ಮುಳ್ಳೇರಿಯ: ಪೆರಿಯ ಗೋಕುಲಂ ಗೋಶಾಲೆಯಲ್ಲಿ ಪರಂಪರಾ ವಿದ್ಯಾಪೀಠದ ನೇತೃತ್ವದಲ್ಲಿ ನಡೆಯುತ್ತಿರುವ ವೈಶಾಖ ನಟನಂ ನೃತ್ಯೋತ್ಸವದ 4ನೇ ದಿನ ವಿವಿಧ ರಾಜ್ಯಗಳ ಕಲಾವಿದರು ನೃತ್ಯ ವೈಭವ ಪ್ರಸ್ತುತಪಡಿಸಿದರು.
ರಾಮಾ ವೇಣುಗೋಪಾಲ್ ಬೆಂಗಳೂರು ಮತ್ತು ಅವರ ಶಿಷ್ಯವೃಂದ ‘ಕಲಾ ಕಲ್ಪಕ್ಷೇತ್ರ’ ತಂಡ, ವೈಷ್ಣವಿ ನೃತ್ಯಶಾಲೆ ಬೆಂಗಳೂರು ತಂಡ ಭರತನಾಟ್ಯ ಪ್ರದರ್ಶಿಸಿದರು.
ಮುಂಬೈಯಿಂದ ಅದಿತಿ ಅಖಿಲ್, ವೈಷ್ಣವಿ ಸೂರ್ಯ ನಾರಾಯಣನ್ ನೃತ್ಯ ಸೇವೆ ನೀಡಿದರು. ಮಹಿತಾ ಸುರೇಶ್(ಚೆನ್ನೈ), ರಾಮಾ ನೃತ್ಯ ವಿಹಾರ(ಕೊಚ್ಚಿನ್), ಪನ್ನಗ ರಾವ್, ಅನಘಾಶ್ರೀ(ಉಡುಪಿ) ನೃತ್ಯ ಪ್ರಸ್ತುತಪಡಿಸಿದರು. ಹಿರಿಯ ಕಲಾವಿದೆ ಉಷಾ ರಾಣಿ ಅವರಿಂದ ಮೋಹಿನಿಯಾಟ್ಟಂ ಪ್ರದರ್ಶನಗೊಂಡಿತು. ವಿಶಾಖಪಟ್ಟಣಂ ತಂಡದ ಸೌಂದರ್ಯ ಮದ್ದಾಳಿ ಮತ್ತು ತಂಡ ಕೂಚಿಪುಡಿ ನೃತ್ಯ ಪ್ರದರ್ಶನ ನೀಡಿದರು.
ನೃತ್ಯ ಗುರು ನಿಲೇಶ್ವರಂ ಕಲಾಮಂಡಲಂ ಅಜಿತ್ ಅವರನ್ನು ಸನ್ಮಾನಿಸಲಾಯಿತು. ಉದುಮ ಶಾಸಕ ಸಿ.ಎಚ್.ಕುಞಂಬು ಉಪಸ್ಥಿತರಿದ್ದರು. ಮಂಗಳವಾರ ಸಂಜೆ ಗೋಶಾಲೆ ನಂದಿ ಮಂಟಪದಲ್ಲಿ ಅಶ್ವಿನಿ ನಂಬಿಯಾರ್ ಅವರಿಂದ ಮೋಹಿನಿಯಾಟ್ಟಂ, ನವ್ಯ ಭಟ್ ಅವರಿಂದ ಭರತನಾಟ್ಯ, ಮುಂಬೈನ ಐಶ್ವರ್ಯಾ ಹರೀಶ್ ಅವರಿಂದ ಭರತನಾಟ್ಯ ನಡೆಯಿತು.