ಲೋಕಾಪುರ ಬಿವಿವಿಎಸ್ ಮಹಿಳಾ ಪ.ಪೂ ಕಾಲೇಜ್ ಎನ್‌ಎಸ್‌ಎಸ್ ಘಟಕ ಕಾಡರಕೊಪ್ಪ ಗ್ರಾಮದಲ್ಲಿ ಹಮ್ಮಿಕೊಂಡ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅರ್ಥಶಾಸ ಉಪನ್ಯಾಸಕ ಎಂ.ಎಚ್. ಕಟಗೇರಿ ಮಾತನಾಡಿದರು. ಪ್ರಾಚಾರ್ಯ ಎಸ್.ಎಂ. ಹುದ್ದಾರ, ಎನ್‌ಎಸ್‌ಎಸ್ ಅಧಿಕಾರಿ ಎಂ.ಎಲ್. ನಾಯ್ಕ ಇದ್ದರು. 
ಜಿಲ್ಲೆ

ಮಾನವೀಯತೆ ಕಲಿಸುವ ಎನ್‌ಎಸ್‌ಎಸ್

ದತ್ತಾತ್ರೇಯ ಪಿ ಕುಲಕರ್ಣಿ

ಲೋಕಾಪುರ: ನಿಸ್ವಾರ್ಥ ಸೇವೆ ಜತೆಗೆ ಬೇರೆಯವರೊಂದಿಗೆ ಬೆರೆತು ಮಾನವೀಯತೆ ಕಲಿಸುವ ಕೆಲಸವನ್ನು ಎನ್‌ಎಸ್‌ಎಸ್ ಮಾಡುತ್ತದೆ ಎಂದು ಬಾಗಲಕೋಟೆ ಬಸವೇಶ್ವರ ಪಪೂ ಕಾಲೇಜಿನ ಅರ್ಥಶಾಸ ಉಪನ್ಯಾಸಕ ಎಂ.ಎಚ್. ಕಟಗೇರಿ ಹೇಳಿದರು.

ಕಾಡರಕೊಪ್ಪ ಗ್ರಾಮದಲ್ಲಿ ಪಟ್ಟಣದ ಬಿವಿವಿಎಸ್ ಮಹಿಳಾ ಪಪೂ ಕಾಲೇಜಿನ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿ, ಏಳು ದಿನಗಳವರೆಗೆ ತಾವು ಕಲಿತುಕೊಂಡ ಸ್ವಚ್ಛತೆ, ಶ್ರಮದಾನ, ಜನಜಾಗೃತಿ, ಆರೋಗ್ಯ ಕಾಯ್ದುಕೊಳ್ಳುವ ಬಗೆ, ಭಾವೈಕ್ಯ, ಉಪನ್ಯಾಸ, ಸಭೆ ಸಮಾರಂಭಗಳನ್ನು ನಡೆಸುವ ಶೈಲಿಗಳನ್ನು ಅರಿತು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಸಲಹೆ ನೀಡಿದರು.
ಎನ್‌ಎಸ್‌ಎಸ್ ಅಧಿಕಾರಿ ಎಂ.ಎಲ್. ನಾಯ್ಕ ಕಾರ್ಯಕ್ರಮಕ್ಕೆ ಸಲಹೆ, ಸಹಕಾರ ನೀಡಿದ ವ್ಯಕ್ತಿಗಳ ಕುರಿತು ವಿವರಿಸಿದರು. ಸಹಾಯಾಧಿಕಾರಿ ವೈ. ಐ. ಜಂಬಗಿ, ವಿದ್ಯಾರ್ಥಿನಿಯರು ತಮ್ಮ ಅನಿಸಿಕೆ ಹಂಚಿಕೊಂಡರು.

ಪ್ರಾಚಾರ್ಯ ಎಸ್.ಎಂ. ಹುದ್ದಾರ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ವಿ.ವಿ. ಗೊಬ್ಬನ್ನವರ, ಎಚ್.ಪಿ. ಶೇಬನ್ನವರ , ಎ.ಸಿ. ಗಣಾಚಾರಿ , ಎಂ.ಎಸ್. ದುಂಡಪ್ಪಗೊಳ ಇದ್ದರು. ವಿದ್ಯಾರ್ಥಿನಿ ಸಂಜನಾ ರಾಠೋಡ ನಿರೂಪಿಸಿದರು.