ಜಿಲ್ಲೆ

ಸರ್ವಜ್ಞ ಕಾಲೇಜಿನಲ್ಲಿ ನುಡಿಮುತ್ತುಗಳ ಚಿಂತನ-ಮಂಥನ

ಸರ್ವಜ್ಞ ಪಿಯು ವಿಜ್ಞಾನ ಮಹಾವಿದ್ಯಾಲಯದಲ್ಲಿ ಆಯೋಜನೆ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ನಗರದ ಸರ್ವಜ್ಞ ಮತ್ತು ಜಸ್ಟಿಸ್ ಶಿವರಾಜ ಪಾಟೀಲ್ ಪ.ಪೂ.ವಿಜ್ಞಾನ ಮಹಾವಿದ್ಯಾಲಯ ಹಾಗೂ ಜಸ್ಟಿಸ್ ಶಿವರಾಜ ವಿ.ಪಾಟೀಲ್ ಪ್ರತಿಷ್ಠಾನದ ಸಹಯೋಗದಲ್ಲಿ ಶ್ರಾವಣ ಮಾಸದ ನಿಮಿತ್ತ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನದ ಪ್ರೇರಣೋಪನ್ಯಾಸ ನ್ಯಾಯಮೂರ್ತಿ ಡಾ. ಶಿವರಾಜ ಪಾಟೀಲರ ಮುಂಜಾವಿಗೊAದು ನುಡಿಕಿರಣ ನುಡಿಮುತ್ತುಗಳ ಚಿಂತನೆ ಮಥನ ಕಾರ್ಯಕ್ರಮ ಸೋಮವಾರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಸಾಹಿತಿ ಡಾ.ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ನ್ಯಾಯಮೂರ್ತಿ ಡಾ.ಶಿವರಾಜ ಪಾಟೀಲರ ತಲೆಯಲ್ಲಿನ ಜ್ಞಾನ ಮತ್ತು ಹೃದಯದಲ್ಲಿನ ಪ್ರೀತಿ ಮಾನವನನ್ನು ಸಂವೇದನಾಶೀಲ, ಸಮರ್ಥ ವ್ಯಕ್ತಿಯನ್ನಾಗಿ ಮಾಡುತ್ತದೆ. ಇಂತಹ ನುಡಿಮುತ್ತುಗಳು ಅವರ ಜೀವನ ಅನುಭವದ ಜ್ಞಾನದ ಕಿರಣಗಳಾಗಿವೆ. ಇವುಗಳನ್ನು ಓದಿದಾಗ ವ್ಯಕ್ತಿತ್ವ ವಿಕಾಸ ಆಗುತ್ತದೆ ಎಂದು ಹೇಳಿದರು.
ದೇವರು ಅಮೂರ್ತ ಇಲ್ಲ, ಕಣ್ಣೆದುರಿನಲ್ಲಿರುವ ಸಮಾಜವೇ ದೇವರು. ಸಮಾಜ ಸೇವೆ ಮಾಡಬೇಕು. ಕಷ್ಟದಲ್ಲಿರುವವರನ್ನು ಕಂಡಾಗ ಹೃದಯ ಮಿಡಿಯಬೇಕು. ಶಿಕ್ಷಣದ ಉz್ದೆÃಶ ಹೃದಯ ಸಂಸ್ಕಾರ ಮಾಡುವುದು. ಬುದ್ಧಿ-ಭಾವಗಳ ಸಂಬAಧದಿAದ ನಮ್ಮಲ್ಲಿ ಪ್ರತಿಭೆ ಎಂಬ ಬೆಳಕು ಬೆಳಗಲು ಸಾಧ್ಯವಾಗುತ್ತದೆ ಎಂದರು.
ಆಚಾರಕ್ಕೆ ಅರಸನಾಗು, ನೀತಿಗೆ ಪ್ರಭುವಾಗು, ಮಾತಿನಲ್ಲಿ ಚೂಡಾಮಣಿಯಾಗು, ಜ್ಯೋತಿಯೇ ಆಗು ಜಗಕೆಲ್ಲ ಎಂದು ಜಾನಪದ ಗರತಿ ತನ್ನ ಮಗುವಿಗೆ ಊಟ ಮಾಡಿಸುತ್ತ ಮಗನಿಗೆ ಲೋಕಜ್ಞಾನ ನೀಡುತ್ತಿದ್ದಳು. ತಾಯಿಯ ನುಡಿಗಳು ವಿಶ್ವವಿದ್ಯಾಲಯ ಮಟ್ಟದಲ್ಲಿ ತಾಯಿ ಅಕ್ಷರ ಕಲಿಯದಿದ್ದರೂ ಕನ್ನಡ ಮನಸ್ಸುಗಳಿಗೆ ಲೋಕದರ್ಶನ ಕಟ್ಟಿಕೊಡುತ್ತವೆ. ಮಗು ಬೆಳೆದು ದೊಡ್ಡವನಾಗಿ ಆಚಾರವಂತನಾಗಬೇಕು. ಪ್ರಜೆಗಳ ಪರವಾಗಿ ರಾಜನಂತಿರಬೇಕು, ರಾಜನ ಗಾಂಭೀರ್ಯತೆ ಹೊಂದಿರಬೇಕು. ನೀತಿವಂತನಾಗಿರಬೇಕು. ಜಗತ್ತಿಗೆ ಹಿತವಾದದು ನಿನಗೂ ಹಿತವಾಗುತ್ತದೆ. ಆಡುವ ಮಾತು ಜ್ಯೋತಿರ್ಲಿಂಗ ಸ್ವರೂಪಿಯಾಗಿರಬೇಕು. ನುಡಿದರೆ ಮುತ್ತಿನ ಹಾರದಂತೆ, ಸ್ಪಟಿಕದ ಸಲಾಕೆಯಂತಿರಬೇಕು ಎಂದರು.
ವಿದ್ಯಾರ್ಥಿಗಳು ಬದುಕನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು. ಸರ್ವಜ್ಞ ಎಂಬುವವನು ಲೋಕ ಸಂಚಾರಿ, ಮಹಾನ್ ಜ್ಞಾನಿ, ಹರಿಯುವ ನೀರಿನಂತೆ ಇದ್ದು ಲೋಕಕ್ಕೆ ಜ್ಞಾನ ನೀಡಿದ್ದಾರೆ. ಸರ್ವಜ್ಞ ಕಾಲೇಜಿನಲ್ಲಿನ ವಿದ್ಯಾರ್ಥಿಗಳು ಶಿಸ್ತು, ಉತ್ತಮ ಸಂಸ್ಕೃತಿ ತನ ದಾಗಿಸಿಕೊಂಡಿದ್ದು ಶ್ಲಾಘನೀಯ ಎಂದರು.
ತAತ್ರಾAಶ ಇಲಾಖೆ ನಿರ್ದೇಶಕ ವೀರಶೆಟ್ಟಿ ಗಾರಂಪಳ್ಳಿ ಅತಿಥಿ ಪರಿಚಯ ಮಾಡಿದರು. ಸರ್ವಜ್ಞ ಕಾಲೇಜಿನ ಪ್ರಾಚಾರ್ಯ ಎಂ.ಸಿ.ಕಿರೇದಳ್ಳಿ ಸ್ವಾಗತಿಸಿದರು. ಸಾಹಿತಿ ಬಿ.ಎಚ್.ನಿರಗುಡಿ, ಚಿ.ಸಿ.ನಿಂಗಣ್ಣ, ಪ್ರಭುಗೌಡ ಸಿದ್ಧಾರೆಡ್ಡಿ, ಕರುಣೇಶ್ ಹಿರೇಮಠ, ಗುರುರಾಜ್ ಕುಲಕರ್ಣಿ ಇತರರು ಇದ್ದರು. ಡಾ.ವಿದ್ಯಾವತಿ ಪಾಟೀಲ್ ನಿರೂಪಿಸಿದರು, ವೀರಶ್ರೀ ಪ್ರಾರ್ಥಿಸಿದರು.