ಜಿಲ್ಲೆ

ಆರೋಗ್ಯ ಕ್ಷೇತ್ರದಲ್ಲಿ ನರ್ಸ್‌ಗಳ ಸೇವೆ ಅಪಾರ: ಸ್ನೇಹ ಕಾಲೇಜ್ ಆಫ್ ನರ್ಸಿಂಗ್ ಚೇರ್ಮನ್ ಡಾ.ಶ್ರೀನಿವಾಸ್ ಶ್ಲಾಘನೆ

ಕೆ.ಎನ್.ರಾಘವೇಂದ್ರ

ಕೆ.ಎಂ.ದೊಡ್ಡಿ: ಸ್ಪರ್ಧಾತ್ಮಕ ಯುಗದಲ್ಲಿ ನರ್ಸಿಂಗ್ ವಿದ್ಯಾರ್ಥಿಗಳ ಪಾತ್ರ ಬಹಳ ಮುಖ್ಯವಾಗಿದೆ ಎಂದು ಬೆಂಗಳೂರಿನ ಸ್ನೇಹ ಕಾಲೇಜ್ ಆಫ್ ನರ್ಸಿಂಗ್ ಚೇರ್ಮನ್ ಡಾ.ಶ್ರೀನಿವಾಸ್ ತಿಳಿಸಿದರು.

ಇಲ್ಲಿನ ಭಾರತೀ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಪದ್ಮ ಜಿ.ಮಾದೇಗೌಡ ನಸಿರ್ಂಗ್ ಕಾಲೇಜಿನ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ದಾದಿಯರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆರೋಗ್ಯ ಕ್ಷೇತ್ರದಲ್ಲಿ ವೈದ್ಯರಿಗಿಂತ ನರ್ಸ್‌ಗಳ ಸೇವೆ ಮರೆಯಲಾಗದು. ಅವರು ರೋಗಿಗಳನ್ನು ತಾಯಿಯ ರೀತಿ ಕಾಳಜಿ ತೋರಿಸುತ್ತಾರೆ. ಆಸ್ಪತ್ರೆಗಳಲ್ಲಿ ಅವರ ಅಗತ್ಯ ಅನಿವಾರ್ಯವಾಗಿದೆ. ಭಾರತೀ ವಿದ್ಯಾಸಂಸ್ಥೆಯು ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯಗಳನ್ನು ನೀಡುತ್ತಿದು,್ದ ಮಾದರಿ ಶುಶ್ರೂಷಕರನ್ನು ರೂಪಿಸುವಲ್ಲಿ ಕಾಲೇಜಿನ ಶಿಕ್ಷಕರ ಪಾತ್ರ ಬಹಳ ಮುಖ್ಯ ಎಂದು ತಿಳಿಸಿದರು.

ಹಳ್ಳಿಗಾಡಿನ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆ ತೆರೆದು ಲಕ್ಷಾಂತರ ವಿದ್ಯಾರ್ಥಿಗಳಿಗೆ ದಾರಿದೀಪವಾಗಿದ್ದ ಮಾಜಿ ಸಂಸದ ದಿವಂಗತ ಜಿ.ಮಾದೇಗೌಡ ಅವರ ಶೈಕ್ಷಣಿಕ ಕಾಳಜಿ ನಿಜಕ್ಕೂ ಶ್ಲಾಘನೀಯ. ಅವರ ಮಾರ್ಗದರ್ಶನದಲ್ಲಿ ಮಧು ಜಿ.ಮಾದೇಗೌಡ ಭಾರತೀ ವಿದ್ಯಾಸಂಸ್ಥೆ ಪ್ರಗತಿ ಸಾಧಿಸಲು ಹಲವು ಹೊಸ ಪ್ರಯೋಗಗಳತ್ತ ಮುನ್ನಡೆಯುತಿದ್ದಾರೆ ಎಂದರು.

ಭಾರತೀ ಹೆಲ್ತ್ ಸೈನ್ಸ್‌ನ ನಿರ್ದೇಶಕ ಡಾ.ಟಿ. ತಮಿಜ್‌ಮಣಿ ಮಾತನಾಡಿ, ಭಾರತೀ ವಿದ್ಯಾಸಂಸ್ಥೆಯು ವೈದ್ಯಕೀಯ ಕ್ಷೇತ್ರಕ್ಕೂ ಕಾಲಿಟ್ಟಿದ್ದು, ಈಗಾಗಲೇ ಹಲವು ಹೊಸ ಕೋರ್ಸ್‌ಗಳನ್ನು ತೆರೆದು ಕಡಿಮೆ ದರದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತ ಮಾಜಿ ಸಂಸದ ದಿವಂಗತ ಜಿ.ಮಾದೇಗೌಡರ ಕನಸು ನನಸು ಮಾಡಲಾಗುತ್ತಿದೆ ಎಂದರು.

ಪದ್ಮ ಜಿ.ಮಾದೇಗೌಡ ನಸಿರ್ಂಗ್ ಕಾಲೇಜಿನ ಪ್ರಾಂಶುಪಾಲ ಪ್ರೊ.ಮಹೇಶ್ ಕುಮಾರ್ ಜಿ.ಲೋನಿ ಮಾತನಾಡಿದರು.

ರಂಗೋಲಿ ಸ್ಪರ್ಧೆ, ಭಾಷಣ, ಪ್ರಬಂಧ ಹಾಗೂ ಪೋಸ್ಟರ್ ಸ್ಪರ್ಧೆಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿ, ಬಹುಮಾನಗಳನ್ನು ಪಡೆದರು. ಕಾರ್ಯಕ್ರಮದಲ್ಲಿ ನಿವೃತ್ತ ನರ್ಸಿಂಗ್ ಅಧೀಕ್ಷಕ ಈರಣ್ಣ, ಭಾರತೀ ಔಷಧ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ.ಬಾಲಸುಬ್ರಮಣ್ಯಂ, ಪ್ರಾಧ್ಯಾಪಕರಾದ ಪ್ರೊ.ರಾಮಪ್ರಸಾದ್, ಪ್ರೊ.ಕೌಶಲ ಪ್ರಸಾದ್ ಇತರರಿದ್ದರು.