ಜಿಲ್ಲೆ

ತೋಕೂರು ಶಾಲೆಯಲ್ಲಿ ಎನ್ನೆಸ್ಸೆಸ್ ಶಿಬಿರ ಉದ್ಘಾಟನೆ

ಸೌಮ್ಯ ಆರ್

ಕಿನ್ನಿಗೋಳಿ: ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಪ್ರೊಫೆಶನಲ್ ಎಜುಕೇಶನ್, ಗ್ಲೋಬಲ್ ಟಿವಿ, ಲಯನ್ಸ್ ಕ್ಲಬ್ ಮಂಗಳೂರು, ಟುಗೆದರ್ ವೀ ಗ್ರೋ, ನಿಟ್ಟೆ ದಾನ ಫೆಸ್ಟ್, ಎಆರ್‌ಎಂ ನ್ಯೂಸ್, ಶಾಶ್ವತ ಸೇವಾ ಮತ್ತು ಗ್ಲೋಬಲ್ ಜ್ಞಾನ ಅಕಾಡೆಮಿ ಸಹಯೋಗದಲ್ಲಿ ತೋಕೂರು ಡಾ.ಎಂ.ರಾಮಣ್ಣ ಶೆಟ್ಟಿ ಮೆಮೋರಿಯಲ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್‌ನಲ್ಲಿ ಶುಕ್ರವಾರ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆಗೊಂಡಿತು.

ಪಡೀಲ್ ನಿಟ್ಟೆ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಡಾ.ಜ್ಞಾನೇಶ್ವರ ಪೈ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಬಾರಿ ಗ್ರಾಮೀಣ ಭಾಗವಾದ ತೋಕೂರಿನಲ್ಲಿ ಶಿಬಿರ ಹಮ್ಮಿಕೊಂಡಿದ್ದು, ಮಕ್ಕಳಿಗೆ ಗ್ರಾಮೀಣ ಪರಿಸರದ ಅರಿವು ದೊರೆಯಲಿದೆ. ಪಟ್ಟಣದಲ್ಲಿನ ವಿದ್ಯಾರ್ಥಿಗಳೂ ಹಳ್ಳಿ ಬದುಕಿನ ಬಗ್ಗೆ ತಿಳಿಯಲಿದ್ದಾರೆ ಎಂದರು.

ಗ್ಲೋಬಲ್ ಜ್ಞಾನ ಅಕಾಡೆಮಿ ವ್ಯವಸ್ಥಾಪಕ ನಿರ್ದೇಶಕ ಡಾ.ರುಕ್ಸಾನಾ ಹಸನ್, ಮೂಲ್ಕಿ ಸಿವಿಲ್ ಇಂಜಿನಿಯರ್ಸ್ ಸಂಘದ ಸ್ಥಾಪಕ ಅಧ್ಯಕ್ಷ ಜೀವನ್ ಕೆ.ಶೆಟ್ಟಿ, ನಿಟ್ಟೆ ಶಿಕ್ಷಣ ಸಂಸ್ಥೆ ಡಾ.ಸೈಯದ್ ರಿಯಾಜ್ ಅಹಮ್ಮದ್, ಎನ್‌ಎಸ್‌ಎಸ್ ಸಂಯೋಜಕ ಶಶಿಕುಮಾರ್ ಶೆಟ್ಟಿ, ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಪುಷ್ಪರಾಜ್ ಚೌಟ, ಶಿಕ್ಷಕಿ ಸುಧಾ ಹೆಗ್ಡೆ, ವಿಜಯಾ ಕಿಣಿ ಮತ್ತಿತರರು ಉಪಸ್ಥಿತರಿದ್ದರು. ಎನ್‌ಎಸ್‌ಎಸ್ ಸಂಯೋಜಕರಾದ ರಶ್ಮಿ ಹೆಗ್ಡೆ ಮತ್ತು ರಿಯಾಜ್, ವಿದ್ಯಾರ್ಥಿ ಸಂಯೋಜಕರಾದ ಶ್ರೇಯಾ ರಾವ್ ಮತ್ತು ಕೌಶಿಕ್ ಶೆಟ್ಟಿ ಕಾರ್ಯಕ್ರಮ ನಡೆಸಿಕೊಟ್ಟರು.