ಇಟಗಿ: ರಾಷ್ಟ್ರೀಯ ಸೇವಾ ಯೋಜನೆಯು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಂಡು ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಲು ಸೂಕ್ತ ವೇದಿಕೆಯಾಗಿದ್ದು, ವಿದ್ಯಾರ್ಥಿಗಳು ಸದುಪಯೋಗ ಪಡೆಯಬೇಕು ಎಂದು ಪ್ರಾಧ್ಯಾಪಕ ಬಿ.ಎಸ್.ಸವದಿ ಹೇಳಿದರು.
ಇಲ್ಲಿನ ಜನತಾ ಶಿಣ ಪ್ರಸಾರ ಸಮಿತಿಯ ಬಿ.ಎಂ.ಸಾಣಿಕೊಪ್ಪ ಪದವಿ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಎನ್ಎಸ್ಎಸ್ ಸಂಸ್ಥಾಪನಾ ದಿನಾಚರಣೆಯ ಅಧ್ಯತೆವಹಿಸಿ ಮಾತನಾಡಿ, ಎನ್ಎಸ್ಎಸ್ ಶಿಬಿರಾರ್ಥಿಗಳಲ್ಲಿ ಶಿಸ್ತು, ಸಹಬಾಳ್ವೆ, ಶ್ರಮದಾನ, ಸಮಯಪ್ರಜ್ಞೆ ಅಂತಹ ಉತ್ತಮ ಗುಣ ಬೆಳೆಸುತ್ತದೆ ಎಂದರು. ಪ್ರಾಚಾರ್ಯ ಆರ್.ಬಿ.ಹುಣಶೀಕಟ್ಟಿ ಮಾತನಾಡಿ, ಎನ್ಎಸ್ಎಸ್ ರಾಷ್ಟ್ರಪ್ರೇಮ ಮತ್ತು ಸ್ವಯಂಸೇವಾ ಮನೋಭಾವ ಬೆಳೆಸುತ್ತದೆ ಎಂದರು. ಸಹಾಯಕ ಪ್ರಾಧ್ಯಾಪಕರಾದ ಶಿವಾನಂದ ಸುಣಗಾರ, ಈಶ್ವರ ಕರಮಳ್ಳನವರ, ಎಸ್.ಕೆ.ಕುರಗುಂದ ಹಾಗೂ ಇತರರು ಇದ್ದರು. ಸಹಾಯಕ ಪ್ರಾಧ್ಯಾಪಕ ಕೆ.ಡಿ.ಕರ್ಕಿ ಸ್ವಾಗತಿಸಿದರು. ಅನೀತಾ ಸುಣಗಾರ ವಂದಿಸಿದರು.