ಗದಗ : ದೈನಂದಿನ ಜೀವನಕ್ಕೆ ಅಗತ್ಯ ಕಾನೂನುಗಳನ್ನು ಎಲ್ಲರೂ ಅರಿತುಕೊಳ್ಳಬೇಕು. ಕಾನೂನಿನ ಬಗ್ಗೆ ಎಲ್ಲ ತಿಳಿ:ದುಕೊಳ್ಳಲು ಸಾಧ್ಯವಾಗದಿದ್ದರೂ ನಿಮ್ಮ ಜೀವನಕ್ಕೆ ಅವಶ್ಯವಿದ್ದಷ್ಟು ಮಾಹಿತಿ ತಿಳಿದುಕೊಳ್ಳುವುದು ಅತ್ಯವಾಗಿದೆ. ಸಾಮಾನ್ಯ ಕಾನೂನಿನ ಅರಿವು ಹೊಂದಿದರೆ ಉತ್ತಮ ನಾಗರಿಕರಾಗಿ ಬಾಳಬಹುದು. ಮನೆಗಳಲ್ಲಾಗುವ ಪ್ರತಿ ಜನನ-ಮರಣಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು. ಇದರಿಂದ ಆಸ್ತಿ ಹಂಚಿಕೆಯನ್ನೊಳಗೊಂಡ ವಿವಿಧ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಸಹಾಯವಾಗುತ್ತದೆ ಎಂದು ಹಿರಿಯ ನ್ಯಾಯವಾದಿ ಬಸವರಾಜ ಸಂಶಿ ಹೇಳಿದರು.
ಸಮೀಪದ ಹಾತಲಗೇರಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ, ಕೆ.ಎಲ್.ಇ ಸಂಸ್ಥೆಯ ಎಸ್.ಎ. ಮಾನ್ವಿ ಕಾನೂನು ಮಹಾವಿದ್ಯಾಲಯ ಹಾಗೂ ಗ್ರಾಮ ಪಂಚಾಯಿತಿ ಇವರ ಸಂಯುಕ್ತಾಶ್ರಯದಲ್ಲಿ ನಡೆದ ರಾಷ್ಟೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ, ಕಾನೂನು ಅರಿವು ನೆರವಿಗಾಗಿ ಯುವಜನತೆ ೪ನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬರ ನಿತ್ಯದ ಬದುಕಿಗೂ ಸಾಮಾನ್ಯ ಕಾನೂನು ಜ್ಞಾನ ಅತ್ಯಗತ್ಯ. ಕಾನೂನು ಜ್ಞಾನವಿದ್ದರೆ ಮತ್ತೊಬ್ಬರಿಂದ ಶೋಷಣೆಗೆ ಒಳಗಾಗುವುದು ತಪ್ಪುತ್ತದೆ. ಕಾನೂನು ತಿಳಿದುಕೊಂಡಿಲ್ಲ ಎಂಬ ಕಾರಣಕ್ಕೆ ಯಾವುದೇ ತಪ್ಪನ್ನು ಮನ್ನಿಸಲಾಗದು. ಸಮಾಜದ ಜನರು ತಮ್ಮ ಬದುಕಿನ ಸುಗಮ ನಡೆಗೆ ಕಾನೂನಿನ ಪ್ರಾಥಮಿಕ ತಿಳುವಳಿಕೆಯನ್ನಾದರೂ ಹೊಂದಿರಲೇಬೇಕು. ಇದರೊಂದಿಗೆ ತಮ್ಮ ಕಾರ್ಯಕ್ಷೇತ್ರಗಳಿಗೆ ಸಂಬಂಸಿದ ಆಳವಾದ ಕಾನೂನು ಜ್ಞಾನ ಹೊಂದುವುದು ಎಲ್ಲರ ಕರ್ತವ್ಯ. ಕಾನೂನು ಜ್ಞಾನ ಕೇವಲ ನ್ಯಾಯಾಧೀಶರು, ವಕೀಲರಿಗೆ ಸೀಮಿತವಾಗಬಾರದು. ಪ್ರತಿಯೊಬ್ಬರಿಗೂ ನಿತ್ಯ ಜೀವನದಲ್ಲಿ ಅತ್ಯವಶ್ಯವಾದ ತಿಳುವಳಿಕೆ ಬೇಕಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ಸ್ವತಂತ್ರವಾಗಿ ಜೀವನ ನಡೆಸಲು ಹಾಗೂ ಬದುಕಿನ ಕಷ್ಟ, ನಷ್ಟ, ನೋವುಗಳಿಂದ ದೂರವಿರಲು ಕಾನೂನು ಮಾಹಿತಿ ಇರಬೇಕು. ಕಾನೂನು ನಮ್ಮ ಸುತ್ತಮುತ್ತಲಿನಲ್ಲಿ ಅದಶ್ಯವಾಗಿದ್ದರೂ ಅದನ್ನು ಪಾಲಿಸದೆ ಇರುವ ಸಂದರ್ಭದಲ್ಲಿ ಪರಿಣಾಮವನ್ನು ಎದುರಿಸ ಬೇಕಾಗುತ್ತದೆ. ಆದ್ದರಿಂದ ಜನಸಾಮಾನ್ಯರು, ವಿದ್ಯಾರ್ಥಿಗಳಿಗೆ ಸಾಮಾನ್ಯ ಕಾನೂನು ಜ್ಞಾನ ಅತ್ಯವಶ್ಯ. ಇದೆ ಕಾರಣಕ್ಕೆ ಸಾಕ್ಷರಥಾ ರಥಯಾತ್ರೆ ಕೈಗೊಳ್ಳಲಾಗಿದೆ ಎಂದರು.
ಸಾಹಿತಿ ಮಲ್ಲಿಕಾರ್ಜುನ ಪೂಜಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್.ಎಸ್.ಎಸ್ ಯೋಜನಾಧಿಕಾರಿ ಡಾ. ಸಿ.ಬಿ.ರಣಗಟ್ಟಿಮಠ, ರಮೇಶ ಕರಡಿ ಸೇರಿದಂತೆ ಗ್ರಾಮಸ್ಥರು ಹಾಗೂ ಎನ್.ಎಸ್.ಎಸ್. ಶಿಬಿರಾರ್ಥಿಗಳು ಇದ್ದರು. ವಿದ್ಯಾರ್ಥಿ ಸಂತೋಷ ಭದ್ರಪೂರ ಸ್ವಾಗತಿಸಿದರು. ಭೀಮಾಂಬಿಕ ವಂದಿಸಿದರು. ಶರಣಪ್ಪ ಭದ್ರಪೂರ ನಿರೂಪಿಸಿದ