ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿಪೂರ್ವ ಕಾಲೇಜಿನಲ್ಲಿ ಅಗಲಿದ ಅನರ್ಘ್ಯ ರತ್ನ ರತನ್ ಟಾಟಾ ಅವರಿಗೆ ಗುರುವಾರ ನುಡಿನಮನ ಕಾರ್ಯಕ್ರಮ ನಡೆಯಿತು 
ಜಿಲ್ಲೆ

ಸಾಧಕರು ಯುವ ಪೀಳಿಗೆಗೆ ಆದರ್ಶ

ಹೆಬ್ರಿ: ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ ಅಗಲಿದ ಅನರ್ಘ್ಯ ರತ್ನ ರತನ್ ಟಾಟಾ ಅವರಿಗೆ ಗುರುವಾರ ನುಡಿನಮನ ಕಾರ್ಯಕ್ರಮ ನಡೆಯಿತು.

ಪ್ರಾಂಶುಪಾಲ ಅಮರೇಶ್ ಹೆಗಡೆ ಪುಷ್ಪಾರ್ಚನೆ ಮಾಡಿ ವಿಶ್ವದ ಉದ್ಯಮಿಗಳು ನಮ್ಮ ದೇಶದತ್ತ ತಿರುಗಿ ನೋಡುವಂತೆ ಮಾಡಿದ ನಮ್ಮ ದೇಶದ ಸಾಧಕ ಉದ್ಯಮಿ ರತನ್ ಟಾಟಾ. ತಮ್ಮ ಸಂಸ್ಥೆಯ ಉದ್ಯೋಗಿಗಳನ್ನ ತಮ್ಮ ಕುಟುಂಬದವರಂತೆ ನೋಡಿಕೊಳ್ಳುತ್ತಿದ್ದರು. ಅಪಾರ ದೇಶಪ್ರೇಮಿ, ದೇಶ ಸಂಕಷ್ಟದಲ್ಲಿದ್ದಾಗ ದೊಡ್ಡ ಮಟ್ಟದ ದೇಣಿಗೆ ಈ ದೇಶಕ್ಕಾಗಿ ನೀಡಿದವರು. ಇಂದು ನಾವು ಅವರನ್ನು ಕಳೆದುಕೊಂಡದ್ದು ನಮ್ಮ ದೇಶದ ಆಸ್ತಿಯನ್ನೇ ಕಳೆದುಕೊಂಡಂತಾಗಿದೆ. ಇಂಥ ವ್ಯಕ್ತಿಗಳು ನಮ್ಮ ಮುಂದಿನ ಯುವ ಪೀಳಿಗೆಗೆ ಆದರ್ಶಗಳಾಗಬೇಕು ಎಂದರು.
ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು. ಉಪನ್ಯಾಸಕ ಸುಹಾಸ್ ಕಾರ್ಯಕ್ರಮ ನಿರೂಪಿಸಿದರು.