ಉಳ್ಳೂರಿನಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿನಿಯರಾದ ಎನ್.ಜಿ.ರೇಷ್ಮಾ, ಎ.ಪಿ.ದಿವ್ಯಾ ಅವರನ್ನು ಸನ್ಮಾನಿಸಲಾಯಿತು. ಎನ್.ಕೃಷ್ಣಮೂರ್ತಿ ಬಿಳಿಗಲ್ಲೂರು, ಎಂ.ಆರ್.ಪ್ರಭುಸ್ವಾಮಿ, ಎಚ್.ಪಿ.ಮೌನೇಶ್, ಡಾ. ನಂದಿನಿ, ಡಾ. ಕೆ.ಎಸ್.ಭರತ್ ಇದ್ದರು.  
ಜಿಲ್ಲೆ

ನರ್ಸಿಂಗ್ ಅತ್ಯಂತ ಪವಿತ್ರ ವೃತ್ತಿ

ತ್ಯಾಗರ್ತಿ: ನರ್ಸಿಂಗ್ ವೃತ್ತಿ ಅತ್ಯಂತ ಪವಿತ್ರವಾದದ್ದು. ಜನರ ಸೇವೆ ಮಾಡಲು ಒಂದು ಉತ್ತಮ ವೇದಿಕೆ ಎಂದು ಸಾಗರ ತಾಲೂಕು ಆರೋಗ್ಯ ಅಧಿಕಾರಿ ಡಾ. ಕೆ.ಎಸ್.ಭರತ್ ಹೇಳಿದರು.

ಉಳ್ಳೂರಿನ ಸಿಗಂದೂರೇಶ್ವರಿ ಕಾಲೇಜು ಸಭಾಂಗಣದಲ್ಲಿ ಸಾಗರ ಗಂಗೋತ್ರಿ ಸ್ಕೂಲ್ ಆ್ಯಂಡ್ ಕಾಲೇಜ್ ಆಫ್ ನರ್ಸಿಂಗ್ ಶುಕ್ರವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಬೀಳ್ಕೊಡುಗೆ ಸಮಾರಂಭದಲ್ಲಿಮಾತನಾಡಿ, ವಿದ್ಯಾರ್ಥಿಗಳು ಸೇವಾ ಮನೋಭಾವನೆಯಿಂದ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಸಮಾಜದಲ್ಲಿ ದಾದಿಯರಿಗೆ ಗೌರವ ಸಿಗುವಂತೆ ವೃತ್ತಿಯಲ್ಲಿ ಪ್ರಾಮಾಣಿಕತೆ, ಬದ್ಧತೆ ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ನರ್ಸಿಂಗ್ ಪದವಿಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿನಿಯರಾದ ಎನ್.ಜಿ.ರೇಷ್ಮಾ, ಎ.ಪಿ.ದಿವ್ಯಾ ಅವರನ್ನು ಗೌರವಿಸಲಾಯಿತು. ಸಾಗರ ಉಪವಿಭಾಗೀಯ ಆಸ್ಪತ್ರೆ ಶುಶ್ರೂಷಾಧೀಕ್ಷಕಿ ಜುಬೇದಾ ಎಂ.ಅಲಿ, ಉಳ್ಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸಿ.ನಂದಿನಿ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಣ ಸಂಸ್ಥೆ ಅಧ್ಯಕ್ಷ ಎನ್.ಕೃಷ್ಣಮೂರ್ತಿ ಬಿಳಿಗಲ್ಲೂರು, ಪ್ರಾಚಾರ್ಯ ಎಂ.ಆರ್.ಪ್ರಭುಸ್ವಾಮಿ, ಉಪ ಪ್ರಾಚಾರ್ಯ ಎಚ್.ಪಿ.ಮೌನೇಶ್ ಇತರರಿದ್ದರು.