ವಿಜಯಪುರ ನಗರ ಹೊರವಲಯದ ತೊರವಿಯಲ್ಲಿ ಬಿಎಲ್ಡಿಈ ಸಂಸ್ಥೆಯ ಎವಿಎಸ್ ಆಯುರ್ವೇದ ಮಹಾವಿದ್ಯಾಲಯ ಮತ್ತು ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ವತಿಯಿಂದ ಜಲ ಸಂರಕ್ಷಣೆ ಅಭಿಯಾನ ನಡೆಯಿತು. ಸಿರಾಜುದ್ದೀನ್ ಹೊರಗಿನಮನಿ, ಡಾ. ವಿಜಯಲಕ್ಷ್ಮಿ ಬೆನಕಟ್ಟಿ, ಡಾ. ಸುನಿತಾ ಮತ್ತಿತರರಿದ್ದಾರೆ.  
ಜಿಲ್ಲೆ

ತೊರವಿಯಲ್ಲಿ ಎನ್‌ಎಸ್‌ಎಸ್ ಶಿಬಿರ

Vijyapura - Parsuram Bhasagi

ವಿಜಯಪುರ: ನಗರದ ಬಿಎಲ್ಡಿಈ ಸಂಸ್ಥೆಯ ಎವಿಎಸ್ ಆಯುರ್ವೇದ ಮಹಾವಿದ್ಯಾಲಯ ಮತ್ತು ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ತೊರವಿ ಗ್ರಾಮದ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಏಳು ದಿನಗಳ ಎನ್‌ಎಸ್‌ಎಸ್ ಶಿಬಿರದ ಅಂಗವಾಗಿ ಮಂಗಳವಾರ ಜಲ ಸಂರಕ್ಷಣೆ ಅಭಿಯಾನದ ಉದ್ಘಾಟನೆ ನಡೆಯಿತು.

ಪರಿಸರ ತಜ್ಞ ಮತ್ತು ಹೈ ಲರ್ನ್ ಎಜ್ಯುಟೆಕ್ ಇನ್ಸ್ಟಿಟ್ಯೂಟ್ ನಿರ್ದೇಶಕ ಸಿರಾಜುದ್ದೀಮ್ ಹೊರಗಿನಮನಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡುತ್ತ, ಪರಿಸರ ಮತ್ತು ಜಲಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಈ ಕುರಿತು ಶಿಬಿರಾರ್ಥಿಗಳು ಜನ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಸಂಚಾಲಕ ಡಾ. ರಾವ್‌ಸಾಹೇಬ ಎ. ದೇಶಮುಖ, ಡಾ. ವಿಜಯಲಕ್ಷ್ಮಿ ಬೆನಕಟ್ಟಿ, ಡಾ. ಸುನಿತಾ ಮತ್ತಿತರರಿದ್ದರು. ಜಲ ಸಂರಕ್ಷಣೆ ಅಭಿಯಾನ ಕುರಿತು ಜನಜಾಗೃತಿ ಜಾಥಾ ಮತ್ತು ಬೀದಿ ನಾಟಕ ನಡೆಯಿತು.