ಜಿಲ್ಲೆ

ಬೆಟ್ಟಂಪಾಡಿ ಎನ್‌ಎಸ್‌ಎಸ್ ಘಟಕದಿಂದ ಒಂದು ದಿನದ ಶಿಬಿರ

Mangaluru - Nishantha Narayana

ಪುತ್ತೂರು: ಬೆಟ್ಟಂಪಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎನ್‌ಎಸ್‌ಎಸ್ ಘಟಕಗಳ ವತಿಯಿಂದ ಸ್ವಚ್ಛತಾ ಹಿ ಸೇವಾ ಸಪ್ತಾಹದ ಅಂಗವಾಗಿ ಒಂದು ದಿನದ ಶಿಬಿರ ಪುತ್ತೂರು ತಾಲೂಕು ಆಸ್ಪತ್ರೆಯಲ್ಲಿ ಸ್ವಚ್ಛತಾ ಕಾರ್ಯ ಮತ್ತು ಆರೋಗ್ಯ ಜಾಗೃತಿ ಮೂಲಕ ನಡೆಸಲಾಯಿತು.

ತಾಲೂಕು ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಆಶಾ ಜ್ಯೋತಿ, ಬಿಎಚ್ ಇ ಒ ಪದ್ಮಾವತಿ ಸ್ವಚ್ಛತೆ ಹಾಗೂ ಆರೋಗ್ಯದ ಜಾಗೃತಿ ಮಾಹಿತಿ ನೀಡಿದರು. ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶಿಶಿರ ರೇಬಿಸ್ ಖಾಯಿಲೆ ಯ ಬಗ್ಗೆ ಹಾಗೂ ಸಿಪಿಆರ್ ನ ಬಗ್ಗೆ ಮಾಹಿತಿ ನೀಡಿದರು. ತಾಲೂಕು ಆಸ್ಪತ್ರೆಯ ಕ್ಷಯ ರೋಗ ವಿಭಾಗದ ರವಿಕುಮಾರ್ ಕ್ಷಯ ರೋಗದ ಬಗ್ಗೆ ಮಾಹಿತಿ ನೀಡಿದರು. ಡಾ. ಸಾಜಿದ ತುರ್ತು ಚಿಕಿತ್ಸಾ ಕ್ರಮಗಳ ಬಗ್ಗೆ ತಿಳಿಸಿದರು.

ಎಲ್ಲ ಸ್ವಯಂ ಸೇವಕರು ಸೇರಿ ಆಸ್ಪತ್ರೆಯ ಸುತ್ತಮುತ್ತ ಪ್ಲಾಸ್ಟಿಕ್ ಮುಕ್ತ ಪರಿಸರ ಹಾಗೂ ಆರೋಗ್ಯದ ಆರೋಗ್ಯದ ಜಾಗೃತಿ ಮೂಡಿಸಲು ಸ್ವಚ್ಛತೆಯನ್ನು ಮಾಡಿದರು. ಎನ್‌ಎಸ್‌ಎಸ್ ಸ್ವಯಂ ಸೇವಕರು ಸಾರ್ವಜನಿಕರಿಗೆ ಆರೋಗ್ಯ ಮತ್ತು ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಬೀದಿ ನಾಟಕವನ್ನು ನಡೆಸಿದರು.

ಎನ್.ಎಸ್.ಎಸ್. ಯೋಜನಾ ಅಧಿಕಾರಿ ಡಾ. ಲಾಯ್ಡ್ ವಿಕ್ಕಿ ಡಿಸೋಜ, ಎನ್‌ಎಸ್‌ಎಸ್ ಯೋಜನಾಧಿಕಾರಿ ಡಾ. ಯೋಗಿಶ್ ಎಲ್. ಎನ್. ಉಪಸ್ಥಿತರಿದ್ದರು.