ನರಗುಂದ: ಮಹಾತ್ಮಾ ಗಾಂಧೀಜಿ ಅವರ ಜನ್ಮ ಶತಮಾನೋತ್ಸವ ನಿಮಿತ್ತ 1969ರಲ್ಲಿ ಸ್ಥಾಪಿಸಲಾಗಿರುವ ರಾಷ್ಟ್ರೀಯ ಸೇವಾ ಯೋಜನೆ ಘಟಕವು ಶೈಕ್ಷಣಿಕ ವಿಸ್ತರಣೆಯಲ್ಲಿ ಉದಾತ್ತ ಪ್ರಯೋಗವಾಗಿದೆ. ಇದು ನಿರಂತರ ಸಮುದಾಯ, ಸಂವಹನಗಳ ಮೂಲಕ ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಸ್ವಯಂಪ್ರೇರಿತ ಕೆಲಸದ ಮನೋಭಾವ ಹುಟ್ಟು ಹಾಕುತ್ತದೆ ಎಂದು ಎನ್ಎಸ್ಎಸ್ ಘಟಕದ ವಿಜಯಪುರ ವಿಭಾಗೀಯ ಸಂಯೋಜಕ ಎಂ.ಎಸ್. ಮುಲ್ಲಾ ಹೇಳಿದರು.
ತಾಲೂಕಿನ ಕೊಣ್ಣೂರ ಕೆಇಎಸ್ ಪದವಿ ಪೂರ್ವ ಕಾಲೇಜ್ಗೆ ಮಂಜೂರಾಗಿರುವ ನೂತನ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಘಟಕ ಉದ್ಘಾಟನೆ ಸಮಾರಂಭ ನೆರವೇರಿಸಿ ಅವರು ಮಾತನಾಡಿದರು.
ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಸ್.ಟಿ. ಚೌಡರೆಡ್ಡಿ, ನಿರ್ದೇಶಕರಾದ ಎಸ್.ಪಿ. ಯಲ್ಲಪ್ಪಗೌಡ್ರ, ಎನ್.ಟಿ. ಕೆಂಪನಗೌಡ್ರ, ಎಸ್.ಬಿ. ಯಲಿಗಾರ, ಐ.ಐ. ಮಸೂತಿಮನಿ, ಪ್ರಾಚಾರ್ಯ ಎಸ್.ಕೆ. ಜೋಶಿ, ಸಿಬ್ಬಂದಿ ಇದ್ದರು.