ಜಿಲ್ಲೆ

ಏಕಾಗ್ರತೆ ಇದ್ದರೆ ಕಷ್ಟವೆಲ್ಲ ಇಷ್ಟ- ಪದ್ಮಲತಾ ರಾವ್ ಅನಿಸಿಕೆ - ವಿವೇಕ ಜಾಗೃತಿಯ ಕಾರ್ಯಕ್ರಮ

Mangaluru - Nishantha Narayana


ಪುತ್ತೂರು: ಬೆಟ್ಟಂಪಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎನ್‌ಎಸ್‌ಎಸ್ ಘಟಕದಿಂದ ವಿವೇಕ ಜಾಗೃತಿಯ ಕಾರ್ಯಕ್ರಮ ನಡೆಯಿತು.
ಸಾಲಿಗ್ರಾಮ ಡಿವೈನ್ ಪಾರ್ಕ್ ಅಽಕಾರಿ ಪದ್ಮಲತಾ ರಾವ್ ಮಾತನಾಡಿ, ವಿವೇಕಾನಂದರ ಚಿಂತನೆ ಹಾಗೂ ವಿದ್ಯಾರ್ಥಿಗಳಿಗೆ ಏಕಾಗ್ರತೆ ಇದ್ದರೆ ಕಷ್ಟ ಅಂದುಕೊಂಡಿದ್ದೆಲ್ಲಾ ಇಷ್ಟವಾಗುತ್ತದೆ. ವಿಶ್ವಮಾನವನಾಗಿ ಮನುಷ್ಯನು ಹುಟ್ಟುತ್ತಾನೆ. ಮೊದಲಿಗೆ ನಾವು ನಮ್ಮೊಳಗಿರುವ ಶಕ್ತಿಯನ್ನು ಪ್ರೀತಿಸಬೇಕು ಇದಕ್ಕೆ ನಮ್ಮಲ್ಲಿ ತಾಳ್ಮೆ ಇರಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಗ್ರಂಥಪಾಲಕರಾದ ರಾಮ ಕೆ. ಮಾತನಾಡಿ , ಒಳ್ಳೆಯ ಗುರಿಯನಿಟ್ಟುಕೊಂಡು ಒಳ್ಳೆಯ ಗುರುವಿನ ಮಾರ್ಗದರ್ಶನ ಸಿಕ್ಕಿದರೆ ಎಲ್ಲವನ್ನು ಗೆಲ್ಲಬಹುದು ಎಂದು ತಿಳಿಸಿದರು.
ವಿವೇಕ ಜಾಗೃತಿ ಬಳಗದ ಅಧ್ಯಕ್ಷ ಟಿ. ಆರ್. ಕಲ್ಲೂರಾಯ ಉಪಸ್ಥಿತರಿದ್ದರು. ಎನ್.ಎಸ್.ಎಸ್. ಸ್ವಯಂಸೇವಕ ಅಂಕಿತ್ ಸ್ವಾಗತಿಸಿದರು. ಎನ್‌ಎಸ್‌ಎಸ್‌ನ ಯೋಜನಾಽಕಾರಿ ಡಾ. ಲಾಯ್ಡ್ ವಿಕ್ಕಿ ಡಿಸೋಜ ಪ್ರಸ್ತಾವನೆಗೈದರು. ದೀಕ್ಷಾ ವಂದಿಸಿದರು. ಘಟಕ ನಾಯಕ ರಂಜಿತ್ ಕಾರ್ಯಕ್ರಮ ನಿರೂಪಿಸಿದರು.