ಕೊಪ್ಪಳ ತಾಲೂಕಿನ ಓಜನಳ್ಳಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಎನ್ನೆಸ್ಸೆಸ್​ ಶಿಬಿರದಲ್ಲಿ ಸಿಪಿಐ ಸುರೇಶ ಡಿ. ಮಾತನಾಡಿದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಅಲ್ಲಮಪ್ರಭು ಬೆಟ್ಟದೂರು, ಬಿ.ಜಿ.ಕರಿಗಾರ, ಗ್ರಾಪಂ ಅಧ್ಯಕ್ಷ ಉಡಚಪ್ಪ ಭೋವಿ, ಪ್ರಾಚಾರ್ಯ ಡಾ.ಗಣಪತಿ ಲಮಾಣಿ ಇದ್ದರು. 
ಜಿಲ್ಲೆ

ಜನರಿಗೆ ಸ್ವಚ್ಛತೆ ಅರಿವು ಮೂಡಿಸಿ

Kopala - Raveendra V K

ಕೊಪ್ಪಳ: ಗ್ರಾಮೀಣ ಜನರಿಗೆ ಸ್ವಚ್ಛತೆ ಅರಿವು ಮೂಡಿಸಿ ಎಂದು ಕೊಪ್ಪಳ ಗ್ರಾಮೀಣ ಠಾಣೆ ಸಿಪಿಐ ಸುರೇಶ ಡಿ. ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ತಾಲೂಕಿನ ಓಜನಳ್ಳಿ ಗ್ರಾಮದಲ್ಲಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಿಂದ ಹಮ್ಮಿಕೊಂಡಿದ್ದ ಎನ್ನೆಸ್ಸೆಸ್​ಶಿಬಿರ ಉದ್ಘಾಟಿಸಿ ಮಂಗಳವಾರ ಮಾತನಾಡಿದರು.

ಆರೋಗ್ಯವಾಗಿದ್ದರೆ ಎಲ್ಲವನ್ನೂ ಸಾಧಿಸಬಹುದು. ನಾವು ಆರೋಗ್ಯವಾಗಿರುವುದರ ಜತೆಗೆ ನಮ್ಮ ಸುತ್ತಲಿನವೂ ಆರೋಗ್ಯವಾಗಿರಬೇಕು. ಅದಕ್ಕೆ ಸ್ವಚ್ಛತೆ ಕಾಪಾಡಬೇಕು. ಈ ಬಗ್ಗೆ ನೆರೆಹೊರೆಯವರು ನಿಮ್ಮ ಮನೆಯವರಿಗೆ ತಿಳಿಸಿ. ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಿ. ನಿತ್ಯ ಪತ್ರಿಕೆ, ನಿಯತಕಾಲಿಕೆ ಓದಿ. ನಿತ್ಯದ ಆಗು&ಹೋಗುಗಳ ಮೇಲೆ ಗಮನವಿರಲಿ ಎಂದರು.

ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಸಮಾಜ ಸೇವೆ ಎಂಬುದು ಕಲಿಕೆ ಅಲ್ಲ. ಅದು ಮನದಾಳದಿಂದ ಬರಬೇಕು. ವಿದ್ಯಾರ್ಥಿ ಹಂತದಲ್ಲೇ ಸಮಾಜಮುಖಿ ಚಿಂತೆನಗಳನ್ನು ರೂಢಿಸಿಕೊಳ್ಳಿ. ಸಮಾಜಕ್ಕೆ ಒಳಿತಾಗುವ ಕೆಲಸ ಮಾಡಿ ಎಂದರು.
ನಿವೃತ್ತ ಪ್ರಾಚಾರ್ಯ ಬಿ.ಜಿ.ಕರಿಗಾರ, ಗ್ರಾಪಂ ಅಧ್ಯಕ್ಷ ಉಡಚಪ್ಪ ಭೋವಿ ಮಾತನಾಡಿದರು.

ಪ್ರಾಚಾರ್ಯ ಡಾ.ಗಣಪತಿ ಲಮಾಣಿ, ಎನ್ನೆಸ್ಸೆಸ್​ ಅಧಿಕಾರಿ ಡಾ.ನರಸಿಂಹ ಗುಂಜಳ್ಳಿ, ವಾಣಿಜ್ಯ ವಿಭಾಗ ಮುಖ್ಯಸ್ಥ ವಿಠೊಬ ಎಸ್​., ದೈಹಿಕ ಶಿಕ್ಷಣ ನಿರ್ದೇಶಕ ಡಾ.ಪ್ರದಿಪ್​ ಕುಮಾರ್​, ಡಾ.ಅಶೋಕ ಕುಮಾರ್​, ಗ್ರಾಪಂ ಸದಸ್ಯರಾದ ದ್ಯಾಮನಗೌಡ ಮಾಲಿ ಪಾಟೀಲ, ಶಶಿಕಲಾ ಮಂಜಪ್ಪ ಈಶ್ವರಗೌಡ್ರ ಇತರರಿದ್ದರು.