ಚಿಕ್ಕಕೊಡಗಲಿ ಗ್ರಾಮದಲ್ಲಿ ಆಯೋಜಿಸಿದ್ದ ಎನ್‌ಎಸ್‌ಎಸ್ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶ್ರೀ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ನಿರ್ದೇಶಕ ಶರಣಪ್ಪ ಅಕ್ಕಿ ಮಾತನಾಡಿದರು. ವೇದಿಕೆಯಲ್ಲಿ ಗೌತಮ ಬೋರಾ, ನಾಗಪ್ಪ ಕನ್ನೂರ, ಬಸವರಾಜ ಗೋಟೂರ, ಮಲ್ಲಪ್ಪ ಹರವಿ, ಸುಭಾಷ್ ಶೆಟ್ಟರ, ಚಂದ್ರಶೇಖರ ಶೆಟ್ಟರ, ವೀರಭದ್ರಗೌಡ ಗೌಡರ, ಮಹಾಲಿಂಗಪ್ಪ ಬಂಡರಗಲ್ಲ ಉಪಸ್ಥಿತರಿದ್ದರು. 
ಜಿಲ್ಲೆ

ವಿದ್ಯಾರ್ಥಿಗಳ ಶಿಸ್ತು ಸಂಯಮಕ್ಕೆ ಎನ್‌ಎಸ್‌ಎಸ್

ವಿನಯ ಆಶೋಕ ನಾಯ್ಕ

ಇಳಕಲ್ಲ (ಗ್ರಾ): ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಿಗೆ ಶಿಸ್ತು ಮತ್ತು ಸಂಯಮ ಕಲಿಸಿ ಕೊಡುತ್ತದೆ ಎಂದು ಶ್ರೀ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ನಿರ್ದೇಶಕ ಶರಣಪ್ಪ ಅಕ್ಕಿ ಹೇಳಿದರು.

ಸ್ಥಳೀಯ ಎಸ್‌ವಿಎಂ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ವತಿಯಿಂದ ಶನಿವಾರಂದು ತಾಲೂಕಿನ ಚಿಕ್ಕಕೊಡಗಲಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಎನ್‌ಎಸ್‌ಎಸ್ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಒಂದು ವಾರ ನೀವು ಬಹಳಷ್ಟು ವಿಷಯ ಇಲ್ಲಿ ಕಲಿತಿದ್ದೀರಿ. ಅವುಗಳನ್ನು ಅಳವಡಿಸಿಕೊಳ್ಳುವ ಮೂಲಕ ನಿಮ್ಮ ಜೀವನ ಸುಂದರವಾಗಿ ರೂಪಿಸಿಕೊಳ್ಳಿ ಎಂದರು.

ಕಾಲೇಜಿನ ಚೇರ್ಮನ್ ಬಸವರಾಜ ಕಬ್ಬಿಣದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅತಿಥಿಗಳಾಗಿ ಗೌತಮ ಬೋರಾ, ನಾಗಪ್ಪ ಕನ್ನೂರ, ಬಸವರಾಜ ಗೋಟೂರ, ಮಲ್ಲಪ್ಪ ಹರವಿ, ಸುಭಾಷ್ ಶೆಟ್ಟರ, ಚಂದ್ರಶೇಖರ ಶೆಟ್ಟರ, ವೀರಭದ್ರಗೌಡ ಗೌಡರ, ಮಹಾಲಿಂಗಪ್ಪ ಬಂಡರಗಲ್ಲ ಆಗಮಿಸಿದ್ದರು.

ಪ್ರಾಚಾರ್ಯ ಬಸವರಾಜ ಸುಗ್ಗಮದ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಎನ್. ಗೌಡರ ವರದಿ ವಾಚಿಸಿದರು. ಡಾ. ಆರ್.ಬಿ. ಬಾಡ ವಂದಿಸಿದರು. ಸಾವಿತ್ರಿ ಕಟಗಿ, ಶಿಲ್ಪಾ ಚುಕಣಿ ನಿರೂಪಿಸಿದರು.