ಸರ್ಕಾರಿ ಶಾಲೆಗಳು ಇಂದು ಅವ್ಯವಸ್ಥೆಯ ತಾಣಗಳಾಗಿ ಆಗುತ್ತಿವೆ ಈ ಶಾಲೆಗಳ ಉಳಿವಿಗಾಗಿ ಶ್ರಮಿಸಿದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸ್ವಯಂಸೇವಕ ಸೇವಕಿಯರ ಕಾರ್ಯಕ್ಕೆ ಗ್ರಾಮದ ಗುರುಹಿರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರ್ಶ ಶಿಕ್ಷಣ ಸಂಸ್ಥೆಯ ವಿ ಆರ್ ಕುಷ್ಟಗಿ ಮೆಮೋರಿಯಲ್ ಕಾಲೇಜ್ ಆಫ್ ಕಾಮರ್ಸ್ ನ ರಾಷ್ಟ್ರೀಯ ಸೇವಾ ಯೋಜನೆ ಘಟಕವು ವಾರ್ಷಿಕ ವಿಶೇಷ ಶಿಬಿರವನ್ನು ದತ್ತು ಗ್ರಾಮ ಅಂತೂರು ಬೆಂತೂರಿನಲ್ಲಿ ಹಮ್ಮಿಕೊಂಡಿದ್ದು ಶಿಬಿರದಲ್ಲಿ ಶ್ರಮದಾನವನ್ನ ಗ್ರಾಮದ ಪ್ರಾಥಮಿಕ ಶಾಲೆಯ ಕಾಂಪೌಂಡಿಗೆ ಬಣ್ಣ ಹಚ್ಚಿ ಹೊಸ ರೂಪವನ್ನೇ ಕೊಟ್ಟಿದ್ದಾರೆ. ಕಳೆದ ಒಂದು ವಾರದಿಂದ ಹಮ್ಮಿಕೊಂಡ ವಾರ್ಷಿಕ ವಿಶೇಷ ಶಿಬಿರದಲ್ಲಿ ಸ್ವಯಂ ಸೇವಕ ಸೇವಕಿಯರ ತಂಡ ಇಡೀ ಶಾಲೆಯನ್ನ ಸೂಚಿಗೊಳಿಸುವುದರೊಂದಿಗೆ ಬಣ್ಣ ಬಳೆಯುವ ಮೂಲಕ ಶಾಲೆ ಕಂಗೊಳಿಸುವಂತೆ ಮಾಡಿದ್ದಾರೆ.
ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿರುವ ಹಾಗೂ ನಿಸ್ವಾರ್ಥದಿಂದ ಕೆಲಸ ಮಾಡುತ್ತಿರುವುದು ಈ ವಿದ್ಯಾರ್ಥಿಗಳಿಗೆ ಅಂತೂರು ಬೆಂತೂರು ಗ್ರಾಮಸ್ಥರಿಂದ ಪ್ರಸಂಸೆಗೆ ಪಾತ್ರವಾಗಿರುವುದಲ್ಲದೇ ಗ್ರಾಮದ ಯುವಕರಿಗೆ ಪ್ರೇರಣೆಯೂ ಆಗಿದೆ ಅಷ್ಟೇ ಅಲ್ಲದೆ ಕೋವಿಡ್ ಲಾಕ್ ಡೌನ್ ಸಮಯದಲ್ಲಿ ಸುಮಾರು 30 ಸ್ವಯಂಸೇವಕರ ತಂಡ ಇಡೀ ಗ್ರಾಮಕ್ಕೆ ಸ್ಯಾನಿಟೈಸರ್ ಮಾಡುವ ಮೂಲಕ ಕರೋನ ರೋಗ ಹರಣದಂತೆ ಮುಂಜಾಗ್ರತಿ ವಹಿಸಿದ್ದರು ಈ ಎಲ್ಲಾ ಕಾರ್ಯಗಳನ್ನು ಸ್ಮರಿಸಿದ ಗ್ರಾಮದ ಗುರುಹಿರಿಯರು ಬರಿ ದತ್ತು ಗ್ರಾಮವೆಂದರೆ ಶಿಬಿರಕ್ಕೆ ಮಾತ್ರ ಸೀಮಿತವಾಗಬಾರದು ಇಂತಹ ಉತ್ತಮ ಕಾರ್ಯಗಳನ್ನ ಕೈಗೊಳ್ಳುವ ಮೂಲಕ ದೇಶದ ಸೇವೆಯನ್ನ ಮಾಡಬೇಕೆಂದು ಅನಿಕ ಗ್ರಾಮಸ್ಥರು ತಮ್ಮ ವಿಚಾರಗಳನ್ನ ವ್ಯಕ್ತಪಡಿಸಿದ್ದರು.
ಅಂತೂರು ಬೆಂತೂರು ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಶ್ರೀ ಪ್ರಕಾಶ್ ಗೌಡ ಎಚ್ ಪಾಟೀಲ್, ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ ಬಿ ಎ ಮನಕವಾಡ, ಶಾಲೆಯ ಪ್ರಧಾನ ಗುರುಗಳಾದ ಶ್ರೀ ಪಿ ಎಸ್ ಗಿಡ್ಡಣ್ಣವರ್, ಗ್ರಾಮ ಪಂಚಾಯತಿಯ ಎಲ್ಲ ಗೌರವಾನ್ವಿತ ಸದಸ್ಯರು, ಹಾಗೆ ಆದರ್ಶ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಚೇರ್ಮನ್ನರು ಹಾಗೂ ಪದಾಧಿಕಾರಿಗಳು, ಅಂತೂರ ಬೆಂತೂರ ಗ್ರಾಮದ ಹಿರಿಯರು ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕಾರ್ಯಕ್ರಮ ಅಧಿಕಾರಿಗಳಾದ ಪ್ರೊ. ಬಾಹುಬಲಿ ಪಿ ಜೈನರ ಹಾಗೂ ಸ್ವಯಂಸೇವಕ ಸೇವಕಿಯರು ಕೈಗೊಂಡ ಕಾರ್ಯಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.