ನಂದಗುಡಿ ಹೋಬಳಿಯ ನೆಲವಾಗಿಲು ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ನರೇಗಾ ಅನುದಾನದಡಿ ನಿರ್ಮಿಸಿರುವ ನೂತನ ಅಂಗನವಾಡಿ ಕೇಂದ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ದೇವರಿಗೆ ಪೂಜೆ ಸಲ್ಲಿಸಲಾಯಿತು. ಶಾಸಕ ಶರತ್ ಬಚ್ಚೇಗೌಡ, ತಾಪಂ ಇಒ ಡಾ.ಸಿ.ಎನ್.ನಾರಾಯಣಸ್ವಾಮಿ, ಕೆಪಿಸಿಸಿ ಕಾರ್ಯದರ್ಶಿ ಇಟ್ಟಸಂದ್ರ ಬಿ.ಗೋಪಾಲ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಬಿ.ವಿ.ರಾಜಶೇಖರಗೌಡ, ಜಿಪಂನ ಮಾಜಿ ಸದಸ್ಯೆ ಸವಿತಾ ಗೋಪಾಲ್ ಇತರರು ಇದ್ದರು. 
ಜಿಲ್ಲೆ

ಮಹಿಳೆಯರಿಗೆ ಆಸರೆಯಾದ ಕೂಸಿನ ಮನೆ

ಶಾಸಕ ಶರತ್ ಬಚ್ಚೇಗೌಡ ಅನಿಸಿಕೆ - ಆರೈಕೆದಾರರ ನಿಯೋಜನೆ

ನಂದಗುಡಿ: ನರೇಗಾ ಯೋಜನೆಯಲ್ಲಿ ಕೂಲಿ ಕಾರ್ಮಿಕ ಮಕ್ಕಳ ಪೋಷಣೆ ಮತ್ತು ಪಾಲನೆಗಾಗಿ ಸರ್ಕಾರ ನೂತನವಾಗಿ ಕೂಸಿನ ಮನೆ, ಶಿಶು ಪಾಲನಾ ಕೇಂದ್ರ ಯೋಜನೆ ಜಾರಿಗೆ ತಂದಿರುವುದು ಗ್ರಾಮೀಣ ಮಹಿಳೆಯರಿಗೆ ಆಸರೆಯಾಗಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ನಂದಗುಡಿ ಹೋಬಳಿಯ ನೆಲವಾಗಿಲು ಗ್ರಾಮದಲ್ಲಿ ಬುಧವಾರ ಜಿಲ್ಲಾಪಂಚಾಯಿತಿ ಹಾಗೂ ನರೇಗಾ ಅನುದಾನದಡಿ 20 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಿರುವ ನೂತನ ಅಂಗನವಾಡಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ಮಹಿಳಾ ಕೂಲಿ ಕಾರ್ಮಿಕರು ಹಾಗೂ ಕೆಲಸದ ನಿಮಿತ್ತ ತೆರಳುವ ಮಹಿಳೆಯರಿಗೆ ಮಕ್ಕಳನ್ನು ನೋಡಿಕೊಳ್ಳಲು ಯಾರೂ ಇರುವುದಿಲ್ಲ. ಕೆಲಸವಿಲ್ಲದೆ ಜೀವನ ನಿರ್ವಹಿಸುವುದು ಕಷ್ಟಕರವಾಗಿರುವುದನ್ನು ಮನಗಂಡ ರಾಜ್ಯ ಸರ್ಕಾರ, ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ ಮುಂದಾಗಿದೆ. ಗ್ರಾಮೀಣ ಭಾಗದ ಮಹಿಳೆಯರು ತಮ್ಮ ಮೂರು ವರ್ಷದವರೆಗಿನ ಮಕ್ಕಳನ್ನು ಅಂಗನವಾಡಿ ಕೇಂದ್ರದಲ್ಲಿ ಬಿಟ್ಟು, ನೆಮ್ಮದಿಯಾಗಿ ತಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಬಹುದು. ಇದರಿಂದ ಮಕ್ಕಳನ್ನು ನೋಡಿಕೊಳ್ಳಲೆಂದೆ ಕೆಲಸ ಬಿಟ್ಟು

ಮನೆಯಲ್ಲಿರಬೇಕಾದ ಸ್ಥಿತಿ ನಿರ್ಮಾಣವಾಗುವುದರಿಂದ ಮುಕ್ತರಾಗಬಹುದು ಎಂದರು.

ಸರ್ಕಾರ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಪೂರಕವಾದ ಉತ್ತಮ ವಾತಾವರಣ ಕಲ್ಪಿಸಿ, ಆಟದ ಸಾಮಗ್ರಿ ಮತ್ತು ಪೌಷ್ಟಿಕಾಂಶಯುಕ್ತ ಆಹಾರ ನೀಡಲಾಗುತ್ತದೆ. ಕೇಂದ್ರದಲ್ಲಿ ನೋಡಿಕೊಳ್ಳಲು ಮಕ್ಕಳ ಪಾಲನೆ ಬಗ್ಗೆ ತರಬೇತಿ ಪಡೆದಿರುವ ಮಹಿಳಾ ಆರೈಕೆದಾರರನ್ನು ನಿಯೋಜಿಸಲಾಗಿದೆ. ಮಕ್ಕಳು, ಗರ್ಭಿಣಿ, ಬಾಣಂತಿಯರಿಗೆ ಸರ್ಕಾರದ ಸವಲತ್ತುಗಳನ್ನು ಪಡೆಯಲು ಸಹಕಾರಿಯಾಗಿದೆ ಎಂದರು.

ತಾಪಂ ಮಾಜಿ ಅಧ್ಯಕ್ಷ ಕೆಂಚೇಗೌಡ, ಮಾಜಿ ಸದಸ್ಯ ಬೀರಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ಸಗೀರ್ ಅಹಮದ್ ನೂರುಲ್ಲಾ, ಎಪಿಎಂಸಿ ಮಾಜಿ ಅಧ್ಯಕ್ಷ ಧರ್ಮೇಶ್, ಗ್ರಾಪಂ ಅಧ್ಯಕ್ಷೆ ವಸಂತಾ ಲೋಕೇಶ್, ಉಪಾಧ್ಯಕ್ಷ ರವಿ, ಸದಸ್ಯರಾದ ಮಧುಸೂದನ್, ಸೊಣ್ಣೆಗೌಡ, ಪಿಡಿಒ ಕಾಂತರಾಜ್,

ಮುಖಂಡರಾದ ಎನ್.ಡಿ.ರಮೇಶ್, ಜಿ.ಮೂರ್ತಿ, ಸಿಡಿಪಿಒ ಶಿವಮ್ಮ, ಮುಖಂಡರಾದ ಎನ್.ಡಿ.ರಮೇಶ್, ಜಿ.ಮೂರ್ತಿ ಇದ್ದರು.