ನೂಪುರ ಕಲಾವಿದರು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಡಿ.9 ಮತ್ತು 10ರಂದು ಕುವೆಂಪುನಗರದ ಗಾನಭಾರತಿ ರಮಾಗೋವಿಂದ ಕಲಾವೇದಿಕೆಯಲ್ಲಿ ಶ್ರೀಮತಿ ಕೆ.ವನಜಾಕ್ಷಮ್ಮ ಸಂಸ್ಮರಣಾರ್ಥ ‘ನೃತ್ಯ ಆರಾಧನಾ-2023’ ಕಾರ್ಯಕ್ರಮ ಆಯೋಜಿಸಲಾಗಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ 9ರಂದು ಸಂಜೆ 6.30ಕ್ಕೆ ತುಮಕೂರಿನ ವಿದುಷಿ ಬಾಲಾ ವಿಶ್ವನಾಥ್ ತಂಡದಿಂದ ‘ಭರತನಾಟ್ಯ’ ಪ್ರದರ್ಶನ ನಡೆಯಲಿದೆ. ಸಂಜೆ 7.30ಕ್ಕೆ ಬೆಂಗಳೂರಿನ ಭರತನೃತ್ಯ ಸಂಗೀತ ಅಕಾಡೆಮಿ ನಿರ್ದೇಶಕಿ ಡಾ.ಶುಭರಾಣಿ ಬೋಳಾರ್ ತಂಡದಿಂದ ‘ಭರತನಾಟ್ಯ’ ಪ್ರದರ್ಶನವಿರಲಿದೆ.
10ರಂದು ಸಂಜೆ 6.15ಕ್ಕೆ ವಿದುಷಿ ಲಲಿತಾ ಕೋರೆ ಎಂ.ರಾವ್ ಅವರಿಗೆ ‘ನೂಪುರಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕಾರ್ಮಿಕ ಸಚಿವಾಲಯದ ವಿಶ್ರಾಂತ ನಿರ್ದೇಶಕ ಕೆ.ಕೃಷ್ಣಮೂರ್ತಿ, ನಿವೃತ್ತ ಪ್ರಾಧ್ಯಾಪಕಿ ಪ್ರೊ.ಶಾರದಾ ಅಶೋಕರಾವ್, ವೈಕುಂಠ ಬಾಳಿಗ ಕಾನೂನು ಕಾಲೇಜಿನ ನಿರ್ದೇಶಕಿ ಡಾ.ನಿರ್ಮಲಾ ಹರಿಕೃಷ್ಣ, ಕಲಾ ಪೋಷಕ ಕೆ.ರಮೇಶರಾವ್ ಭಾಗವಹಿಸಲಿದ್ದಾರೆ.
ಬಳಿಕ ವಿದ್ವಾನ್ ಕೆ.ಆರ್.ವಿಶ್ವದೀಪ, ವಿದುಷಿ ರಮ್ಯಾ ಕಿರಣ್ ಹಾಗೂ ಮಂಜುಶ್ರೀ ಕಡಬ ಅವರಿಂದ ‘ಭರತನಾಟ್ಯ’ ಪ್ರದರ್ಶನ ನಡೆಯಲಿದೆ.