ಜಿಲ್ಲೆ

ಮಹಿಳೆಯರ ಸ್ವಾವಲಂಬಿ ಬದುಕಿಗೆ ನರೇಗಾ ಆಸರೆ

ಸೋಮನಾಥ ರೆಡ್ಡಿ

ಲಕ್ಷ್ಮೇಶ್ವರ: ಉದ್ಯೋಗ ಖಾತ್ರಿ ಯೋಜನೆಯು ಗ್ರಾಮೀಣ ಮಹಿಳೆಯರ ಜೀವನ ಹಸನಾಗಿಸಲು ಪ್ರಮುಖ ಪಾತ್ರ ವಹಿಸುತ್ತಿದ್ದು, ಯೋಜನೆಯ ಸದ್ಬಳಕೆಯಲ್ಲಿ ಎಲ್ಲರ ಸಹಭಾಗಿತ್ವ, ಸಹಕಾರ ಅತ್ಯಗತ್ಯವಾಗಿದೆ ಎಂದು ಎಡಿಪಿಸಿ ಕಿರಣಕುಮಾರ ಎಸ್.ಎಚ್ ಹೇಳಿದರು.

ತಾಲೂಕಿನ ಮಾಡಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಹಮ್ಮಿಕೊಂಡ ಉದ್ಯೋಗ ಖಾತ್ರಿ ಯೋಜನೆಯ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು. ‘ಉದ್ಯೋಗ ಖಾತ್ರಿ ಯೋಜನೆಯಡಿ ನಡೆಯುವ ಕಾಮಗಾರಿಗಳಲ್ಲಿ ಮಹಿಳಾ ಕಾರ್ಮಿಕರ ಸಂಖ್ಯೆಯನ್ನು ವೃದ್ಧಿಸಿ, ಅವರಲ್ಲಿ ಸ್ವಾವಲಂಬಿ ಮನೋಭಾವ ಬೆಳೆಸಲು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ನರೇಗಾ ಯೋಜನೆಯ ತಾಪಂ ಐಇಸಿ ಸಂಯೋಜಕ ವೀರೇಶ ಬಸನಗೌಡ್ರ ಮಾತನಾಡಿ, ಜಿಲ್ಲೆಯಲ್ಲಿಯೇ ಮಾಡಳ್ಳಿ ಗ್ರಾಮ ಪಂಚಾಯತಿ ಅತಿ ಕಡಿಮೆ ಮಹಿಳಾ ಪಾಲ್ಗೊಳ್ಳುವಿಕೆಯಿದೆ. ಇದನ್ನು ಹೆಚ್ಚಿಸುವಲ್ಲಿ ಗ್ರಾಮದ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಪಾತ್ರ ಪ್ರಮುಖವಾಗಿದೆ ಎಂದರು.
ತಾಂತ್ರಿಕ ಸಹಾಯಕ ಲಿಂಗರಾಜ ಅರಿಷಿಣದ ಮಾತನಾಡಿದರು.

ಗ್ರಾಪಂ ಸದಸ್ಯರಾದ ಬಸವರಡ್ಡಿ ಮರಡೂರ, ಹನುಮರಡ್ಡಿ ಹೊಂಬಳ, ಗಂಗಾಧರ ಸಂದಿಮನಿ, ಗ್ರಾಪಂ ಕಾರ್ಯದರ್ಶಿ ನವ್ಯಾ ಗಾವಡಿ, ಡಿಇಒ ಪ್ರಕಾಶ ಪಾಟೀಲ ಇತರರಿದ್ದರು.