ಜಿಲ್ಲೆ

ಆಕಸ್ಮಿಕ ಸಾವನ್ನಪ್ಪಿದ ಎನ್​ಎಸ್​ಎಸ್ ಶಿಬಿರಾರ್ಥಿ

Gadag - Desk - Tippanna Avadoot

ಅಂಕೋಲಾ: ಎನ್​ಎಸ್​ಎಸ್ ಶಿಬಿರಕ್ಕೆ ತೆರಳಿದ ವಿದ್ಯಾರ್ಥಿಯೊಬ್ಬಳು ಆಕಸ್ಮಿಕವಾಗಿ ನಿಧನ ಹೊಂದಿದ ಘಟನೆ ತಾಲೂಕಿನ ಬೆಳಸೆ ಗ್ರಾಪಂ ವ್ಯಾಪ್ತಿಯ ಸೊಣಗಿಮಕ್ಕಿ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.

ಇಲ್ಲಿನ ಜಿ.ಸಿ. ಕಾಲೇಜಿನಲ್ಲಿ ಬಿಎಸ್ಸಿ 4ನೇ ಸೆಮಿಸ್ಟರ್ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಅನುಷಾ ರವಿ ವಂದಿಗೆ (20) ಎನ್ನುವ ಮೃತಪಟ್ಟ ವಿದ್ಯಾರ್ಥಿನಿ. ಕಾಲೇಜ್ ವತಿಯಿಂದ ಸೊಣಗಿಮಕ್ಕಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಎನ್​ಎಸ್​ಎಸ್ ಶಿಬಿರ ಹಮ್ಮಿಕೊಂಡಿದ್ದರು. ಮಧ್ಯಾಹ್ನ 2.30ರ ಸುಮಾರಿಗೆ ಶಿಬಿರದಲ್ಲಿ ಪಾಲ್ಗೊಳ್ಳುವ ಸಮಯದಲ್ಲಿ ಅನುಷಾ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡು ಅಸ್ವಸ್ಥಳಾಗಿದ್ದಳು. ತಕ್ಷಣ ಎನ್​ಎಸ್​ಎಸ್ ಕಾರ್ಯಕ್ರಮ ಅಧಿಕಾರಿ ಡಾ.ನಂಜುಂಡಯ್ಯ ತಮ್ಮ ಕಾರಿನಲ್ಲಿ ಕರೆದುಕೊಂಡು ಪಟ್ಟಣದ ಆರ್ಯಾ ಮೆಡಿಕಲ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸುತ್ತಿದ್ದಂತೆ ಆಕೆ ಮೃತಪಟ್ಟಿರುವುದಾಗಿ ಅಲ್ಲಿಯ ವೈದ್ಯರು ಖಚಿತಪಡಿಸಿದ್ದಾರೆ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಪರಿಹಾರ : ಅನುಷಾ ವಂದಿಗೆ ಆಕಸ್ಮಿಕ ಸಾವಿನ ಹಿನ್ನೆಲೆಯಲ್ಲಿ ರಾಜ್ಯ ಎನ್​ಎಸ್​ಎಸ್ ಘಟಕದಿಂದ 1 ಲಕ್ಷ ರೂ. ಮತ್ತು ಕೆನರಾ ವೆಲ್​ಫೇರ್ ಟ್ರಸ್ಟ್ ಮತ್ತು ಉಪನ್ಯಾಸಕರ ವೃಂದದವರು ಸೇರಿ 1.50ಲಕ್ಷ ರೂ. ಪರಿಹಾರ ನೀಡುವುದಾಗಿ ಘೊಷಣೆ ಮಾಡಿದ್ದಾರೆ.