ರಾಮಕೃಷ್ಣ ಭಜಂತ್ರಿ 
ಜಿಲ್ಲೆ

ನುಲಿಯ ಚಂದಯ್ಯ ಮೂರ್ತಿ ಅನಾವರಣ ಆ.14ರಂದು

ನರೇಶ್ ಕುಮಾರ್

ಸಿಂಧನೂರು: ನಗರದ ಎರಡನೇ ವಾರ್ಡ್ ದೇವರಾಜ ಅರಸು ಮಾರುಕಟ್ಟೆಯಲ್ಲಿ ಆ.14ರಂದು ನುಲಿಯ ಚಂದಯ್ಯ ಕಂಚಿನ ಮೂರ್ತಿ ಅನಾವರಣ ಹಾಗೂ 918ನೇ ಜಯಂತ್ಯುತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕುಳುವ ಮಹಾಸಂಘದ ತಾಲೂಕಾಧ್ಯಕ್ಷ ರಾಮಕೃಷ್ಣ ಭಜಂತ್ರಿ ಹೇಳಿದರು.

ರಂಭಾಪುರಿ ಖಾಸಾ ಶಾಖಾಮಠದ ಸೋಮನಾಥ ಶಿವಾಚಾರ್ಯರು, ಇರಕಲ್ ಮಠದ ಬಸವಪ್ರಸಾದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಾಸಕ ಹಂಪನಗೌಡ ಬಾದರ್ಲಿ, ಎಂಎಲ್ಸಿ ಬಸನಗೌಡ ಬಾದರ್ಲಿ ಉದ್ಘಾಟಿಸುವರು.

ಕಂಚಿನ ಮೂರ್ತಿಯನ್ನು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಎಕೆಎಂಎಸ್ ಗೌರವಾಧ್ಯಕ್ಷ ಜಿ.ಚಂದ್ರಣ್ಣ ಅನಾವರಣಗೊಳಿಸುವರು. ಎಸ್ಸಿ, ಎಸ್ಟಿ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ., ಸಂಘದ ರಾಜ್ಯಾಧ್ಯಕ್ಷ ಶಿವಾನಂದ ಎಂ.ಭಜಂತ್ರಿ ಕುಂಭ ಮೆರವಣಿಗೆಗೆ ಚಾಲನೆ ನೀಡುವರು. ಪ್ರಮುಖರಾದ ಮಾಜಿ ಸಚಿವ ವೆಂಕಟರಾವ ನಾಡಗೌಡ, ಕೆ.ಕರಿಯಪ್ಪ, ಸುಡಾ ಅಧ್ಯಕ್ಷ ಬಾಬುಗೌಡ ಬಾದರ್ಲಿ, ನಗರಸಭೆ ಅಧ್ಯಕ್ಷೆ ಮಂಜುಳಾ ಪ್ರಭುರಾಜ ಇತರರು ಪಾಲ್ಗೊಳ್ಳುವರು.

ಹುಬ್ಬಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಪ್ರಾಧ್ಯಾಪಕ ಡಾ.ವೈ.ಎಂ.ಭಜಂತ್ರಿ ಉಪನ್ಯಾಸ ನೀಡುವರು ಎಂದು ತಿಳಿಸಿದರು. ಸಂಘದ ಕಲ್ಯಾಣ ಕರ್ನಾಟಕ ವಿಭಾಗದ ಉಪಾಧ್ಯಕ್ಷ ನೀಲಕಂಠಪ್ಪ ಭಜಂತ್ರಿ, ಮರಿಯಪ್ಪ ತುರಡಗಿ, ಹನುಮಂತಪ್ಪ, ಬಳ್ಳಾರೆಪ್ಪ ಹೊಗರನಾಳ, ಹನುಮಂತ ಉದ್ಬಾಳ, ಭೀಮಣ್ಣ, ಪರಮೇಶ ಇದ್ದರು.