ಮುಧೋಳ ತಾಲ್ಲೂಕಿನ ಉತ್ತೂರ ಗ್ರಾಮದಲ್ಲಿ ಎನ್‌ಎಸ್‌ಎಸ್ ವಿಶೇಷ ಶಿಬಿರಕ್ಕೆ ಚಂದ್ರಶೇಕರಯ್ಯ ಸ್ವಾಮೀಜಿ, ಜಿಪಂ ಮಾಜಿ ಸದಸ್ಯ ಕೆ.ಟಿ. ಪಾಟೀಲ ಚಾಲನೆ ನೀಡಿದರು. ಹನಮಂತ ಗುಡೆಪ್ಪನವರ, ಮಲ್ಲಿಕಾರ್ಜುನ ಹಿರೇಮಠ, ಎಸ್.ಕೆ. ಸಾರವಾಡ ಇದ್ದರು. 
ಜಿಲ್ಲೆ

ಸೇವಾ ಮನೋಭಾವಕ್ಕೆ ಎನ್‌ಎಸ್‌ಎಸ್ ಸಹಕಾರಿ

ವಿನಯ ಆಶೋಕ ನಾಯ್ಕ

ಮುಧೋಳ: ಜವಾಬ್ದಾರಿಯುತ ನಾಗರಿಕರನ್ನು ನಿರ್ಮಾಣ ಮಾಡುವಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ರೂಪಿಸುವಲ್ಲಿ ಎನ್‌ಎಸ್‌ಎಸ್ ಮಹತ್ವದ ಸ್ಥಾನ ಪಡೆದಿದೆ ಎಂದು ಜಿಪಂ ಮಾಜಿ ಸದಸ್ಯ ಕೆ.ಟಿ. ಪಾಟೀಲ ಹೇಳಿದರು.

ತಾಲೂಕಿನ ಉತ್ತೂರ ಗ್ರಾಮದ ಶಿವ ಶರಣ ಮಂಟಪ ಆವರಣದಲ್ಲಿ ಬಿವಿವಿ ಸಂಘದ ದಾನಮ್ಮದೇವಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಿಳಾ ಮಹಾವಿದ್ಯಾಲಯ ಎನ್‌ಎಸ್‌ಎಸ್ ಘಟಕ 1 ಮತ್ತು 2 ರ ಅಡಿಯಲ್ಲಿ ಗುರುವಾರ ಆಯೋಜಿಸಿದ್ದ ವಾರ್ಷಿಕ ವಿಶೇಷ ಸೇವಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಹನಮಂತ ಗುಡೆಪ್ಪನವರ ಮಾತನಾಡಿ, ಸೇವಾ ಮನೋಭಾವದ ಜತೆಗೆ ವ್ಯಕ್ತಿತ್ವ ನಿರ್ಮಾಣ ಮಾಡುವಂತಹ ಉತ್ತಮ ಉಪನ್ಯಾಸಗಳ ಲಾಭ ಪಡೆದುಕೊಳ್ಳಿ. ಉತ್ತೂರ ಗ್ರಾಮ ಬಸಯ್ಯಜ್ಜ ನೆಲೆಸಿದ ಪುಣ್ಯದ ನೆಲವಾಗಿದ್ದು, ಇಲ್ಲಿ ನಿಷ್ಠೆಯಿಂದ ನಡೆದುಕೊಂಡರೆ ಇಷ್ಟಪಟ್ಟಿದ್ದನ್ನುಪಡೆದುಕೊಳ್ಳುವಿರಿ ಎಂದರು.

ಚಂದ್ರಶೇಖರಯ್ಯ ಮಠಪತಿ ಸಾನ್ನಿಧ್ಯ ವಹಿಸಿದ್ದರು. ಗಜಾನನ ಮಡಿವಾಳರ, ಕಾಲೇಜಿನ ಪ್ರಾಚಾರ್ಯ ಪ್ರೊ. ಎಂ.ಎಂ. ಹಿರೇಮಠ ಮಾತನಾಡಿದರು.

ಎನ್‌ಎಸ್‌ಎಸ್ ಘಟಕ-1 ರ ಶಿಬಿರಾಧಿಕಾರಿ ಪ್ರೊ. ಎಸ್.ಕೆ. ಸಾರವಾಡ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎನ್‌ಎಸ್‌ಎಸ್ ಘಟಕದ-2 ಶಿಬಿರಾಧಿಕಾರಿ ಡಾ. ಪಿ.ವಿ. ಮನಗೂಳಿ ಸ್ವಾಗತಿಸಿದರು. ಪ್ರೊ.ಎ.ಸಿ.ಕೆರೂರ ವಂದಿಸಿದರು. ಪ್ರೊ. ಬಿ.ಎನ್. ಬಾರಕೇರ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕ ಪ್ರೊ. ಎ.ಎನ್. ಬಾಗೇವಾಡಿ, ಗ್ರಾಮದ ಪ್ರಮುಖ ಕಾಡಪ್ಪ ಅರಳಿಮಟ್ಟಿ, ಮಹಾವಿದ್ಯಾಲಯದ ಎಲ್ಲಾ ಬೋಧಕ-ಬೋಧಕೇತರ ವರ್ಗ ಹಾಗೂ ಎನ್‌ಎಸ್‌ಎಸ್ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.