ಜಿಲ್ಲೆ

ಪೋಷಕಾಂಶಗಳ 'ಸಿರಿ' ರೈತರಿಗೆ ಲಾಭದ 'ಧಾನ್ಯ'

ಸಿರಿಧಾನ್ಯಗಳ ಬಳಕೆ, ಅವುಗಳ ಪ್ರಯೋಜನಗಳು ಮತ್ತು ರೈತರಿಗಾಗುವ ಲಾಭದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಮೇಳ ಯಶಸ್ವಿಯಾಗಿದೆ. ಕೃಷಿ ವಿಶ್ವವಿದ್ಯಾಲಯದ ಮಳಿಗೆಗಳಲ್ಲಿ ಸಿರಿಧಾನ್ಯಗಳನ್ನು ಪ್ರಚುರಪಡಿಸಿ ರೈತರು ಹೆಚ್ಚೆಚ್ಚು ರೈತರು ಬೆಳೆಯಲು ಪ್ರೋತ್ಸಾಹಿಸಲು ಯತ್ನಿಸಲಾಯಿತು.


ಅರಕ, ಊದಲು, ಸಾಮೆ, ಜೋಳ, ಕೂರಲು, ಸಜ್ಜೆ, ರಾಗಿ, ಬರಗು, ನವಣೆ ಸಿರಿಧಾನ್ಯಗಳು. ವಾಣಿಜ್ಯ ಬೆಳೆಗಳನ್ನು ಬೆಳೆಯುವತ್ತ ಚಿತ್ತ ಹರಿಸಿರುವ ರೈತರು ಮೂಲಸಂಸ್ಕೃತಿಯ ಸಿರಿಧಾನ್ಯಗಳ ಬಿತ್ತನೆಯನ್ನು ಕಡಿಮೆ ಮಾಡಿದ್ದಾರೆ. ಇವುಗಳ ಮಹತ್ವ ಸಾರಲು 2023ನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ' ಎಂದು ಘೋಷಿಸಲಾಗಿದೆ. ಮಾನವನ ಆರೋಗ್ಯ ಮತ್ತು ಹೇರಳ ಪೋಷಕಾಂಶಗಳಿರುವ ಈ ಧಾನ್ಯಗಳನ್ನು ಬೆಳೆಯಲು ಉತ್ತೇಜಿಸಲು ರಾಜ್ಯ- ಕೇಂದ್ರ ಸರ್ಕಾರಗಳು ರೈತರಿಗೆ ಸಹಾಯಧನ ನೀಡುತ್ತಿವೆ.

4 ದಿನಗಳಲ್ಲಿ 10 ಲಕ್ಷಕ್ಕೂ ಹೆಚ್ಚು ರೈತರು ಜಮಾವಣೆಗೊಳ್ಳುವ ಕೃಷಿ ಮೇಳ ಸಿರಿಧಾನ್ಯಗಳ ಪ್ರಚಾರಕ್ಕೆ ಉತ್ತಮ ವೇದಿಕೆಯಾಯಿತು. ಕೃಷಿ ವಿವಿ ಆವರಣದಲ್ಲಿ ಸಿರಿಧಾನ್ಯಗಳ ಮಹತ್ವ ಸಾರುವ ಹತ್ತಾರು ಮಳಿಗೆಗಳನ್ನು ತೆರೆಯಲಾಗಿದೆ. ಸಿರಿಧಾನ್ಯಗಳ ಉಪಯೋಗ, ಮಹತ್ವ, ಪ್ರಯೋಜನಗಳು, ಅವುಗಳನ್ನು ಬೆಳೆಯುವುದರಿಂದ ರೈತರಿಗಾಗುವ ಲಾಭಗಳನ್ನು ವಿಶ್ವವಿದ್ಯಾಲಯದ ಕೃಷಿ ತಜ್ಞರು ತಿಳಿಹೇಳುತ್ತಿದ್ದಾರೆ. ಬಳಕೆದಾರರಿಗೆ ಪೋಷಕಾಂಶಗಳಸಿರಿ'ಯಾದರೆ, ರೈತರಿಗೆ ಲಾಭದ `ಧಾನ್ಯ'ಗಳಾಗಿವೆ ಎಂಬುದನ್ನು ತಿಳಿಹೇಳಿದರು.