ಪುತ್ತೂರು: ಎನ್‌ಎಸ್‌ಎಸ್‌ನಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳುವುದರ ಮೂಲಕ ವ್ಯಕ್ತಿತ್ವ ವಿಕಸನವಾಗುವುದಲ್ಲದೆ ವಿದ್ಯಾರ್ಥಿಯಲ್ಲಿ ನಾಯಕತ್ವ ಗುಣ ಹಾಗೂ ಜೀವನದಲ್ಲಿ ಯಶಸ್ಸನ್ನು ಸಾಽಸಲು ಸಹಾಯಕಾರಿಯಾಗುತ್ತದೆ ಎಂದು ಕಾಟುಕುಕ್ಕೆ ಎಸ್.ಎಸ್.ಎಚ್.ಎಸ್.ಎಸ್. ಉಪನ್ಯಾಸಕ ಮಹೇಶ್ ಏತಡ್ಕ ಹೇಳಿದರು.
ಬೆಟ್ಟಂಪಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ೨೦೨೫-೨೬ನೇ ಸಾಲಿನ ಶೈಕ್ಷಣಿಕ ವರ್ಷದ ಎನ್‌ಎಸ್‌ಎಸ್ ವಾರ್ಷಿಕ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.
ಕಾಲೇಜಿನ ಎನ್‌ಎಸ್‌ಎಸ್ ಘಟಕದ ನಿಕಟಪೂರ್ವ ನಾಯಕ ಸಾರ್ಥಕ್ ಟಿ. ಅನುಭವ ಹಂಚಿಕೊಂಡರು. ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಽಕಾರಿ ಡಾ.ಲಾಯ್ಡ್ ವಿಕ್ಕಿ ಡಿಸೋಜ ಶುಭ ಹಾರೈಸಿದರು. ನಿವೃತ್ತರಾಗಲಿರುವ ಕಾಲೇಜಿನ ಪ್ರಾಂಶುಪಾಲ ಡಾ.ವರದರಾಜ ಚಂದ್ರಗಿರಿ ಅವರನ್ನು ಗೌರವಿಸಲಾಯಿತು.
ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಚಾಲಕ ಪ್ರೊ.ರಾಮಚಂದ್ರ, ಕಲಾ ವಿಭಾಗ ಉಪನ್ಯಾಸಕ ದಾಮೋದರ, ಎನ್‌ಎಸ್‌ಎಸ್ ಘಟಕದ ಯೋಜನಾಽಕಾರಿ ಉದಯಶಂಕರ್, ಕನ್ನಡ ವಿಭಾಗ ಉಪನ್ಯಾಸಕ ಡಾ.ಸುಬ್ರಹ್ಮಣ್ಯ, ನಿರ್ವಹಣಾಶಾಸ್ತ್ರ ವಿಭಾಗ ಉಪನ್ಯಾಸಕಿ ಮಂಜುಳಾದೇವಿ ಉಪಸ್ಥಿತರಿದ್ದರು. ಘಟಕ ನಾಯಕ ತನುಷ್ ಸ್ವಾಗತಿಸಿದರು. ಘಟಕ ನಾಯಕಿ ವೀಕ್ಷಿತಾ ವಂದಿಸಿದರು. ಚೈತ್ರಾ ಕಾರ್ಯಕ್ರಮ ನಿರೂಪಿಸಿದರು. ಸಂದೇಶ್ ಸಹಕರಿಸಿದರು.