ಗಂಗೊಳ್ಳಿ: ಒಬ್ಬರು ಮಾಡುವ ಉತ್ತಮ ಕೆಲಸಗಳನ್ನು ಗುರುತಿಸಿ ಗೌರವಿಸಿದಾಗ ಅದು ಹೆಚ್ಚಿನ ಆತ್ಮಸಂತೋಷ ತಂದು ಕೊಡುತ್ತದೆ. ಇಂಥ ಮೌಲ್ಯಗಳನ್ನು ನಾವು ನಿರಂತರವಾಗಿ ಕಾಪಾಡಿಕೊಳ್ಳಬೇಕು ಎಂದು ಲೇಖಕ ನರೇಂದ್ರ ಎಸ್.ಗಂಗೊಳ್ಳಿ ಅಭಿಪ್ರಾಯಪಟ್ಟರು. ತ್ರಾಸಿಯಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪಪೂ ಕಾಲೇಜಿನ ಎನ್ನೆಸ್ಸೆಸ್ ವಿಶೇಷ ಶಿಬಿರದಲ್ಲಿ ಯೋಜನಾಧಿಕಾರಿ ಸುಗುಣಾ ಆರ್.ಕೆ. ಅವರಿಗೆ ಎನ್ನೆಸ್ಸೆಸ್ ಶಿಬಿರದ ಹಿಂದಿನ ವಿದ್ಯಾರ್ಥಿಗಳು ಮಂಗಳವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಹಲವು ವರ್ಷ ವಿಶೇಷ ಶಿಬಿರಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಅರ್ಥಶಾಸ್ತ್ರ ಉಪನ್ಯಾಸಕಿ ಸುಗುಣಾ ಆರ್.ಕೆ. ಅವರನ್ನು ಸನ್ಮಾನಿಸಲಾಯಿತು. ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಅಕ್ಷಯಾ ಖಾರ್ವಿ, ವಿಕಾಸ್, ದೇವಿ ಪ್ರಸಾದ್, ಸೃಜನ್, ಪ್ರೀತಂ, ಜಯಶ್ರೀ, ಪ್ರಜ್ಞಾ, ಸುಕ್ಷಿತಾ, ವಿಜೇತಾ, ಶಿವಾನಿ, ವೆಲಿಟಾ, ದೀಪ್ತಿ, ಸನ್ನಿಧಿ, ಶ್ರೇಯಾ ಉಪಸ್ಥಿತರಿದ್ದರು. ಸುಜನ್ ಖಾರ್ವಿ ಸ್ವಾಗತಿಸಿ. ಭಾರತಿ ನಿರೂಪಿಸಿ, ಪ್ರಜ್ವಲ್ ವಂದಿಸಿದರು.