ಬೀರೂರಿನ ಜೋಡಿ ತಿಮ್ಮಾಪುರದಲ್ಲಿ ಆಯೋಜಿಸಿದ್ದ ಎನ್‌ಎಸ್‌ಎಸ್ ಶಿಬಿರವನ್ನು ತಾ ಎನ್.ಗೋವಿಂದಸ್ವಾಮಿ ಉದ್ಘಾಟಿಸಿದರು. ಡಾ.ಕೆ.ಎ.ರಾಜಣ್ಣ, ಎಚ್.ಎಂಕುಮಾರ, ಪಿ.ಲೀಲಾವತಿ, ಹನುಮಂತಪ್ಪ, ಅಶೋಕ್‌ಕುಮಾರ್, ನರಸಿಂಹಮೂರ್ತಿ ಇದ್ದರು. 
ಜಿಲ್ಲೆ

ಸಾಮಾಜಿಕ ಕಳಕಳಿ ಹೆಚ್ಚಿಸುವ ಎನ್‌ಎಸ್‌ಎಸ್

ಜಿ.ಹೆಚ್. ಧನ್ಯಕುಮಾರ್

ಬೀರೂರು: ಶೈಕ್ಷಣಿಕ ಹಂತದಲ್ಲಿಯೇ ಮಕ್ಕಳಲ್ಲಿ ಸಾಮಾಜಿಕ ಕಳಕಳಿ ಹೆಚ್ಚಿಸುವ ರಾಷ್ಟ್ರೀಯ ಸೇವಾ ಯೋಜನಾ ಕಾರ್ಯ ಶ್ಲಾಘನೀಯ ಎಂದು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎನ್.ಗೋವಿಂದಸ್ವಾಮಿ ಹೇಳಿದರು.
ಜೋಡಿ ತಿಮ್ಮಾಪುರದಲ್ಲಿ ಸೋಮವಾರ ಕಡೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಹಮ್ಮಿಕೊಂಡಿರುವ ವಿಶೇಷ ವಾರ್ಷಿಕ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ದೇಶದ ಭವಿಷ್ಯ ರೂಪಿಸುವವರು.ಪ್ರಬುದ್ಧರಾಗಿ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಸಮಯದಲ್ಲಿ ದೇಶ ಯಾವ ಮಟ್ಟದಲ್ಲಿರಬೇಕು, ಅದಕ್ಕೆ ನಾವು ಹೇಗೆ ಸಹಕಾರಿಯಾಗ ಬಹುದು ಎನ್ನುವ ಪರಿಕಲ್ಪನೆ ಮೂಡಿಸುವಲ್ಲಿ ಇಂತಹ ಶಿಬಿರಗಳು ಸಮರ್ಥವಾಗಿ ನಿಮ್ಮನ್ನು ತಯಾರುಗೊಳಿಸುತ್ತವೆ. ಗ್ರಾಮಗಳ ಅಭಿವೃದ್ಧಿಗೆ ನೆರವಾಗುವ ನೀಲನಕ್ಷೆಗೂ ಯೋಜನೆ ಸಹಕಾರಿಯಾಗಿದ್ದು, ಇಲ್ಲಿ ಪಾಲ್ಗೊಂಡವರು ಗ್ರಾಮೀಣ ಜನರ ಬದುಕನ್ನು ಅಧ್ಯಯನ ಮಾಡಲು ಮುಂದಾಗಬೇಕು ಎಂದರು.
ಪ್ರಾಚಾರ್ಯ ಡಾ.ಕೆ.ಎ.ರಾಜಣ್ಣ ಮಾತನಾಡಿ, ನಮ್ಮ ವಿದ್ಯಾರ್ಥಿಗಳು ಗ್ರಾಮೀಣ ಭಾಗದವರಾಗಿದ್ದು, ಸಹಕಾರ ತತ್ವ ಗ್ರಾಮಗಳಲ್ಲಿ ಹೇಗೆ ಅನುಷ್ಠಾನವಾಗಿದೆ ಎನ್ನುವುದನ್ನು ತಿಳಿದಿದ್ದಾರೆ. ಮೇಲು-ಕೀಳು ಭಾವ ತೊರೆದು ಸಮಾನತೆ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಿಸಬೇಕು ಎಂದು ತಿಳಿಸಿದರು.
ಗ್ರಾಪಂ ಸದಸ್ಯ ವೆಂಕಟೇಶ್, ಸಹ ಪ್ರಾಧ್ಯಾಪಕ ಎಸ್.ಮಹೇಶ್, ಎಂ.ಡಿ.ಗೋವಿಂದಪ್ಪ, ಕೆ.ಟಿ.ನರಸಿಂಹಪ್ಪ, ಹನುಮಂತಪ್ಪ, ಬಸವರಾಜಪ್ಪ, ಮುಖ್ಯಶಿಕ್ಷಕಿ ಪಿ.ಲೀಲಾವತಿ, ಪಿ.ಜಿ.ಶಿವಮೂರ್ತಿ, ಕೆ.ಪಿ.ರಾಘವೇಂದ್ರ, ಅಧ್ಯಾಪಕರಾದ ಎನ್.ಬಿ.ಮಂಜುನಾಥ, ಜೆ.ಈರಣ್ಣ, ಡಿ.ಎಲ್.ಹರೀಶ್, ಎಸ್.ಕುಮಾರ್, ತಿಮ್ಮೇಗೌಡ ಟಿ.ಕೆ, ಲೋಕಪಾವನ, ಮಮತಾ, ಡಾ.ನವೀನ್‌ಕುಮಾರ್, ರವಿಚಂದ್ರ, ಕುಮಾರ, ಅಶೋಕ್ ಕುಮಾರ್ ಇದ್ದರು.