ಸಂಕೇಶ್ವರ: ಸೇವಾ ಮನೋಭಾವನೆ ಬೆಳೆಸಿಕೊಳ್ಳಲು ಎನ್‌ಎಸ್‌ಎಸ್ ಶಿಬಿರ ಉತ್ತಮ ವೇದಿಕೆಯಾಗಿದೆ. ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಇಲ್ಲಿ ಕಲಿತ ವಿಷಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಜತೆಗೆ ಸಮಾಜದ ಒಳಿತಿಗಾಗಿ ಸದ್ಬಳಕೆ ಮಾಡಿಕೊಳ್ಳುವಂತೆ ಪ್ರಾಚಾರ್ಯ ಬಸವರಾಜ ಹಾಲಭಾವಿ ತಿಳಿಸಿದರು.
ಸಮೀಪದ ನಿಡಸೋಸಿಯ ಎಸ್‌ಎನ್‌ಜೆಪಿಎಸ್ ಟ್ರಸ್ಟ್‌ನ ಕಂಪ್ಯೂಟರ್ ಅಪ್ಲಿಕೇಷನ್ ಹಾಗೂ ವಿಜ್ಞಾನ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ವತಿಯಿಂದ ಹೆಬ್ಬಾಳ ಗ್ರಾಮದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ನಿಡಸೋಸಿ ದುರದುಂಡೀಶ್ವರ ಮಠದ ಶ್ರೀಗಳ ಮಾರ್ಗದರ್ಶನ ಹಾಗೂ ಗ್ರಾಮಸ್ಥರ ಸಂಪೂರ್ಣ ಸಹಕಾರದಿಂದ ಶಿಬಿರ ಯಶಸ್ವಿಯಾಗಿದೆ ಎಂದರು. ಯೋಗಾ ಗುರು ಕಾರ್ತಿಕ ಮಠಪತಿ ಮಾತನಾಡಿ, ದೇಹಕ್ಕೆ ಆಹಾರ ಹೇಗೆ ಅಗತ್ಯವೋ, ಹಾಗೆ ಪ್ರತಿನಿತ್ಯ ಯೋಗ ಮತ್ತು ಧ್ಯಾನದ ಅಭ್ಯಾಸ ಅವಶ್ಯವಾಗಿವೆ. ಆದ್ದರಿಂದ, ವಿದ್ಯಾರ್ಥಿಗಳು ದೈನಂದಿನ ಜೀವನದಲ್ಲಿ ಯೋಗ ಅಳವಡಿಸಿಕೊಳ್ಳಬೇಕು ಎಂದರು.
ತಾಪಂ ಮಾಜಿ ಸದಸ್ಯ ಕುಶಾಲ ಖೋತ, ಮುಖ್ಯ ಶಿಕ್ಷಕ ಅಜಿತ್ ತಳವಾರ, ಗ್ರಾಪಂ ಸದಸ್ಯ ಅಪ್ಪಯ್ಯ ಪಾಟೀಲ, ಎಸ್‌ಎನ್‌ಜೆಪಿಎಸ್ ಟ್ರಸ್ಟ್‌ನ ಪಾಲಿಟೆಕ್ನಿಕ್ ಪ್ರಾಚಾರ್ಯ ಬಿ.ಆರ್.ಉಮರಾಣೆ, ಸಿಬಿಎಸ್‌ಸಿ ಪ್ರಾಚಾರ್ಯ ಯು.ಬಿ.ನಾಯಿಕ, ವಿಜಯ ಮಠಪತಿ, ಶಿಬಿರಾಧಿಕಾರಿ ಆನಂದ ಸೋನಾರ ಇತರರು ಇದ್ದರು. ಪ್ರಿಯಾಂಕಾ ಮಡಿವಾಳ ಸ್ವಾಗತಿಸಿದರು. ಶ್ವೇತಾ ಮುಗಳಿ ನಿರೂಪಿಸಿದರು. ಉಪನ್ಯಾಸಕ ಗುರುನಾಥ ಪಾತ್ರೋಟ ವಂದಿಸಿದರು.