ಸುಂಕೇಶ್ವರ ಗ್ರಾಪಂ ಕಚೇರಿಗೆ ಬೇಲಿ ಹಾಕಿರುವ ನರೇಗಾ ಕೂಲಿ ಕಾರ್ಮಿಕರು. 
ಜಿಲ್ಲೆ

ನರೇಗಾ ಕೂಲಿ ಪಾವತಿಸಲು ಗ್ರಾಪಂ ಕಚೇರಿಗೆ ಬೇಲಿ

ಮಾನ್ವಿ: ನರೇಗಾ ಕೂಲಿ ಹಣ ಪಾವತಿಸದ ಹಿನ್ನೆಲೆಯಲ್ಲಿ ತಾಲೂಕಿನ ಸುಂಕೇಶ್ವರ ಗ್ರಾಪಂ ಕಚೇರಿ ಬಾಗಿಲಿಗೆ ಕೂಲಿ ಕಾರ್ಮಿಕರು ಶನಿವಾರ ಬೇಲಿ ಹಾಕಿ ಪ್ರತಿಭಟನೆ ನಡೆಸಿದರು.

ಮೇನಲ್ಲಿ ನರೇಗಾ ಯೋಜನೆಯಡಿ ನಾಲಾ ಹೂಳೆತ್ತುವ ಕಾಮಗಾರಿ ಕೈಗೊಳ್ಳಲಾಗಿತ್ತು. ಕೆಲಸ ಮಾಡಿದ ಕಾರ್ಮಿಕರಿಗೆ ಕೂಲಿ ಹಣ ಪಾವತಿಸುತ್ತಿಲ್ಲ. ನಾಲಾ ಹೂಳೆತ್ತುವ ಕಾಮಗಾರಿಗೆ ಕೆಲಸ ಮಾಡಲು ಬರುವಂತೆ ಅಧಿಕಾರಿಗಳು ತಿಳಿಸಿದ್ದರು.

ಅದರಂತೆ ಸ್ಥಳಕ್ಕೆ ಹೋದರೆ ಯಾರೂ ಇಲ್ಲ. ಮೂರ‌್ನಾಲ್ಕು ತಾಸು ಕಾದರೂ ಯಾರೂ ಬರಲಿಲ್ಲ. ಹೀಗಾಗಿ ಕಚೇರಿಗೆ ಬೇಲಿ ಹಾಕಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ ಕೂಲಿ ಕಾರ್ಮಿಕರು, ನರೇಗಾ ಕೂಲಿ ಪಾವತಿಸಬೇಕೆಂದು ಆಗ್ರಹಿಸಿದರು.