ಜಿಲ್ಲೆ

ಇಳಿಮುವಾಗುತ್ತಿದೆ ದಾನಿಗಳ ಸಂಖ್ಯೆ

ಮಂಜುನಾಥ ತಿಮ್ಮಯ್ಯ

ಮೈಸೂರು: ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಸ್ಥಾಪಿತವಾಗಿರುವ ವಿದ್ಯಾರ್ಥಿನಿಲಯಗಳಿಗೆ ಆರ್ಥಿಕ ಸಹಾಯ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಇದರಿಂದಾಗಿ ಹಾಸ್ಟೆಲ್ ನಡೆಸುವುದು ಕಷ್ಟಕರವಾಗಿದೆ ಎಂದು ಯೋಗಿ ನಾರಾಯಣ ಬಣಜಿಗ (ಬಲಿಜ) ಸಂಘದ ಅಧ್ಯಕ್ಷ ಎಂ. ನಾರಾಯಣ ಕಳವಳ ವ್ಯಕ್ತಪಡಿಸಿದರು.


ನಗರದ ಇಂಜಿನಿಯರ್‌ಗಳ ಸಂಸ್ಥೆಯ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಸಂಘದ ಸರ್ವಸದಸ್ಯರ ಮಹಾಸಭೆಯಲ್ಲಿ ಮಾತನಾಡಿದರು.
ಸಮಾಜದ ಒಳಿತಿಗಾಗಿ ಹಲವಾರು ಜಾತಿ ಜನಾಂಗಗಳು ವಿದ್ಯಾರ್ಥಿನಿಲಯವನ್ನು ಸ್ಥಾಪಿಸಿ ವಿದ್ಯಾಕ್ಷೇತ್ರಕ್ಕೆ ಹೆಚ್ಚು ಉತ್ತೇಜನ ನೀಡುತ್ತಿವೆ. ಬಡ ವಿದ್ಯಾರ್ಥಿ ಗಳಿಗಾಗಿ ಸ್ವಪ್ರೇರಣೆಯಿಂದ ಉಚಿತವಾಗಿ ದವಸ ಧಾನ್ಯ ನೀಡುತ್ತಿದ್ದರು. ಆದರೀಗ ಜನರು ಸ್ಥಿತಿವಂತರಿದ್ದರೂ ಸಹಾಯಕ್ಕೆ ಮುಂದಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.


ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಆರ್.ಗೋಪಾಲಕೃಷ್ಣ ಮಾತನಾಡಿ, ವಿಧಾನಪರಿಷತ್ ಸದಸ್ಯ ಎಂ.ಆರ್.ಸೀತಾರಾಮ್ 20 ಲಕ್ಷ ರೂ. ನೀಡಿ ಮೈಸೂರಿನಲ್ಲಿ ಮಹಿಳಾ ವಿದ್ಯಾರ್ಥಿನಿಲಯಕ್ಕೆ ಕಾರಣೀಭೂತರಾಗಿದ್ದಾರೆ. ಇದರ ಸದುಪಯೋಗ ಪಡಿಸಿಕೊಂಡು ಸಮಾಜದ ವಿದ್ಯಾರ್ಥಿನಿಯರು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬೇಕಾಗಿದೆ ಎಂದರು.


ಮಹಿಳಾ ವಿದ್ಯಾರ್ಥಿನಿಲಯಕ್ಕೆ ಅವಶ್ಯಕ ಉಪಕರಣಗಳಿಗೆ ಒಂದು ಲಕ್ಷ ರೂ. ಆರ್ಥಿಕ ಸಹಾಯ ನೀಡಿದ ಪಾಂಡವಪುರದ ನಿವೃತ್ತ ಉಪನ್ಯಾಸಕಿ ಕೆ.ಕೆ.ಶಾಂತಾ, ಪತಿ ಕೆ.ಚಂದ್ರಶೇಖರ್, 50 ಸಾವಿರ ರೂ. ನೀಡಿದ ಎಂ.ಎನ್.ವೇದಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಜಯನಗರದ ಬಲಿಜ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಎನ್.ಹೇಮಂತ್ ಕುಮಾರ್ ಅವರನ್ನು ಅಭಿನಂದಿಸಲಾಯಿತು.


ಮೈಲಾಕ್ ಮಾಜಿ ಅಧ್ಯಕ್ಷ ಎಚ್.ಎ.ವೆಂಕಟೇಶ್, ಸಂಘದ ನಿರ್ದೇಶಕರಾದ ಬಿ.ಕೆ.ಸುರೇಶ್, ಕೆ.ಸಿ.ಪ್ರಕಾಶ್, ಡಾ.ಟಿ.ರಮೇಶ್, ಕೆ.ಎನ್.ವಿಜಯಕೊಪ್ಪ, ಕೂಡ್ಲೆ ನಂಜಪ್ಪ, ಎನ್.ವಿಜಯ್‌ಕುಮಾರ್, ಗೋಪಾಲಕೃಷ್ಣ ಕುರಟ್ಟಿ, ಜಿ.ರಮೇಶ್, ಡಾ.ಎಸ್.ಕೃಷ್ಣಪ್ಪ, ಎಚ್.ವಿ.ನಾಗರಾಜು, ಗೋವಿಂದರಾಜು

ಚೆಲುವರಾಜ್, ಕೆ.ಚಂದ್ರಶೇಖರ್, ಡಿ.ನಾಗರಾಜ್, ಕೆ.ಜನಾರ್ದನ್, ಬಿ.ಎಸ್.ಗುರುಮೂರ್ತಿ, ಎಂ. ಆರ್.ಗಿರೀಶ್, ಪಾರ್ಥಸಾರಥಿ, ಆರ್.ಪಾಂಡುರಂಗ, ಟಿ.ಎಸ್.ರಮೇಶ್, ಎಂ.ನಾಗರಾಜು, ಎಚ್.ಆರ್. ವೆಂಕಟೇಶ್, ಎಂ.ಸಿ.ರಘು ಶೆಟ್ಟಿ ಮುಂತಾದವರು ಹಾಜರಿದ್ದರು