ಚಿಕ್ಕಮಗಳೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿದ ಎನ್.ಆರ್.ಪುರ ತಾಲೂಕು ನೌಕರರ ಸಂಘದ ತಂಡ. ನಾಗರಾಜ್, ರಾಘವೇಂದ್ರ, ಗಿರೀಶ್ ನಾಯಕ್, ಭೋಗೇಶಪ್ಪ ಇತರರಿದ್ದರು. 
ಜಿಲ್ಲೆ

ಎನ್.ಆರ್.ಪುರ ತಂಡ ರಾಜ್ಯಮಟ್ಟಕ್ಕೆ

ಎಸ್.ಎನ್.ರವೀಂದ್ರ

ಎನ್.ಆರ್.ಪುರ: ಚಿಕ್ಕಮಗಳೂರಿನಲ್ಲಿ ಗುರುವಾರ ನಡೆದ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ತಾಲೂಕು ನೌಕರರ ಸಂಘ ವಾಲಿಬಾಲ್‌ನಲ್ಲಿ ಪ್ರಥಮ ಹಾಗೂ ನಿಷ್ಮಾ ಜೈನ್ ಷಟಲ್‌ಬ್ಯಾಡ್ಮಿಂಟನ್, ಕೂಚುಪುಡಿ ನೃತ್ಯ, ಕಥಕ್ಕಳಿ ನೃತ್ಯದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದರೆ ಎಂದು ಸಂಘದ ಅಧ್ಯಕ್ಷ ಎಚ್.ಮಂಜುನಾಥ್ ತಿಳಿಸಿದ್ದಾರೆ.

ಸತತ ಮೂರನೇ ಬಾರಿ ತಾಲೂಕು ಸಂಘದ ಕ್ರೀಡಾಪಟುಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಾಲಿಬಾಲ್ ತಂಡದ ನಾಯಕ ನಾಗರಾಜ್, ರಾಘವೇಂದ್ರ, ಗಿರೀಶ್ ನಾಯಕ್, ಭೋಗೇಶಪ್ಪ, ಜಿಬಿಎನ್ ಸ್ವಾಮಿ, ಸಾಗರ್, ಸುಭಾಷ್, ಅಭಿಜಿತ್, ರಂಜಿತ್, ಮಂಜುನಾಥ್, ರಂಗನಾಥ್, ಸುನಿಲ್ ಹಾಗೂ ಪುನೀತ್ ತಂಡದಲ್ಲಿದ್ದರು. ನಿಷ್ಮಾ ಜೈನ್ ಕೂಡ ಮತ್ತೊಮ್ಮೆ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.