ಜಿಲ್ಲೆ

10 ತಾಲೂಕುಗಳಿಂದ ಒಂದೂ ದೂರಿಲ್ಲ

Uttara Kannada - Subash Hegde

ಕಾರವಾರ: ಮಹಾತ್ಮ ಗಾಂಧಿ ರಾಷ್ಟ್ರೀಯ  ಉದ್ಯೋಗ ಖಾತ್ರಿ ಯೋಜನೆಯ ಜಾರಿಯಲ್ಲಿ ಆದ ಲೋಪಗಳ ಬಗ್ಗೆ ತನಿಖೆ ನಡೆಸಲು ಇರುವ ಒಂಬುಡ್ಸ್ಮನ್ ವ್ಯವಸ್ಥೆ ಗೆ ಜಾಗೃತಿ ಕೊರತೆಯಿಂದ ಹಿನ್ನಡೆಯಾಗಿದೆ. ಉದ್ಯೋಗ ಖಾತ್ರಿ ಯೋಜನೆಯ ಬಗ್ಗೆ ಗ್ರಾಪಂ ಹಂತದಲ್ಲಿ ಸಾಕಷ್ಟು ಆಕ್ಷೇಪಗಳು ಕೇಳಿ ಬರುತ್ತಿದ್ದರೂ ಅಽಕೃತವಾಗಿ ಒಂಬುಡ್ಸ್ಮನ್‌ಗೆ ದಾಖಲಾಗುವ ದೂರುಗಳ ಸಂಖ್ಯೆ ಬೆರಳೆಣಿಕೆಯಷ್ಟೇ ಇದೆ.

ಉತ್ತರ ಕನ್ನಡ ಜಿಯಲ್ಲಿ ಈ ಆರ್ಥಿಕ ವರ್ಷದ ಪ್ರಾರಂಭದಿಂದ ಇದುವರೆಗೆ ಎಂದರೆ ಕಳೆದ 6 ತಿಂಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ 29.55 ಕೋಟಿ ಮೊತ್ತದ ಕಾಮಗಾರಿಗಳಾಗಿವೆ. ಆದರೆ, ಬಗ್ಗೆ 8 ದೂರುಗಳು ಮಾತ್ರ ದಾಖಲಾಗಿವೆ. ಅವುಗಳಲ್ಲಿ 5 ಆಕ್ಷೇಪಣೆ ಅರ್ಜಿಗಳ ವಿಲೇವಾರಿಯಾಗಿದೆ. ಇನ್ನು ಮೂರು ದೂರುಗಳ ವಿಚಾರಣೆ ಬಾಕಿ ಇದೆ. 5 ದೂರುಗಳಲ್ಲಿ ಒಂದರಲ್ಲಿ ಅಕ್ರಮ ನಡೆದಿರುವುದು ಸಾಬೀತಾಗಿದೆ. ಇನ್ನು ಮೂರು ಕಾಮಗಾರಿಗಳಲ್ಲಿ ನಿಯಮ ಉಲ್ಲಂಘಿಸಿದ್ದು, ಕಂಡುಬಂದಿದ್ದು, ಸಂಬಂಧಪಟ್ಟ 9 ಅಧಿಕಾರಿಗಳಿಗೆ ಒಟ್ಟು 9 ಸಾವಿರ ರೂ. ದಂಡ ವಿಧಿಸಿ ಎಚ್ಚರಿಕೆ ನೀಡಲು ಒಂಬುಡ್ಸ್ಮನ್ ಶಿಫಾರಸು ಮಾಡಿದ್ದಾರೆ.

ಹಲವು ತಾಲೂಕುಗಳಿಂದ ದೂರಿಲ್ಲ:

ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳ ಬಗ್ಗೆ ಯಲ್ಲಾಪುರ ತಾಲೂಕು ಒಂದರಿAದಲೇ 7 ದೂರು ದಾಖಲಾಗಿವೆ. ಮದನೂರು ಗ್ರಾಪಂನಿಂದ 3, ಚಂದಗುಳಿ, ದೇಹಳ್ಳಿ, ಕಿರವತ್ತಿ ಹಾಗೂ ವಜ್ರಳ್ಳಿ ಗ್ರಾಪಂಗಳಿಂದ ತಲಾ 1 ದೂರು ದಾಖಲಾಗಿದೆ. ಭಟ್ಕದಿಂದ ಒಂದು ದೂರು ದಾಖಲಾಗಿದೆ. ಇತರ 10 ತಾಲೂಕುಗಳಿಂದ ಯಾವುದೇ ದೂರು ದಾಖಲಾಗಿಲ್ಲ ಎಂದು ಉದ್ಯೋಗ ಖಾತ್ರಿ ಯೋಜನೆಯ ವೆಬ್ ಸೈಟ್ ಮಾಹಿತಿ ನೀಡುತ್ತದೆ. 2024-25 ನೇ ಸಾಲು ಹಾಗೂ ಅದಕ್ಕಿಂತ ಹಿಂದೆ ಯಾವುದೇ ದೂರು ದಾಖಲಾಗಿಲ್ಲ ಎಂದು ಮಾಹಿತಿ ಹೇಳುತ್ತದೆ.

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಾಹಿತಿ, ಜಾಗೃತಿ ಕಾರ್ಯಕ್ರಮಕ್ಕಾಗಿಯೇ ಅನುದಾನ ಬರುತ್ತದೆ. ಅದಕ್ಕಾಗಿಯೇ ಇಐಸಿ ಸಂಯೋಜಕರನ್ನು ನಿಯೋಜಿಸಿಕೊಳ್ಳಲಾಗಿದೆ. ಆದರೆ, ಯಾವುದೇ ಸ್ಥಳಗಳಲ್ಲಿ ಒಂಬುಡ್ಸ್ಮನ್ ವ್ಯವಸ್ಥೆಯ ಬಗ್ಗೆ ಸಾರ್ವಜನಿಕರಿಗೆ ಎಲ್ಲೂ ಮಾಹಿತಿ ನೀಡದೇ ಇರುವುದು ಕಂಡುಬರುತ್ತದೆ. ಒಟ್ಟಾರೆ ಈ ವ್ಯವಸ್ಥೆಯ ಬಗ್ಗೆ ಹೆಚ್ಚು ದೂರುಗಳು ಬರದಂತೆ ಅಧಿಕಾರಿಗಳು ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿರುವುದು ಕಂಡುಬರುತ್ತದೆ.

ಕೃಷಿ ಹೊಂಡಕ್ಕೆ ಎರಡು ಬಾರಿ ಬಿಲ್ ಯಲ್ಲಾಪುರ ತಾಲೂಕಿನ ವಜ್ರಳ್ಳಿ ಗ್ರಾಮ ಪಂಚಾಯಿತಿಯ ತೇಲಂಗಾರ ಚಿಮ್ನಳ್ಳಿ ಎಂಬಲ್ಲಿ ಕೃಷಿ ಇಲಾಖೆಯಿಂದ 2017-18 ನೇ ಸಾಲಿನಲ್ಲಿ ನಿರ್ಮಾಣ ಮಾಡಿದ ಕೃಷಿ ಹೊಂಡಕ್ಕೆ 2024-25 ನೇ ಸಾಲಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ 1.46 ಲಕ್ಷ ರೂ. ಹಣ ವಿನಿಯೋಗಿಸಿರುವುದು ಪತ್ತೆಯಾಗಿದೆ. ಅದಕ್ಕಾಗಿ ಗ್ರಾಪಂ ಪಿಡಿಒ, ಅಧ್ಯಕ್ಷ, ತಾಪಂನ ತಾಂತ್ರಿಕ ಸಹಾಯಕಿ ಹಾಗೂ ಗ್ರಾಪಂ ಡೇಟಾ ಎಂಟ್ರಿ ಆಪರೇಟರ್‌ರಿಂದ ಅಕ್ರಮವಾಗಿ ಕಾಮಗಾರಿ ಮಾಡಿದ ಹಣ ವಸೂಲಿ ಮಾಡಲು ಒಂಬುಡ್ಸ್ಮನ್ ಆದೇಶ ಮಾಡಿದ್ದಾರೆ. ಅಲ್ಲದೇ ಮೂವರು ಅಧಿಕಾರಿಗಳಿಗೆ ತಲಾ 1 ಸಾವಿರ ರೂ. ದಂಡ ವಿಧಿಸಿ ಒಂಬುಡ್ಸ್ಮನ್ ಸಿ.ಟಿ.ನಾಯ್ಕ ಅವರು ಆದೇಶ ಮಾಡಿದ್ದು, ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ದಂಡ ಹಾಗೂ ಕಾಮಗಾರಿ ವೆಚ್ಚ ವಸೂಲು ಮಾಡುವಂತೆ ಶಿಫಾರಸು ಮಾಡಿದ್ದಾರೆ. ಯಲ್ಲಾಪುರ ತಾಲೂಕಿನ ಚಂದಗುಳಿ ಹಾಗೂ ದೇಹಳ್ಳಿ ಗ್ರಾಪಂಗಳಲ್ಲಿ ಅಕ್ರಮ ನಡೆದಿರುವುದು ಸಾಬೀತಾಗಿಲ್ಲ. ಆದರೆ, ಅಽಕಾರಿಗಳು ನಿಯಮ ಉಲ್ಲಂಘಿಸಿರುವುದು ಕಂಡುಬಂದಿದ್ದರಿಂದ ಅವರಿಗೆ ದಂಡ ವಿಧಿಸಿ ವಸೂಲು ಮಾಡುವಂತೆ ಒಂಬುಡ್ಸ್ಮನ್ ಶಿಫಾರಸು ಮಾಡಿದ್ದಾರೆ. ಭಟ್ಕಳ ತಾಲೂಕಿನ ಮಾವಳ್ಳಿಯಲ್ಲಿ ನಾಲ್ಕು ವರ್ಷಗಳ ಹಿಂದೆ ಮಾಡಿದ ರಸ್ತೆ ಕಾಮಗಾರಿಗೆ ಸಂಬಂಧಪಟ್ಟ ಗುತ್ತಿಗೆದಾರರಿಗೆ ಉಪಕರಣ ವೆಚ್ಚ ಬಿಡುಗಡೆ ವಿಳಂಬವಾಗಿದ್ದು, ಅದಕ್ಕಾಗಿ ತಾಪಂ ಅಽಕಾರಿಗಳಿಗೆ ಒಂಬುಡ್ಸ್ಮನ್ ದಂಡ ವಿಧಿಸಿದ್ದು, ಅದನ್ನು ಪಡೆಯುವಂತೆ ಆದೇಶಿಸಿದ್ದಾರೆ.

ಒಂಬುಡ್ಸ್ಮನ್ ಕಚೇರಿಯಲ್ಲಿ ದಾಖಲಾದ ದೂರುಗಳ ಬಗ್ಗೆ ಕಾಲಕಾಲಕ್ಕೆ ತನಿಖೆ ನಡೆಸಿ. ಶಿಫಾರಸು ಮಾಡಲಾಗಿದೆ. ಆದರೆ, ದಾಖಲಾದ ದೂರುಗಳು ಹಾಗೂ ವಹಿಸಿದ ಕ್ರಮಗಳ ಬಗ್ಗೆ ನೇರವಾಗಿ ಮಾಹಿತಿ ನೀಡಲು ಸಾಧ್ಯವಿಲ್ಲ. ಮಾಹಿತಿ ಹಕ್ಕಿನಲ್ಲಿ ಅರ್ಜಿ ಸಲ್ಲಿಸಿದರೆ ನೀಡಲಾಗುವುದು. ಸಿ.ಟಿ.ನಾಯ್ಕ ಒಂಬುಡ್ಸ್ಮನ್, ಎನ್‌ಆರ್‌ಇಜಿಎ ಉತ್ತರ ಕನ್ನಡ