ಎನ್.ಆರ್.ಪುರದಲ್ಲಿ ಪೋಷಣ್ ಅಭಿಯಾನ ಕಾರ್ಯಕ್ರಮ ನಡೆಯಿತು. ಜೆಎಂಎಫ್‌ಸಿ ಹಿರಿಯ ಸಿವಿಲ್ ನ್ಯಾಯಾಧೀಶೆ ಭಾರತಿ ಎಸ್. ರಾಯಣ್ಣನವರ್, ಎಸ್.ಎಸ್.ಸಂತೊಷ್, ವೀರೇಶ್, ಎಚ್.ಆರ್.ವೆಂಕಟೇಶ್‌ಮೂರ್ತಿ ಇತರರಿದ್ದರು. 
ಜಿಲ್ಲೆ

ಆಹಾರ ಪದ್ಧತಿ ಬದಲಾವಣೆಯಿಂದ ಪೌಷ್ಟಿಕಾಂಶ ಕೊರತೆ

ಎಸ್.ಎನ್.ರವೀಂದ್ರ

ಎನ್.ಆರ್.ಪುರ: ಪೌಷ್ಟಿಕಾಂಶ ಕೊರತೆಗೆ ಆಹಾರ ಪದ್ಧತಿ ಕಾರಣ ಎಂದು ಜೆಎಂಎಫ್‌ಸಿ ಹಿರಿಯ ಸಿವಿಲ್ ನ್ಯಾಯಾಧೀಶೆ ಭಾರತಿ ಎಸ್. ರಾಯಣ್ಣನವರ್ ಹೇಳಿದರು.

ಸೋಷಿಯಲ್ ವೆಲ್ಫೇರ್ ಸೊಸೈಟಿಯಲ್ಲಿ ಕಾನೂನು ಸೇವಾ ಪ್ರಾಧಿಕಾರ, ಆರೋಗ್ಯ, ಸಿಡಿಪಿಒ ಇಲಾಖೆ ಆಶ್ರಯದಲ್ಲಿ ನಡೆದ ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆ, ಆಹಾರ ಬೆಳೆಗಳಿಗೆ ಹೆಚ್ಚು ರಾಸಾಯನಿಕ ಬಳಸುವುದು, ಹಣ್ಣು, ತರಕಾರಿ ಸಂಸ್ಕರಣೆಗೆ ಬಳಸುವ ವಿಧಾನ ನಮ್ಮ ಆರೋಗ್ಯಕ್ಕೆ ಮಾರಕ. ಜತೆಗೆ ಹೈಬ್ರೀಡ್ ಬೆಳೆಗಳಲ್ಲಿ ಪೌಷ್ಟಿಕಾಂಶ ಕಡಿಮೆ. ಯುವಪೀಳಿಗೆ ಹೆಚ್ಚಾಗಿ ಸಿದ್ಧ ಆಹಾರಕ್ಕೆ ಮಾರುಹೋಗಿರುವುದು ಅಪೌಷ್ಟಿಕತೆಗೆ ಕಾರಣ ಎಂದರು.
ವಕೀಲ ಎಚ್.ಆರ್.ವೆಂಕಟೇಶ್‌ಮೂರ್ತಿ ಮಾತನಾಡಿ, ಪೂರ್ವಿಕರ ಆಹಾರ ಪದ್ಧತಿಗೂ ಆಧುನಿಕ ಕಾಲದ ಪದ್ಧತಿಗೂ ಬಹಳಷ್ಟು ವ್ಯತ್ಯಾಸಗಳಿವೆ. ಈಗಿನ ಆಹಾರ ಪದ್ಧತಿ ಸರಿಪಡಿಸಿಕೊಳ್ಳದೆ ಹೋದಲ್ಲಿ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದರು.
ಸರ್ಕಾರಿ ಆಸ್ಪತ್ರೆ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ ಮಾತನಾಡಿ, ದೇಹಕ್ಕೆ ಹೆಚ್ಚು ಮಾರಕವಾಗಿರುವ ಪದಾರ್ಥಗಳಲ್ಲಿ ಸಕ್ಕರೆ ಮುಖ್ಯವಾದುದು. ಸಕ್ಕರೆ ಬಳಕೆ ಕಡಿಮೆ ಮಾಡಬೇಕು. ನೈಸರ್ಗಿಕವಾಗಿ ಸಿಗುವ ಹಣ್ಣು, ಸೊಪ್ಪು, ತರಕಾರಿ ತಿನ್ನುವುದು ಉತ್ತಮ ಎಂದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್.ಸಂತೊಷ್‌ಕುಮಾರ್, ಸೋಷಿಯಲ್ ವೆಲ್ಫೇರ್ ಸೊಸೈಟಿ ನಿರ್ದೇಶಕ ಫಾ.ಜೋಬಿಷ್, ಸಿಡಿಪಿಒ ವೀರೇಶ್, ರಾಜಕುಮಾರ್, ಸಿಡಿಪಿಒ ಇಲಾಖೆ ಮೇಲ್ವಿಚಾರಕಿಯರಾದ ದಾಕ್ಷಾಯಿಣಿಬಾಯಿ, ಕಾವ್ಯಶ್ರೀ, ನ್ಯಾಯಾಲಯದ ಸಿಬ್ಬಂದಿ ಇತರರಿದ್ದರು.