Oplus_131072 
ಜಿಲ್ಲೆ

ಕಾಮರ್ಸ್ ಕಾಲೇಜ್ ಎನ್ ಎಸ್ ಎಸ್ ಘಟಕದಿಂದ ದತ್ತು ಗ್ರಾಮದಲ್ಲಿ ವನಮಹೋತ್ಸವ

Gadag - Shivanand Hiremath

Gadag: ನಗರದ ಆದರ್ಶ ಶಿಕ್ಷಣ ಸಂಸ್ಥೆಗೆ ವಾಣಿಜ್ಯ ಮಹಾವಿದ್ಯಾಲಯದ ಎನ್ ಎಸ್ ಎಸ್ ಘಟಕದಿಂದ  ದತ್ತು ಗ್ರಾಮ ಅಂತೂರು ಬೆಂತೂರು ಪ್ರಾಥಮಿಕ ಶಾಲಾ ಆವರಣದಲ್ಲಿ ವನಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಎಸ್‌ ಡಿ ಎಂ ಸಿ ಅಧ್ಯಕ್ಷರಾದ ಶ್ರೀ ಬಿ. ಎ ಮನಕವಾಡ ಚಾಲನೆ ನೀಡಿದರು. ಎಸ್ ಡಿ ಎಂ ಸಿ  ಸದಸ್ಯರಾದ ಶ್ರೀಯುತ ಬಿರಸಲದ ಮಾತನಾಡಿ

ಪ್ರಾಚೀನ ಕಾಲದಿಂದಲೂ ಭಾರತ ದೇಶದಲ್ಲಿ ಮರ ಗಿಡಗಳಿಗೆ ವಿಶೇಷ ಪ್ರಾಶಸ್ಯ, ಮನ್ನಣೆ ನೀಡಲಾಗುತ್ತಿದೆ. ದೇವತೆಗಳು, ನೀರು, ಸಸ್ಯಗಳು, ಅರಣ್ಯ ವೃಕ್ಷಗಳು ನಮ್ಮ ಪ್ರಾರ್ಥನೆಯನ್ನು ಮನ್ನಿಸಲಿ. ಅವರ ಅನುಗ್ರಹ ನಮ್ಮನ್ನು ಸದಾ ರಕ್ಷಿಸಲಿ' -ಎಂದು ಭಾರತದ ಋಷಿಮುನಿಗಳು ಪ್ರಾರ್ಥಿಸುತ್ತಿದ್ದರು. ವೃಕ್ಷಗಳನ್ನು ದೇವರ ಸಮಾನ ಎಂದು ಆರಾಧಿಸುತ್ತಿದ್ದರು. ಇಂದಿಗೂ ಅಶ್ವತ್ಥ  ಬನ್ನಿ  ಎಕ್ಕ ಇತ್ಯಾದಿ ಗಿಡ ಮರಗಳನ್ನು ಪೂಜಿಸುವುದನ್ನು ನಾವು ಕಾಣಬಹುದು ಎಂದು ಶಾಲಾ ಮಕ್ಕಳು ಮತ್ತು ಸ್ವಯಂಸೇವಕರು ಉದ್ದೇಶಿಸಿ ಮಾತನಾಡಿದರು. 

ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಪ್ರೊ. ಬಿ.ಪಿ ಜೈನರವರು ಮಾತನಾಡಿ ಬರಿ ವರ್ಷಕ್ಕೆ ಒಮ್ಮೆ ವಾರ್ಷಿಕ ಶಿಬಿರಗಳನ್ನು ಮಾಡುವ ಮೂಲಕ ದತ್ತು ಗ್ರಾಮಗಳನ್ನು ಸ್ವೀಕರಿಸುವ ಬದಲು ಇಡೀ ವರ್ಷವೂ ಆ ಗ್ರಾಮಕ್ಕೆ ಶಾಲೆಗೆ ಪರಿಸರ ಆರೋಗ್ಯ ಶಿಕ್ಷಣ ಜಾಗೃತಿ ಕಾರ್ಯಕ್ರಮಗಳನ್ನು  ಹಮ್ಮಿಕೊಳ್ಳಬೇಕೆಂದು ಸ್ವಯಂಸೇವರ್ಕರಿಗೆ ತಿಳಿಸುತ್ತಾ  ದಿನೇ ದಿನೇ ಜಗತ್ತಿನಲ್ಲಿ ಜನಸಂಖ್ಯೆ ಹೆಚ್ಚತೊಡಗಿತು. ವ್ಯವಸಾಯಕ್ಕೆ  ದನಕರುಗಳ ಮೇವಿಗೆ ಭೂಮಿ ಸಾಲದಾಯಿತು. ಕಾಡು ಪ್ರದೇಶ ಕ್ರಮೇಣ ಕಡಿಮೆಯಾಯಿತು. ಮರಗಳನ್ನು ಉರುವಲಿಗಾಗಿ ಮರದ ಸಾಮಾನು ಮತ್ತಿತರ ವಸ್ತುಗಳಿಗಾಗಿ ಮನೆ ಇತ್ಯಾದಿ ಕಟ್ಟುವುದಕ್ಕಾಗಿ ಕಡಿಯುವುದು ಪ್ರಾರಂಭವಾಯಿತು. ಆದರೆ ಕಡಿದ ಮರಕ್ಕೆ ಸಮನಾಗಿ ಮರಗಳನ್ನು ಬೆಳೆಸುವ ಪ್ರವೃತ್ತಿ ಜನರಲ್ಲಿ ಇಲ್ಲದಂತಾಯಿತು. ಹೊಸದಾಗಿ ಸಸಿಗಳನ್ನು ನೆಟ್ಟು ಅರಣ್ಯವನ್ನು ಬೆಳೆಸುವುದರಿಂದ, ಪರಿಸರ ಮಾಲಿನ್ಯವನ್ನು ತಡೆಯುವುದರ ಅಗತ್ಯ ಜನರಲ್ಲಿ ಕಂಡುಬಂದಿತು. 'ಹೊಸ ಸಸಿಗಳನ್ನು ಬೆಳೆಸಿ ಜೀವ ಉಳಿಸಿಕೊಳ್ಳಿ' ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕೆಂದು ತಮ್ಮ ಮಾತುಗಳಲ್ಲಿ ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲೆಯ ದೈಹಿಕ ನಿರ್ದೇಶಕರಾದ ಶ್ರೀಯುತ ಅಂಗಡಿ. ಗ್ರಾಮದ ಹಿರಿಯರಾದ ಸಂತೋಷ್ ಮನಕವಾಡ, ಬಸುವರಾಜ ಜೈನರ್ ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳಾದ ಮನೋಜ್ ದಲ ಬಂಜನ್, ಶಿವಯೋಗಿ ಗಡ್ಡದ್ಮಠ, ಆದರ್ಶ ಅಕ್ಕಿ, ಸ್ವಯಂ ಸೇವಕರಾದ ಶಶಾಂಕ್, ಸಂಗಮೇಶ್, ಮೇಘ, ರಂಜಿತ, ವರ್ಷ, ಆಕಾಶ್, ಫಕೀರಜ್ಜ ಶಾಲಾ ಮಕ್ಕಳು ಸ್ವಯಂಸೇವಕ್ಕ ಸೇವಕರು ಉಪಸ್ಥಿತರಿದ್ದರು.