ಜಿಲ್ಲೆ

ಅಪೌಷ್ಠಿಕತೆ ಹೊಂದಿರುವ ಮಕ್ಕಳಿಗೆ ಪೌಷ್ಠಿಕ ಆಹಾರ ವಿತರಣೆ

ಪಂಕಜ ಕೆ.ಎಂ.

ಬೆಂಗಳೂರು: ನಗರದ ಮಕ್ಕಳಲ್ಲಿ ಹೆಚ್ಚುತ್ತಿರುವ ಹಸಿವು ಹಾಗೂ ಅಪೌಷ್ಠಿಕತೆ ನಿರ್ಮೂಲನೆಗಾಗಿ ಕ್ರಿಯೇಟಿಂಗ್ ್ಯೂಚರ್ಸ್ ಮತ್ತು ನರೀಶ್ 2 ಗ್ರೋ ಸಂಸ್ಥೆಗಳು ಕೈಜೋಡಿಸಿದ್ದು, ಪೌಷ್ಠಿಕತೆಯ ಕೊರತೆ ಎದುರಿಸುತ್ತಿದ್ದ 230 ಮಕ್ಕಳನ್ನು ಗುರುತಿಸಿ ಅವರಿಗೆ ಅಗತ್ಯ ಪೌಷ್ಠಿಕಾಂಶ ಒದಗಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿವೆ.

ಕ್ರಿಯೇಟಿಂಗ್ ್ಯೂಚರ್ಸ್ ಸಂಸ್ಧೆಯು, ಶಿಕ್ಷಣ ಮತ್ತು ಕೌಶಲ್ಯ ಅಭಿವೃಧ್ಧಿಯ ಮೂಲಕ ಮಕ್ಕಳನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಅದೇ ರೀತಿ ಹಿಂದುಳಿದ ವರ್ಗದ ಮಕ್ಕಳ ಹಸಿವನ್ನು ತಣಿಸುವ ಮತ್ತು ಪೌಷ್ಠಿಕಾಂಶ ಹೆಚ್ಚಿಸುವ ಉದ್ದೇಶದೊಂದಿಗೆ ನರೀಶ್ 2 ಗ್ರೋ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿದೆ. ಈ ಎರಡೂ ಸಂಸ್ಥೆಗಳು ಸೇರಿ ಅಪೌಷ್ಠಿಕತೆಯಿಂದ ಬಳಲುತ್ತಿರುವ ಆಯ್ದ ಮಕ್ಕಳಿಗೆ ಪೋಷಕಾಂಶಗಳಿಂದ ಕೂಡಿರುವ ಆಹಾರ ಪೂರೈಸುವ ಕಾರ್ಯ ಮಾಡುತ್ತಿವೆ.

ಈ ನಿಟ್ಟಿನಲ್ಲಿ ಇತ್ತೀಚಿಗೆ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಎರಡೂ ಸಂಸ್ಥೆಗಳ ವತಿಯಿಂದ ಗುರುತಿಸಲ್ಪಟ್ಟ ಸಂಸ್ಥೆಗೆ ಸಂಬಂಧಿಸಿದ ಶಾಲೆಗಳಲ್ಲಿ ಅಪೌಷ್ಠಿಕತೆ ಹೊಂದಿರುವ ಮಕ್ಕಳಿಗೆ ಪೋಷಕಾಂಶಯುಕ್ತ ಆಹಾರ ವಿತರಿಸಲಾಯಿತು.

ಕ್ರಿಯೇಟಿಂಗ್ ್ಯೂಚರ್ಸ್‌ನ ಸಂಸ್ಥಾಪಕ ಜಿಮ್ಮಿ ಚೆರಿಯನ್ ಮಾತನಾಡಿ, ಹಸಿವು ಮತ್ತು ಅಪೌಷ್ಠಿಕತೆಯ ಸಮಸ್ಯೆಗಳು ಮಕ್ಕಳ ಶಿಕ್ಷಣಕ್ಕೆ ಹಾಗೂ ಬೆಳವಣಿಗೆಗೆ ತಡೆಯಾಗದಂತೆ ನೋಡಿಕೊಳ್ಳಲು ನರೀಶ್ 2 ಗ್ರೋ ಜೊತೆಗಿನ ಸಹಯೋಗ ಉತ್ತಮ ಅವಕಾಶ ಕಲ್ಪಿಸಿದೆ. ಈ ಎರಡು ಸಂಸ್ಥೆಗಳ ಪರಿಶ್ರಮದಿಂದ ಈ ಮಕ್ಕಳಲ್ಲಿ ಗಮನಾರ್ಹ ಬದಲಾವಣೆಯನ್ನು ಕಾಣಬಹುದಾಗಿದೆ ಎಂಬ ಆಶಯ ವ್ಯಕ್ತಪಡಿಸಿದರು.