ಜಿಲ್ಲೆ

ನೃತ್ಯ ವಿದ್ಯಾ ಪೀಠ ಅಕಾಡೆಮಿ ಅಕಾಡೆಮಿ ಆಫ್ ಕ್ಲಾಸಿಕಲ್ ಡ್ಯಾನ್ಸ್ ಅಂಡ್ ಇಂಡಿಯನ್ ಆರ್ಟ್ಸ್ ಸಂಸ್ಥೆಯ ‘ನರ್ತನ ದೀಪ್ತಿ-2025’ ಕಾರ್ಯಕ್ರಮ

ನೃತ್ಯ ವಿದ್ಯಾ ಪೀಠ ಅಕಾಡೆಮಿ ಅಕಾಡೆಮಿ ಆಫ್ ಕ್ಲಾಸಿಕಲ್ ಡ್ಯಾನ್ಸ್ ಅಂಡ್ ಇಂಡಿಯನ್ ಆರ್ಟ್ಸ್ ಸಂಸ್ಥೆಯು ‘ನರ್ತನ ದೀಪ್ತಿ-2025’ ಕಾರ್ಯಕ್ರಮವನ್ನು ಕಿರು ರಂಗಮಂದಿರದಲ್ಲಿ ಸೆ. 4 ರಂದು ಸಂ.5.45ಕ್ಕೆ ಆಯೋಜಿಸಿದೆ.

ಸಂಸ್ಥೆಯ ಹಿರಿಯ ಗುರುಗಳಾದ ಸಿ.ಎನ್.ಅನಿತಾ ಅವರ ಮಾರ್ಗದರ್ಶನದಲ್ಲಿ ಭರತನಾಟ್ಯ ಪ್ರದರ್ಶನ ನಡೆಯಲಿದೆ. ಸಂಸ್ಥೆಯ ಚಿಗುರು ಪ್ರತಿಭೆಗಳಾದ ಜಿ.ಎನ್.ಚಿತ್ಕಲ, ಸೌರವಿ, ನಿರಾಲಿ ಚಿದಂಬರ್ ಮತ್ತು ಎಚ್.ಜನ್ಮಿತ ವಿಶೇಷ ನೃತ್ಯ ಸಂಯೋಜನೆಯೊಂದಿಗೆ ಭರತನಾಟ್ಯ ಪ್ರದರ್ಶನ ನೀಡಲಿದ್ದಾರೆ.

ನೃತ್ಯ ಸಂಯೋಜನೆ, ನಿರ್ದೇಶನ ಹಾಗೂ ನಟುವಾಂಗ ನಿರ್ವಹಣೆ ಗುರು ವಿದುಷಿ ಸಿ.ಎನ್. ಅನಿತರವರದ್ದು, ಹಾಡುಗಾರಿಕೆಯಲ್ಲಿ ಕುಮಾರಿ ನಯನ ನಾಗರಾಜ್, ಮೃದಂಗ ವಾದನದಲ್ಲಿ ವಿದ್ವಾನ್ ಜಿ.ಟಿ.ಸ್ವಾಮಿ ಹಾಗೂ ಪಿಟೀಲು ವಾದನದಲ್ಲಿ ವಿದ್ವಾನ್ ತಾಂಡವಮೂರ್ತಿ ಪಕ್ಕ ವಾದ್ಯ ಸಹಕಾರ ನೀಡಲಿದ್ದಾರೆ. ಇದಕ್ಕೂ ಮುನ್ನ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ರಂಗಕರ್ಮಿ ಎಚ್.ಎಸ್.ಉಮೇಶ್ ಅವರು ‘ಧರ್ಮ ಮತ್ತು ರಂಗಭೂಮಿ’ ವಿಷಯದ ಉಪನ್ಯಾಸವನ್ನು ನೀಡಲಿದ್ದಾರೆ.

ನೃತ್ಯ ಮಂಟಪ ಟ್ರಸ್ಟ್ ನಿರ್ದೇಶಕಿ ನಾಟ್ಯಶ್ರೀ ವಿದುಷಿ ರೂಪಾ, ಸ್ವರ್ಣ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ಶೋಭಾ ಬಾಲಕೃಷ್ಣ, ಜಿ.ಕೆ.ಕಮಲ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.