ಪುತ್ತೂರು: ಬೆಟ್ಟಂಪಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ವಾರ್ಷಿಕ ವಿಶೇಷ ಶಿಬಿರದಲ್ಲಿ ಸಂಪ್ಯ ಪೊಲೀಸ್ ಠಾಣೆಯ ಉಪನಿರೀಕ್ಷಕ ಜಂಬೂರಾಜ್ ಮಹಾಜನ್ ಮಾಹಿತಿ ನೀಡಿದರು.
ಕೃಷ್ಣಪ್ರಸಾದ್ ಆಳ್ವ, ಪಿ.ಜೆ.ಶಂಕರ್ ನಾರಾಯಣ ಭಟ್ ಮಾತನಾಡಿದರು. ಸಂತೋಷ್ ಮಣಿಯಾಣಿ ಅಧ್ಯಕ್ಷತೆ ವಹಿಸಿದ್ದರು. ಸ್ವಯಂಸೇವಕ ಪ್ರಜ್ವಲ್ ಆರ್.ಸಿ. ಅನುಭವ ಹಂಚಿಕೊಂಡರು.
ಒಳಮೊಗ್ರು ಗ್ರಾಪಂ ಸದಸ್ಯ ಪ್ರದೀಪ್, ದರ್ಬೆತ್ತಡ್ಕ ದ.ಕ. ಜಿಪಂ ಉ.ಹಿ.ಪ್ರಾ.ಶಾಲೆ ಎಸ್‌ಡಿಎಂಸಿ ಸದಸ್ಯ ಶೇಖರ, ಉಳ್ಳಾಕುಲು ದೇವಸ್ಥಾನ ಅಧ್ಯಕ್ಷ ಪ್ರವೀಣ್ ಪೂಜಾರಿ, ವಿದ್ಯಾರ್ಥಿ ಸಂಘ ಪ್ರಶಾಂತ್ ಕುರಿಂಜಿಮೂಲೆ ಉಪಸ್ಥಿತರಿದ್ದರು. ಶಿಬಿರಾರ್ಥಿ ನಮನ್ ಸ್ವಾಗತಿಸಿದರು. ದೀಕ್ಷಾ ವಂದಿಸಿದರು. ದೀಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.