ರಾಷ್ಟ್ರೀಯ ಕೌಶಲ ಅಭಿವೃದ್ಧಿ ಸಂಸ್ಥೆ (ಎನ್‌ಎಸ್‌ಡಿಎ) ವೈದ್ಯರ ಸಂಘಟನೆಯು ಬೆಂಗಳೂರಿನಲ್ಲಿ ಮೊದಲ ಬಾರಿಗೆ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಸಮ್ಮೇಳನ ಯಶಸ್ವಿಯಾಗಿ ನಡೆಯಿತು. ಈ ವೇಳೆ ಗ್ರಾಮೀಣ ಜನರಿಗೆ ಆರೋಗ್ಯ ಸೇವೆ ಒದಗಿಸುವ ಕುರಿತು ಚರ್ಚಿಸಲಾಯಿತು. ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕಿ ಡಾ. ಸುಜಾತಾ ರಾಥೋಡ್, ಶಾಸಕ ಚಂದ್ರು ಲಮಾಣಿ, ಡಾ. ವಾಸುದೇವ ನಾಯ್ಕ , ಎನ್‌ಎಸ್‌ಡಿಎ ಕರ್ನಾಟಕದ ಅಧ್ಯಕ್ಷ ಡಾ. ಡಿ. ಉಮೇಶ್, ಉಪಾಧ್ಯಕ್ಷ ಡಾ. ಹರೀಶ್ ಕುಮಾರ್, ಕಾರ್ಯದರ್ಶಿ ಡಾ. ಎಲ್. ಮಂಜುನಾಥ್, ಸೇರಿ ಎನ್‌ಎಸ್‌ಡಿಎ ಘಟಕದ ವೈದ್ಯರು ಪಾಲ್ಗೊಂಡಿದ್ದರು.