮಾಡಿ ವಿದ್ಯಾವಂತರಾಗಬೇಕು ಎಂದು ಎಸ್ಡಿಎಂಸಿ ಅಧ್ಯಕ್ಷ ಯಮನೂರಪ್ಪ ಚಿಕ್ಕಣ್ಣವರ ಹೇಳಿದರು.
ಸಮೀಪದ ಹಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಪೌಷ್ಟಿಕ ಆಹಾರ ವಿತರಣಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಸರ್ಕಾರ ಮಕ್ಕಳ ಆರೋಗ್ಯ ಸದೃಢತೆಗೆ ಹಾಲು, ಮೊಟ್ಟೆ, ಶೇಂಗಾ ಚಕ್ಕಿ, ಬಾಳೆಹಣ್ಣನ್ನು ನೀಡುತ್ತಿದೆ. ಮಕ್ಕಳು ಮನೆಯಲ್ಲಿ ತರಕಾರಿ, ಮೊಳಕೆಯೊಡೆದ ಕಾಳುಗಳುಗಳನ್ನು ಕೂಡ ಸೇವಿಸಬೇಕು. ಇವುಗಳ ಸೇವನೆಯಿಂದ ಬುದ್ಧಿ ಶಕ್ತಿ ಚುರುಕಾಗುತ್ತದೆ ಎಂದರು.
ಮುಖ್ಯ ಶಿಕ್ಷಕ ವೀರಣ್ಣ ಮಟ್ಟಿ, ಗ್ರಾಪಂ ಉಪಾಧ್ಯಕ್ಷ ನಿಂಗನಗೌಡ, ಪ್ರಮುಖರಾದ ಭರಮಪ್ಪ ನಗರ, ತೋಟಪ್ಪ ಶಿಂಟ್ರ, ನಾಗರಾಜ ಪೂಜಾರ, ಪರಶುರಾಮ ನಾಗಣ್ಣವರ,
ಶಿಕ್ಷಕರಾದ ಶುಭಮಂಗಳ, ಹಂಪವ್ವ, ಶರಾವತಿ, ಗೌತಮಿ, ನೇತ್ರಾವತಿ, ರವಿಕುಮಾರ, ಪ್ರಶಾಂತ, ಅಡುಗೆ ಸಿಬ್ಬಂದಿಗಳಾದ ರೇಣವ್ವ, ಮಹಾಲಕ್ಷ್ಮೀ, ರೇಣುಕಾ ಇದ್ದರು.