ಹೊನ್ನೇಕೊಪ್ಪ ಗ್ರಾಮದಲ್ಲಿ ಕಾಡಾನೆಗಳು ಅಡಕೆ ಮರಗಳನ್ನು ಮುರಿದು ನಾಶಪಡಿಸಿರುವುದು. 
ಜಿಲ್ಲೆ

ಕಾಡಾನೆಗಳ ಹಾವಳಿಗೆ ಅಡಕೆ ತೋಟ ಧ್ವಂಸ

ಎಸ್.ಎನ್.ರವೀಂದ್ರ

ಬಾಳೆಹೊನ್ನೂರು: ಖಾಂಡ್ಯ ಹೋಬಳಿ ಹೊನ್ನೇಕೊಪ್ಪ, ಅರಿಗೆ ಗ್ರಾಮದಲ್ಲಿ ಶನಿವಾರ ಮುಂಜಾನೆ ತೋಟಗಳಿಗೆ ನುಗ್ಗಿದ ಕಾಡಾನೆಗಳು ನೂರಕ್ಕೂ ಅಧಿಕ ಅಡಕೆ ಮರಗಳನ್ನು ನಾಶಪಡಿಸಿವೆ.

ಹೊನ್ನೇಕೊಪ್ಪ ಸುಧಾಕರ್, ಅರಿಗೆ ರುದ್ರೇಗೌಡ ಹಾಗೂ ಶಿವಾನಂದ ಭಟ್ ಎಂಬುವರ ತೋಟಗಳಲ್ಲಿ ಎರಡು ಕಾಡಾನೆಗಳು ಅಡಕೆ ಮರಗಳನ್ನು ಮುರಿದು ಪುಡಿ ಮಾಡಿವೆ. ಜತೆಗೆ ಅಧಿಕ ಫಸಲುಭರಿತ ಕಾಫಿ ಗಿಡಗಳನ್ನು ತುಳಿದು ನಾಶ ಪಡಿಸಿವೆ.