ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರ ಪ್ರದೇಶಗಳು ವೇಗವಾಗಿ ಅಭಿವೃದ್ಧಿ ಹೊಂದುತ್ತಿವೆ. ಆದರೆ, ಎಷ್ಟೋ ಹಳ್ಳಿಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಇದೆ. ವಿದ್ಯಾಭ್ಯಾಸ, ಉದ್ಯೋಗ, ಆರೋಗ್ಯ ಸೇವೆಗೆ ನಗರಗಳನ್ನು ಅವಲಂಬಿಸಬೇಕಾಗಿದೆ. ಗ್ರಾಮದ ಜನರಲ್ಲಿ ಆರೋಗ್ಯ, ಸ್ವಚ್ಚತೆ. ಶಿಕ್ಷಣದ ಬಗ್ಗೆ ಅರಿವು ಮೂಡಿಸುತ್ತಿರುವ ಎನ್‌ಎಸ್‌ಎಸ್ ಕಾರ್ಯ ಶ್ಲಾಘನೀಯ ಎಂದು ಡಾ. ಅಜಿತ ಪ್ರಸಾದ ಹೇಳಿದರು.
ನಗರದ ಜೆಎಸ್‌ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯು ತಾಲೂಕಿನ ನಾಯಕನ ಹುಲಿಕಟ್ಟಿ ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಕಲಿಕೆಗೆ ಜನತಾ ಶಿಕ್ಷಣ ಸಮಿತಿಯಿಂದ ಸ್ಮಾರ್ಟ್ ಬೋರ್ಡ್ ಪ್ರೊಜೆಕ್ಟರ್ ದೇಣಿಗೆ ನೀಡಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.
ರಾಜ್ಯ ಪ್ರಶಸ್ತಿ ಪುರಸ್ಕೃತ ಜಾನಪದ ಹಾಡುಗಾರ್ತಿ ಲಕ್ಷ್ಮೀಬಾಯಿ ಹರಿಜನರ ಅವರನ್ನು ಸನ್ಮಾನಿಸಲಾಯಿತು. ಮೈಲಾರಿ ಕುರುಬರ, ಶ್ರೀಕಾಂತ ರಾಗಿ ಕಲ್ಲಾಪುರ, ಮಹಾವೀರ ಉಪಾಧ್ಯೆ, ರೋನಿಲ್ ಮನೋಹರ, ಜಿನ್ನಪ್ಪ ಕುಂದಗೋಳ, ಶಿಕ್ಷಕರು, ಎಸ್‌ಡಿಎಸಿ ಸದಸ್ಯರಿದ್ದರು. ಎಸ್‌ಎಸ್‌ಎಸ್ ಅಽಕಾರಿ ಬಲಭೀಮ ಹಾವನೂರ ವಂದಿಸಿದರು.