ಚೇಳೂರು: ತಾಲೂಕಿನ ಎಂ.ನಲಗುಟ್ಲಪಲ್ಲಿ ಗ್ರಾಮದಲ್ಲಿ ಬಾಗೇಪಲ್ಲಿ ಪಟ್ಟಣದ ವಿಕಾಸ ಕಾಲೇಜು ಹಾಗೂ ನಲ್ಲಗುಟ್ಲಪಲ್ಲಿ ಗ್ರಾಪಂ ಸಂಯುಕ್ತ ಆಶ್ರಯದಲ್ಲಿ ಎನ್ಎಸ್ಎಸ್ನ 2 ದಿನಗಳ ವಿಶೇಷ ಶಿಬಿರ ನಡೆಯಿತು.
ಪ್ರಗತಿಪರ ಚಿಂತಕ ಎಚ್.ಆರ್.ಸುಬ್ರಹ್ಮಣ್ಯಂ ಮಾತನಾಡಿ, ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸುವುದರಿಂದ ಸಂಕೋಚ, ಭಯ, ಸಂಕುಚಿತ ಮನೋಭಾವನೆ, ಅಹಂ, ಬೇದ ಭಾವನೆ, ತೊಲುಗುತ್ತದೆ. ಹಾಗೆಯೇ ನಾಯಕತ್ವ ಗುಣ ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ. ಭಾರತ ಒಂದು ಪ್ರಜಾಪ್ರಭುತ್ವ ದೇಶ. ಭಾರತದ ನೆರೆ ಹೊರೆ ದೇಶ ಶ್ರೀಲಂಕಾ, ಮಾಯನ್ಮಾರ್, ಬಾಂಗ್ಲಾದೇಶ್, ನೇಪಾಳ, ಪ್ರಜಾಪ್ರಭುತ್ವ ಆಡಳಿತ ದಿನೇ ದಿನೆ ಕುಸಿಯುತ್ತಿದೆ. ಆದರೆ ಭಾರತ ದೇಶ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಬೆಳೆಯುತ್ತಿದೆ, ಇದಕ್ಕೆ ಭಾರತ ಸಂವಿಧಾನವೇ ಶಕ್ತಿ. ಯುವಕರು ಕಲಿಕೆಯ ಜತೆಯಲ್ಲಿಯೇ ಉತ್ತಮ ದೇಶ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು
ಶಿಬಿರದ ನಿರ್ದೇಶಕ ಪಿ.ಎನ್.ಶಿವಣ್ಣ ಮಾತನಾಡಿ, ಗ್ರಾಮಗಳ ಅಭಿವೃದ್ಧಿ ಆದಾಗ ದೇಶದ ಅಭಿವೃದ್ಧಿ ಸಾಧ್ಯ, ಹಾಗೆಯೇ ಪ್ರತಿಯೊಬ್ಬರು ಸಾವಲಂಬಿ ಬದುಕು ಸಾಗಿಸಲು ಶ್ರಮಿಸಬೇಕು ಎಂದರು. ಕೇಂದ್ರ ಮತ್ತು ರಾಜ್ಯ ಸರ್ಕಾರ ಎಲ್ಲ ಶಾಲಾ ಕಾಲೇಜುಗಳಲ್ಲಿ ಎನ್ಎಸ್ಎಸ್, ಎನ್ಸಿಸಿ ಕಡ್ಡಾಯ ಇದ್ದರೂ ಕೂಡ ಕೆಲವು ಶಿಕ್ಷಣ ಸಂಸ್ಥೆಗಳು ಗಂಭೀರವಾಗಿ ಪರಿಗಣಿಸಿಲ್ಲ. ಕಡ್ಡಾಯಗೊಳಿಸಲು ಸರ್ಕಾರ ಗಮನ ಹರಿಸಬೇಕೆಂದು ಒತ್ತಾಯ ನೀಡಿದರು.
ಇಂತಹ ಶಿಬಿರಗಳಿಗೆ ಸ್ಥಳಿಯ ಸಂ ಸಂಸ್ಥೆಗಳು, ಸ್ಥಳಿಯ ಸರ್ಕಾರಗಳು, ಅಧಿಕಾರಿಗಳು ಹೆಚ್ಚು ಸಹಕರಿಸಿದಾಗ ಮಾತ್ರ ಶಿಬಿರಗಳಿಗೆ ಮಹತ್ವ ಸಿಗುತ್ತದೆ ಎಂದು ಅಭಿಪ್ರಾಯಪಟ್ಟರು.
ಉಪನ್ಯಾಸಕರಾದ ಅನಿತಾ, ಅಪ್ರೀನ, ನಿವೇದಿತ, ಪ್ರವಿಣ್ ಕುಮಾರ್, ಶಿವಕುಮಾರ್, ಆನಂದ್, ಕನಕನಾರಾಯಣ ರೆಡ್ಡಿ, ಪ್ರಕಾಶ್, ಕೇಶವ, ಕಿರಣ್, ರಮೇಶ್, ಉಪನ್ಯಾಸಕರಾದ, ಹನುಮೇಶ್, ಕಿಶೋರ್, ಹರೀಶ್ ಇದ್ದರು.