ಜಿಲ್ಲೆ

ರಾಷ್ಟ್ರೀಯ ಸೇವಾ ಯೋಜನೆ ಶಿಬಿರವೇದ ಉಪನಿಷತ್ತುಗಳ ಸಾರ ಜಾನಪದದಲ್ಲಿದೆ: ಪ್ರೊ. ಚಂದ್ರಶೇಖರ ವಸ್ತ್ರದ

Gadag - Shivanand Hiremath

ಗದಗ:  ಈಶಾವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್ ಎಂದು ವೇದೋಪನಿಷತ್ತುಗಳಲ್ಲಿ ಹೇಳಿದಂತೆ ಜನಪದರು ಬಹಳ ಸುಲಭವಾಗಿ, ಸರಳ ಭಾಷೆಯಲ್ಲಿ, ಶಿವ ಮರದ ಬೇರುಗಳಲ್ಲಿ ಇಳಿದಿದ್ದಾನೆ, ಹಸಿರೆಲೆಗಳಲ್ಲಿ ಕಂಗೊಳಿಸಿದ್ದಾನೆ, ಅರಳಿದ ಹೂಗಳಲ್ಲಿ ನಗುತ್ತಿದ್ದಾನೆ. ಆತ ಸರ್ವಾಂತರ್ಯಾಮಿ ಎಂದು ಬಹಳ ಸೊಗಸಾಗಿ ತಿಳಿಸಿದ್ದಾರೆ. ಜಾನಪದ ಗೀತೆಗಳಲ್ಲಿ ಲಯ, ತಾಳ, ರಾಗ ಮತ್ತು ಗೇಯತೆಯನ್ನು ಅನಾಯಾಸವಾಗಿ ಕಾಣಬಹುದು. ಜೀವನವನ್ನು ಸಾರ್ಥಕಗೊಳಿಸಿಕೊಳ್ಳುವ ಪರಿಯನ್ನು ಜಾನಪದದಿಂದಲೇ ಕಲಿಯಬೇಕೆಂದು ಹಿರಿಯ ಸಾಹಿತಿ, ವಿಶ್ರಾಂತ ಪ್ರಾಚಾರ್ಯ ಚಂದ್ರಶೇಖರ ವಸ್ತ್ರದ ತಿಳಿಸಿದರು.

ಅವರು ಬಿಂಕದಕಟ್ಟಿ ಗ್ರಾಮದಲ್ಲಿ ರವಿವಾರದಂದು ಗದಗನ ಸರಕಾರಿ ಪದವಿ ಪೂರ್ವ ಕಾಲೇಜಿನ   ರಾ.ಸೇ.ಯೋ. ಘಟಕದ ವಾರ್ಷಿಕ ವಿಶೇಷ ಶಿಬಿರದ ಗೋಷ್ಠಿಯಲ್ಲಿ ಕನ್ನಡ ಜಾನಪದ ವಿಷಯದ ಕುರಿತು ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಶಿಬಿರಾರ್ಥಿಗಳು ಸಾಲು ಮರದ ತಿಮ್ಮಕ್ಕ ಉದ್ಯಾನವನದಲ್ಲಿ ಸ್ವಚ್ಛತಾ ಕಾರ್ಯ ನೆರವೇರಿಸಿದರು.

ಸಾಯಂಕಾಲದ ಸಭೆಯ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕೆ. ಎಚ್. ಬೇಲೂರ ಮಾತನಾಡಿ ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರಾದ ನಾಡಿನ ಧೀರೋದಾತ್ತ ಮಕ್ಕಳ ಕಥನವನ್ನು ಹೇಳಿ ದೇಶಪ್ರೇಮ ಮೈಗೂಡಿಸಿಕೊಳ್ಳಲು ಕರೆ ನೀಡಿದರು.

ಉಪನ್ಯಾಸಕ ಬಿ. ಎಸ್. ಮಲ್ಲಾಪೂರ ಪ್ರಾಸ್ತಾವಿಕವಾಗಿ ಮಾತನಾಡಿದರು, ಜೆ. ಎಮ್. ಮಠಪತಿ ಆಶಯ ನುಡಿಗಳನ್ನಾಡಿದರು. ಪೂಜಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಕು. ಸುಮಾ ಕಮ್ಮಾರ ಸ್ವಾಗತಿಸಿದರು ಉಪನ್ಯಾಸಕ   ಶ್ರೀನಿವಾಸ ಬಡಿಗೇರ ವಂದಿಸಿದರು.  ಕು. ನಿವೇದಿತಾ ಕಲಿಕೇರಿ ನಿರೂಪಿಸಿದರು.